Asianet Suvarna News Asianet Suvarna News

'ಮನೆ, ಅಂಗಡಿಗಳಲ್ಲಿ ಮದ್ಯ ಮಾರಿದ್ರೆ ಎಚ್ಚರ'

ಮದ್ಯ ಮಾರಾಟ ಮಾಡಿದ್ರೆ ಎಚ್ಚರ! ಅಬಕಾರಿ ಸಚಿವರು ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮದ್ಯ ಮಾರಾಟದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

excise Minister warns illegal liquor sale
Author
Bengaluru, First Published Aug 26, 2020, 1:56 PM IST

ನೆಲಮಂಗಲ (ಆ.26): ಅಕ್ರಮವಾಗಿ ಮನೆ ಅಂಗಡಿಗಳಲ್ಲಿ ಮದ್ಯ ಮಾರಾಟ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡು, ಈ ವಿಚಾರದಲ್ಲಿ ಅಧಿಕಾರಿಗಳು ಶಾಮೀಲಾದರೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗುತ್ತೇವೆ. ಶೀಘ್ರದಲ್ಲಿ ಕ್ಲಬ್‌, ಪಬ್‌ ಓಪನ್‌ ಮಾಡಲಿದ್ದೇವೆ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದ್ದಾರೆ.

ಪಟ್ಟಣದ ಕೆಬಿಡಿ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿ, ಕ್ಲಬ್‌, ಪಬ್‌ ತೆರೆಯುವ ವಿಚಾರದಲ್ಲಿ ಸಿಎಂ ಜೊತೆಗೆ ಚರ್ಚೆ ನಡೆಸುವೆ, ಅದಷ್ಟುಬೇಗ ಬಾರ್‌ ಮತ್ತು ಪಬ್‌ ಓಪನ್‌ ಹಾಗಲಿದ್ದು, ಅಲ್ಲದೆ ಹೀಗಾಗಲೇ ಕಾರ್ಮಿಕರಿಗೆ ತೊಂದರೆಯಾಗಿರುವುದನ್ನು ಸರಿಪಡಿಸುತ್ತೇವೆ. ಇಂದಿನಿಂದ ಕ್ಲಬ್‌ಗಳಲ್ಲಿ ಸ್ಪೋಟ್ಸ್‌ರ್‍ ಆಕ್ಟಿವಿಟಿ ಆರಂಭವಾಗಿದೆ. ಅಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಡಿಲಗೊಳ್ಳಲಿದೆ.

ಶೀಘ್ರ ಬಾರ್‌, ಪಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವ​ಕಾಶ?...

ಮಾರಾಣಾಂತಿಕ ಕೋವಿಡ್‌ 19 ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಗೆ ಲಾಕ್‌ಡೌನ್‌ನಿಂದ ಸುಮಾರು 3000 ಕೋಟಿ ನಷ್ಟವಾಗಿತ್ತು. ಈಗ ಅದು 2000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮನೆ ಮನೆಗೆ ಮದ್ಯ ಸರಬರಾಜು ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಬೇರೆ ರಾಜ್ಯದ ಅನಿಸಿಕೆ ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಕೈಗೊಳ್ಳುತ್ತೇವೆ ಎಂದರು. ಸಂದರ್ಭದಲ್ಲಿ ಅಧಿಕಾರಿಗಳ ತಂಡ ಹಾಗೂ ಮತ್ತಿತರರು ಇದ್ದರು.

Follow Us:
Download App:
  • android
  • ios