Asianet Suvarna News Asianet Suvarna News

ಕೊಟ್ಟಿಗೆ ನಿರ್ಮಾಣಕ್ಕೆ ಲೋನ್ ಕೊಡದೇ 4 ವರ್ಷಗಳಿಂದ ಪಿಡಿಒ ಕಿರುಕುಳ; ಗ್ರಾಪಂ ಒಳಗೇ ಹಸು ಕಟ್ಟಿಹಾಕಿ ಪ್ರತಿಭಟಿಸಿದ ರೈತ!

ಕೊಟ್ಟಿಗೆ ನಿರ್ಮಾಣದ ಲೋನ್ ಕೊಡದೇ ನಾಲ್ಕು ವರ್ಷದಿಂದ ಸತಾಯಿಸುತ್ತಿದ್ದ ಪಿಡಿಓ ಕಿರುಕುಳಕ್ಕೆ ಬೇಸತ್ತು ರೈತನೊಬ್ಬ ಗ್ರಾಪಂ ಕಚೇರಿ ಒಳಗೆ ಹಸು ಕಟ್ಟಿ ಪ್ರತಿಭಟನೆ ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮಪಂಚಾಯ್ತಿಯಲ್ಲಿ ನಡೆದಿರುವ ಘಟನೆ. ಗೋಪಾಲಯ್ಯಾ ಹಸು ತಂದು ಕಟ್ಟಿಹಾಕಿ ಪ್ರತಿಭಟಿಸಿದ ರೈತ. 

A farmer protested by tying a cow at the Gram Panchayat office at tumakuru rav
Author
First Published Nov 30, 2023, 10:42 AM IST

ತುಮಕೂರು (ನ.30): ಕೊಟ್ಟಿಗೆ ನಿರ್ಮಾಣದ ಲೋನ್ ಕೊಡದೇ ನಾಲ್ಕು ವರ್ಷದಿಂದ ಸತಾಯಿಸುತ್ತಿದ್ದ ಪಿಡಿಓ ಕಿರುಕುಳಕ್ಕೆ ಬೇಸತ್ತು ರೈತನೊಬ್ಬ ಗ್ರಾಪಂ ಕಚೇರಿ ಒಳಗೆ ಹಸು ಕಟ್ಟಿ ಪ್ರತಿಭಟನೆ ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮಪಂಚಾಯ್ತಿಯಲ್ಲಿ ನಡೆದಿರುವ ಘಟನೆ. ಗೋಪಾಲಯ್ಯಾ ಹಸು ತಂದು ಕಟ್ಟಿಹಾಕಿ ಪ್ರತಿಭಟಿಸಿದ ರೈತ. 

ಬೆಂಗಳೂರು: GRINDR GAY ಆ್ಯಪ್ ನಲ್ಲಿ ಬಂದ 'ಆರ್ಡರ್' ನಿಂದ ರಾಬರಿ‌!

ನರೇಗ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸಾಸಲುಕುಂಟೆ ಗ್ರಾಮಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಿದ್ದ ರೈತ. ಯೋಜನೆಗೆ ಮನವಿ ಸಲ್ಲಿಸಿ ಅಲೆಯುತ್ತಿರವು ರೈತ ಗೋಪಾಲಯ್ಯ. ಕಳೆದ  ನಾಲ್ಕು ವರ್ಷಗಳಿಂದಲೂ ಲೋನ್ ನೀಡದೇ ಸತಾಯಿಸುತ್ತಿರುವ ಪಂಚಾಯಿತಿ ಪಿಡಿಒ. ನಾಲ್ಕು ವರ್ಷ ಅಲೆದು ಬೇಸತ್ತ ರೈತ ಕೊನೆ ಹಸುಗಳನ್ನು ಗ್ರಾಪಂ ಕಚೇರಿ ಒಳಗೇ ಕಟ್ಟುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ಯಾವುದೇ ಯೋಜನೆಗಳಿದ್ದರೆ ಪ್ರಭಾವಿಗಳ ಮನೆ ಬಾಗಿಲಿಗೆ ಬಿಲ್ ಮಾಡಿಕೊಡಲಾಗುತ್ತದೆ. ಅದೇ ಬಡವರನ್ನು ಮಾತ್ರ ಹೀಗೆ ಅಲೆದಾಡಿಸುತ್ತಾರೆ. ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಪಿಡಿಒ ವರ್ತನೆಗೆ ಎಂದು ಆಕ್ರೋಶ ಹೊರಹಾಕಿದ ರೈತ.

ಲಿಂಗ ಮರೆತು ಪ್ರೀತಿ ಮಾಡೋ ಸಲಿಂಗಿಗಳಿಗೆ ಸುಖಕ್ಕಿಂತ ಸಂಕಟಗಳೇ ಹೆಚ್ಚು!

Follow Us:
Download App:
  • android
  • ios