Asianet Suvarna News Asianet Suvarna News

ಬೆಂಗಳೂರು: GRINDR GAY ಆ್ಯಪ್ ನಲ್ಲಿ ಬಂದ 'ಆರ್ಡರ್' ನಿಂದ ರಾಬರಿ‌!

ಸಲಿಂಗಕಾಮಿಗಳ ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಪರಿತನಾಗಿದ್ದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದ ಯುವಕನಿಗೆ ಆ ವ್ಯಕ್ತಿ ಹಾಗೂ ಆತನ ಗ್ಯಾಂಗ್‌ ಹಲ್ಲೆಗೈದು ಸುಲಿಗೆ ಮಾಡಿ ಪರಾರಿ ಆಗಿರುವ ಘಟನೆ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Robbery from the order on the GRINDR GAY app at bengaluru rav
Author
First Published Nov 30, 2023, 10:20 AM IST

ಬೆಂಗಳೂರು (ನ..30): ಸಲಿಂಗಕಾಮಿಗಳ ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಪರಿತನಾಗಿದ್ದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದ ಯುವಕನಿಗೆ ಆ ವ್ಯಕ್ತಿ ಹಾಗೂ ಆತನ ಗ್ಯಾಂಗ್‌ ಹಲ್ಲೆಗೈದು ಸುಲಿಗೆ ಮಾಡಿ ಪರಾರಿ ಆಗಿರುವ ಘಟನೆ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಡುಗೋಡಿಯ ಓಂಶಕ್ತಿನಗರದಲ್ಲಿ ನ.22ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ನದೀಮ್‌(29) ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿ ಫರಾನ್‌ ಹಾಗೂ ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಲಿಂಗ ಮರೆತು ಪ್ರೀತಿ ಮಾಡೋ ಸಲಿಂಗಿಗಳಿಗೆ ಸುಖಕ್ಕಿಂತ ಸಂಕಟಗಳೇ ಹೆಚ್ಚು!

ಏನಿದು ಘಟನೆ?

ಸಂತ್ರಸ್ತ ನದೀಮ್‌ಗೆ ಇತ್ತೀಚೆಗೆ ‘ಗ್ರಿಂಡರ್‌’ ಎಂಬ ‘ಗೇ’ ಡೇಟಿಂಗ್‌ ಆ್ಯಪ್‌ನಲ್ಲಿ ಫರಾನ್‌ ಎಂಬಾತ ಪರಿಚಿತನಾಗಿದ್ದ. ನ.22ರಂದು ಸಂಜೆ 4 ಗಂಟೆ ಸುಮಾರಿಗೆ ನದೀಮ್‌, ಫರಾನ್‌ನನ್ನು ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಇಬ್ಬರೂ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಫರಾನ್‌ ವಾಶ್‌ ರೂಮ್‌ಗೆ ತೆರಳಿದ್ದಾನೆ. ಇದೇ ಸಮಯಕ್ಕೆ ನಾಲ್ಕೈದು ಮಂದಿ ಅಪರಿಚಿತರು ನದೀಮ್‌ ಅವರ ಮನೆಯ ಬಾಗಿಲು ಕುಟ್ಟಿ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಇದರಿಂದ ಆತಂಕಗೊಂಡ ನದೀಮ್‌, ತಕ್ಷಣ ವಾಶ್‌ ರೂಮ್‌ನ ಬಾಗಿಲಿಗೆ ಚಿಲಕ ಹಾಕಿದ್ದಾನೆ. ಬಳಿಕ ಇಲ್ಲಿಂದ ಹೊರಡಿ. ಇಲ್ಲವಾದರೆ, ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಸಿದ್ದಾನೆ.

ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹ ಅಮಾನ್ಯ ಆದೇಶಕ್ಕೆ, ಕನ್ನಡದ ಕಥೆಗಾರ ವಸುಧೇಂದ್ರ ಬೇಸರ!

ಇದೇ ಸಮಯಕ್ಕೆ ವಾಶ್‌ ರೂಮ್‌ನಲ್ಲಿದ್ದ ಫರಾನ್‌ ಹೊರಗೆ ಬರಲು ಪ್ರಯತ್ನಿಸಿದ್ದಾನೆ. ಹೊರಗೆ ಬರಬೇಡ ಎಂದರೂ ಫರಾನ್‌ ವಾಶ್‌ ರೂಮ್‌ ಬಾಗಿಲು ಮುರಿದು ಹೊರಗೆ ಬಂದು ಮನೆಯ ಬಾಗಿಲು ತೆರೆದು ಹೊರಗೆ ಹೋಗಿದ್ದಾನೆ. ಈ ವೇಳೆ ಮನೆಗೆ ಹೊರಗೆ ನಿಂತಿದ್ದ ಆರು ಮಂದಿ ಅಪರಿಚಿತರು ಮನೆಗೆ ನುಗ್ಗಿ ನದೀಮ್‌ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಯುಪಿಐ ಮುಖಾಂತರ ₹2 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ದುಬಾರಿ ವಾಚ್‌, 45  ಸಾವಿರ ಮೌಲ್ಯದ  ಮೊಬೈಲ್‌, ಬೆಳ್ಳಿಯ ಉಂಗರ ಸೇರಿದಂತೆ ಕೆಲ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios