Asianet Suvarna News Asianet Suvarna News

ಸಫಾಯಿ ಕರ್ಮಚಾರಿಗಳು ಮೃತರಾದರೆ 30 ಲಕ್ಷ ರು. ಪರಿಹಾರ

ಕೊರೋನಾ ಮಹಾಮಾರಿ ಅಟ್ಟಹಾಸವಿದ್ದು, ಈ ವೇಳೆ ಸಫಾಯಿ ಕರ್ಮಾಚಾರಿಗಳು ಮೃತಪಟ್ಟರೆ ಅವರಿfಎ 30 ಲಕ್ಷ ಪರಿಹಾರ ನೀಡುವ ಬಗ್ಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

30 Lakh Compensation for scavengers Death
Author
Bengaluru, First Published Aug 28, 2020, 10:04 AM IST

ಬೆಂಗಳೂರು (ಆ.28): ಸಫಾಯಿ ಕರ್ಮಚಾರಿಗಳು ಕೋವಿಡ್‌ ಕರ್ತವ್ಯ ನಿರತರಾಗಿದ್ದ ಅವಧಿಯಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಡಿ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಮೂರನೇ ರಾಜ್ಯಮಟ್ಟದ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟರೆ ಅವಲಂಬಿತರಿಗೆ 30 ಲಕ್ಷ ರು. ಪರಿಹಾರ ನೀಡಬೇಕು. ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಡಿ ಒಬ್ಬರಿಗೆ ನೌಕರಿ ನೀಡಬೇಕು. ಪೌರಕಾರ್ಮಿಕರು ಕೋವಿಡ್‌ ಸೋಂಕಿತರಾದರೆ ಕ್ವಾರಂಟೈನ್‌ ಅವಧಿಯಲ್ಲಿ ವೇತನ ನೀಡಬೇಕು. ಆರೋಗ್ಯ ಸುಧಾರಣೆಯಾದ ನಂತರ ಅವರನ್ನು ನೌಕರಿಯಲ್ಲಿ ಮುಂದುವರಿಸಬೇಕು. ಸ್ಯಾನಿಟೈಜರ್‌, ಮಾಸ್ಕ್‌ ಸೇರಿದಂತೆ ಇತರೆ ಅಗತ್ಯ ಪೂರಕ ಪರಿಕರಗಳನ್ನು ನೀಡಬೇಕು ಎಂದರು.

'ರೈತರೇ ಚೀನಾದ ಬೀಜದ ಪೊಟ್ಟಣ ಬಂದರೆ ದೂರು ಕೊಡಿ'..

ಹೈದರಾಬಾದ್‌ ಮತ್ತು ಕೇರಳ ರಾಜ್ಯದಲ್ಲಿ ಮ್ಯಾನ್‌ಹೋಲ್‌ ಸೆಪ್ಟಿಕ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಅಳವಡಿಸಿಕೊಂಡಿರುವ ತಂತ್ರಜ್ಞಾನವುಳ್ಳ ಯಂತ್ರೋಪಕರಣಗಳನ್ನು ರಾಜ್ಯದಲ್ಲಿಯೂ ಸಹ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಿಗಳು ನಿರ್ವಹಿಸುವ ಕಾರ್ಯವನ್ನು ಮೇಲ್ವಿಚಾರಣೆ ಮಾಡಿ, ಸೂಕ್ತ ಸಲಹೆಗಳನ್ನು ನೀಡಬೇಕು. ಈ ಕಾಯ್ದೆಯನ್ವಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ 30,034 ಅನೈರ್ಮಲ್ಯ ಶೌಚಾಲಯಗಳನ್ನು ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ 12 ಜಿಲ್ಲೆಗಳ ವಿಶೇಷ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ನಗರ ಪ್ರದೇಶದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಈ ನಿಗಮದ ಮೂಲಕ 3210 ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು. ಈ ಅಧಿನಿಯಮವನ್ನು ಅನುಷ್ಠಾನಗೊಳಿಸುವುದಕ್ಕಾಗಿ ಸಂಬಂಧಪಟ್ಟಎಲ್ಲಾ ಏಜೆನ್ಸಿಗಳ ಪ್ರಕಾರ್ಯಗಳನ್ನು ಸಮನ್ವಯಗೊಳಿಸಿ ಅದರ ಜತೆಗೆ ಪ್ರಾಸಂಗಿಕವಾಗಿ ಸಂಬಂಧಪಟ್ಟಇತರೆ ಎಲ್ಲಾ ವಿಷಯಗಳ ಮೇಲ್ವಿಚಾರಣೆ ಮಾಡಬೇಕು. ಪೌರ ಕಾರ್ಮಿಕರು, ಸ್ವೀಪರ್‌ಗಳ ಬ್ಯಾಕ್‌ಲಾಗ್‌ ನೇಮಕಾತಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಪೌರಕಾರ್ಮಿಕರ ಆಟೋ ಟಿಪ್ಪರ್‌ಗಳನ್ನು ಕಸ ವಿಲೇವಾರಿ ಮತ್ತಿತರ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕು ಎಂದರು.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಎಫ್‌ಡಿಐಗೆ ಉತ್ತೇಜನ..

ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಶೇ.5ರಷ್ಟುಸೀಟುಗಳನ್ನು ಮೀಸಲಿಟ್ಟು, ಸಫಾಯಿ ಕರ್ಮಚಾರಿ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಪ್ರವೇಶಾಕಾಶ ಕಲ್ಪಿಸಲಾಗುತ್ತಿದೆ. ಮ್ಯಾನ್ಯುಯಲ್‌ ಸ್ಕಾ್ಯವೆಂಜಿಂಗ್‌ ಕಾರ್ಯನಿರ್ವಹಿಸುವ ವೇಳೆ ಮೃತಪಟ್ಟ83 ಕಾರ್ಮಿಕರ ಕುಟುಂಬದ ಅವಲಂಬಿತರಿಗೆ ಸುಪ್ರೀಂಕೋರ್ಟ್‌ ತೀರ್ಪಿನನ್ವಯ 10 ಲಕ್ಷ ರು. ಅನ್ನು ಸಂಬಂಧಪಟ್ಟವರಿಗೆ ಮಂಜೂರು ಮಾಡಿಸಿಕೊಡಲಾಗುವುದು. ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಡಬ್ಯೂಎಸ್‌ಎಸ್‌ಬಿ ಸಹಯೋಗದೊಂದಿಗೆ 170 ಜನರಿಗೆ ಮ್ಯಾನ್ಯುಯಲ್‌ ಸ್ಕಾ್ಯವೆಂಜರ್‌ ಮತ್ತು ಖಾಸಗಿ ಸ್ವಚ್ಛತಾಗಾರರಿಗೆ ತಂತ್ರಜ್ಞಾನವುಳ್ಳ ಯಂತ್ರೋಪಕರಣಗಳ ಸಹಾಯದಿಂದ ಸ್ವಚ್ಛಗೊಳಿಸುವ ಬಗ್ಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios