ಬೆಂಗಳೂರು(ಆ.01): ರಾಜ್ಯದಲ್ಲಿ ಭೀಕರವಾಗಿ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ಶುಕ್ರವಾರ ಒಂದೇ ದಿನ ಮತ್ತೆ 5,483 ಮಂದಿಗೆ ಸೋಂಕು ಹರಡಿದೆ. ಇದೇ ದಿನ ಸೋಂಕಿನಿಂದ ಗುಣಮುಖರಾಗಿ 3,130 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಇದರ ನಡುವೆ 84 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದರೊಂದಿಗೆ ರಾಜ್ಯದ ಈ ವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾದರೆ, ಇದರಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 49,788 ತಲುಪಿದೆ. ಇನ್ನು, ಕೊರೋನಾ ಸೋಂಕಿಗೆ ಇದುವರೆಗೂ ಬಲಿಯಾದವರ ಸಂಖ್ಯೆ 2,314ಕ್ಕೆ (ಎಂಟು ಅನ್ಯ ಕಾರಣದ ಸಾವು ಹೊರತುಪಡಿಸಿ) ಕ್ಕೇರಿದೆ.

ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ

ಉಳಿದ 72,005 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳು ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಗಂಭೀರ ಸಮಸ್ಯೆ ಹೊಂದಿರುವ 609 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ 2220 ಪ್ರಕರಣ:

ಶುಕ್ರವಾರ ಒಂದೇ ದಿನ ರಾಜಧಾನಿ ಬೆಂಗಳೂರಿನಲ್ಲಿ 2,220 ಮಂದಿಗೆ ಸೋಂಕು ಹರಡಿದೆ. ಉಳಿದಂತೆ ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣ ಕನ್ನಡ ಮತ್ತು ಮೈಸೂರು 204, ಧಾರವಾಡ 180, ಶಿವಮೊಗ್ಗ 158, ಕಲಬುರಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ 105, ಬೀದರ್‌ 104, ಹಾಸನ 100, ತುಮಕೂರು 95, ಉತ್ತರ ಕನ್ನಡ ಮತ್ತು ಗದಗದಲ್ಲಿ ತಲಾ 92, ರಾಮನಗರ 89, ಬಾಗಲಕೋಟೆ 88, ಚಿಕ್ಕಮಗಳೂರು 74, ಮಂಡ್ಯ 65, ಹಾವೇರಿ 57, ಯಾದಗಿರಿ 56, ಚಿಕ್ಕಬಳ್ಳಾಪುರ 48, ಚಾಮರಾಜ ನಗರ 44, ಕೊಪ್ಪಳ 38, ಚಿತ್ರದುರ್ಗ 35, ಕೋಲಾರ 32 ಹಾಗೂ ಕೊಡಗಿನಲ್ಲಿ 30 ಮಂದಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಎಲ್ಲೆಲ್ಲಿ ಎಷ್ಟುಸಾವು: ಶುಕ್ರವಾರ ವರದಿಯಾದ 84 ಸೋಂಕಿತರ ಸಾವಿನ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 20, ದಕ್ಷಿಣ ಕನ್ನಡ 10, ಧಾರವಾಡ 7, ಕಲಬುರಗಿ 6, ಬೆಳಗಾವಿ, ಮೈಸೂರು ಮತ್ತು ವಿಜಯಪುರ ತಲಾ 5, ಶಿವಮೊಗ್ಗ ಮತ್ತು ತುಮಕೂರು 4, ಗದಗ ಮತ್ತು ಕೊಡಗು ತಲಾ 3, ದಾವಣಗೆರೆ, ರಾಯಚೂರು ಮತ್ತು ಬೀದರ್‌ ತಲಾ 2, ಹಾಸನ, ಉತ್ತರ ಕನ್ನಡ, ರಾಮನಗರ, ಬಾಗಲಕೋಟೆ, ಯಾದಗಿರಿ ಮತ್ತು ಚಾಮರಾಜ ನಗರದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 19 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಉಳಿದ 63 ಮಂದಿ ಐಎಲ್‌ಐ, ಸಾರಿ ಮತ್ತು ಇತರೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಹೇಳಿದೆ.