ಬಾಂಗ್ಲಾದೇಶಕ್ಕೆ 600 ಟನ್‌ ಕೆನೆರಹಿತ ಹಾಲಿನ ಪುಡಿ  ರಪ್ತು  ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ಸತೀಶ್‌ ಮಾಹಿತಿ  ಹಾಲಿನ ಪುಡಿ ಹೊತ್ತ ರಫ್ತು ವಾಹನಗಳಿಗೆ ಹಸಿರು ನಿಶಾನೆ 

ಕನಕಪುರ (ಜೂ.16):  ಬೆಂಗಳೂರು ಹಾಲು ಒಕ್ಕೂಟ(ಬಮೂಲ್‌)ದ ವತಿಯಿಂದ ನೆರೆ ರಾಷ್ಟ್ರ ಬಾಂಗ್ಲಾದೇಶಕ್ಕೆ 600 ಟನ್‌ ಕೆನೆರಹಿತ ಹಾಲಿನ ಪುಡಿಯನ್ನು ರಪ್ತು ಮಾಡಲಾಗುತ್ತಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ಸತೀಶ್‌ ತಿಳಿಸಿದರು. 

ದನದ ಹಾಲಿನ ಬದಲು ಸೋಯಾ ಹಾಲು ಸೇವಿಸಿ .. ಮ್ಯಾಜಿಕ್ ನೀವೇ ನೋಡಿ

ತಾಲೂಕಿನ ಶಿವನಹಳ್ಳಿ ಬಳಿ ಇರುವ ಮೆಗಾ ಡೇರಿಯ ಆವರಣದಲ್ಲಿ ಹಾಲಿನ ಪುಡಿ ಹೊತ್ತ ರಫ್ತು ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಬಮೂಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಕ್ಕೆ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯ ಯಶಸ್ಸು ಆಗಲು ಡೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶ್ರಮ ಮತ್ತು ಬಮೂಲ್‌ ನಿರ್ದೇಶಕರ ರೈತಪರ ಚಿಂತನೆಗಳೇ ಕಾರಣ ಎಂದರು.

ಹಾಲು ಸೇರಿ ಆಹಾರ ವಸ್ತುಗಳು ಹಾಳಾಗದಂತೆ ತಡಯಲಿವೆ ಪರಿಹಾರ!

ರಾಜ್ಯದ ಹದಿನಾಲ್ಕು ಒಕ್ಕೂಟಗಳ ಪೈಕಿ ಬೆಂಗಳೂರು ಹಾಲು ಒಕ್ಕೂಟವು ಇನ್ನೂರು ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದೆ. ಒಕ್ಕೂಟದ ವತಿಯಿಂದ ಉತ್ಪಾದನೆಯಾಗುವ ಯು.ಎಸ್‌ಡಿ.(ಟೋನಡ್‌ ಮಿಲ್ಕ…) ಹಾಲನ್ನು 2015 ರಿಂದ ಹತ್ತೊಂಬತ್ತು ಹೊರ ರಾಷ್ಟ್ರ ಗಳಿಗೆ ರಪ್ತು ಮಾಡುವ ಮೂಲಕ 50 -60 ಕೋಟಿ ರು. ವಹಿವಾಟು ನಡೆಸಲಾಗಿದೆ.

ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಸಹಕಾರ, ಸಲಹೆ ಜೊತೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ 2025ರ ವೇಳೆಗೆ ಸುಮಾರು 250 ಕೋಟಿ ರು. ರಪ್ತು ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.