Asianet Suvarna News Asianet Suvarna News

ರಾಜ್ಯದಲ್ಲಿ 900 ಹೊಸ ಮದ್ಯದಂಗಡಿ ತೆರೆಯಲು ಒಪ್ಪಿಗೆ

ರಾಜ್ಯದಲ್ಲಿ ಹೊಸದಾಗಿ 900 ಮದ್ಯದಂಗಡಿ ತೆರೆಯಲು ಒಪ್ಪಿಗೆ ನೀಡಲಾಗಿದೆ. ಸ್ಥಳಾಂತರಕ್ಕೂ ಅವಕಾಶ ನೀಡಿ ಅಬಕಾರಿ ಇಲಾಖೆಯಿಂದ ತಿದ್ದುಪಡಿ ತರಲಾಗಿದೆ.

900 liquor Shops will open soon in Karnataka
Author
Bengaluru, First Published Aug 27, 2020, 7:44 AM IST
  • Facebook
  • Twitter
  • Whatsapp

ಬೆಂಗಳೂರು (ಆ.27):  ರಾಜ್ಯ ಸರ್ಕಾರ 900 ಹೊಸ ಎಂಎಸ್‌ಐಎಲ್‌ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಅಧಿಕೃತ ಆದೇಶ ಹೊರಡಿಸಿದೆ. ಅಲ್ಲದೆ, ಹಾಲಿ ಇರುವ 463 ಎಂಎಸ್‌ಐಎಲ್‌ ಮಳಿಗೆಗಳನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ ಒಂದು ಗ್ರಾಮ ಪಂಚಾಯ್ತಿಯಿಂದ ಮತ್ತೊಂದು ಗ್ರಾಮ ಪಂಚಾಯ್ತಿಗೆ ಸ್ಥಳಾಂತರಿಸಲು ಅವಕಾಶ ನೀಡಿ ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದಿದೆ.

ಮೇ ತಿಂಗಳಲ್ಲಿ ಕರ್ನಾಟಕ ಅಬಕಾರಿ ನಿಯಮ -2020ಕ್ಕೆ ತಿದ್ದುಪಡಿ ತರಲು ಆದೇಶ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಬುಧವಾರ ಆದೇಶ ಹೊರಡಿಸಿರುವ ರಾಜ್ಯ ಹಣಕಾಸು (ಅಬಕಾರಿ) ಇಲಾಖೆಯು ಮುಂದಿನ ಗೆಜೆಟ್‌ ಅಧಿಸೂಚನೆ ಪ್ರಕಟವಾಗುವ ದಿನಾಂಕದಿಂದ ಅನ್ವಯವಾಗುವಂತೆ 1967ರ ಕರ್ನಾಟಕ ಅಬಕಾರಿ ನಿಯಮಗಳ ಕಾಯಿದೆಗೆ ತಿದ್ದುಪಡಿ ತಂದು ನಿಯಮ 23ಕ್ಕೆ ಎರಡು ಹೊಸ ನಿಯಮಗಳನ್ನು ಸೇರ್ಪಡೆ ಮಾಡಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಮದ್ಯ ಮಾರಾಟ ಭಾರೀ ಇಳಿಕೆ...

2016ರಲ್ಲಿ ಕಾಂಗ್ರೆಸ್‌ ಸರ್ಕಾರ 900 ಹೊಸ ಎಂಎಸ್‌ಐಎಲ್‌ನ ಸಿಎಲ್‌-11 (ಸಿ) (ಸರ್ಕಾರಿ ಮದ್ಯ ಮಾರಾಟ ಮಳಿಗೆ) ತೆರೆಯಲು ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಅಂದಿನ ಸರ್ಕಾರ ಪ್ರಸ್ತಾವನೆ ಕೈ ಬಿಟ್ಟಿತ್ತು. ಇದೀಗ ರಾಜ್ಯ ಸರ್ಕಾರ ಕೊರೋನಾ ಸಂಕಷ್ಟದಿಂದಾದ ಆರ್ಥಿಕ ನಷ್ಟಭರ್ತಿಗೆ ಮತ್ತೊಮ್ಮೆ 900 ಮಳಿಗೆ ಸ್ಥಾಪನೆ ಸಂಬಂಧ ಆದೇಶ ಹೊರಡಿಸಿದೆ.

ಇನ್ನು, ಈ ಆದೇಶದಲ್ಲಿ 900 ಸಿಎಲ್‌-11 (ಸಿ) ಮಳಿಗೆಗಳನ್ನು ಸಂಬಂಧಪಟ್ಟವಿಧಾನಸಭಾ ಕ್ಷೇತ್ರದಲ್ಲಿ ಒಂದು ಗ್ರಾಮ ಪಂಚಾಯ್ತಿಯಿಂದ ಮತ್ತೊಂದು ಗ್ರಾಮ ಪಂಚಾಯ್ತಿಗೆ ಸ್ಥಳ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಶಾಸಕರ ವಿವೇಚನೆಯಂತೆ ಮಳಿಗೆ ತೆರೆಯುವ ಸ್ಥಳ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ.

'ಮನೆ, ಅಂಗಡಿಗಳಲ್ಲಿ ಮದ್ಯ ಮಾರಿದ್ರೆ ಎಚ್ಚರ'..

ಅಷ್ಟೇ ಅಲ್ಲದೆ ಹಾಲಿ ಇದ್ದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) 463 ಮಳಿಗೆಗಳನ್ನು ಜಿಲ್ಲೆಯ ಒಳಗೆ ಒಂದು ಗ್ರಾಮ ಪಂಚಾಯ್ತಿಯಿಂದ ಮತ್ತೊಂದು ಗ್ರಾಮ ಪಂಚಾಯ್ತಿಗೆ ವ್ಯಾಪ್ತಿಗೆ ಸ್ಥಳಾಂತರಿಸಲು ಸಹ ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios