ನವದೆಹಲಿ (ಆ.28): ರಾಜ್ಯದ ಕೆಲಭಾಗದಲ್ಲಿ ರೈತರಿಗೆ ಅನಾಮಧೇಯ ವ್ಯಕ್ತಿಗಳಿಂದ ಕಳಪೆ ಬೀಜದ ಪೊಟ್ಟಣ ರವಾನೆಯಾಗುತ್ತಿದೆ ಎಂಬ ಬಗ್ಗೆ ನಮಗೆ ಮಾಹಿತಿ ದೊರಕಿದ್ದು ಇದು ಚೀನಾದಿಂದ ಬಂದಿರುವ ಬಗ್ಗೆ ಶಂಕೆ ಇದೆ ಎಂಬುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗದಲ್ಲಿ ಇಂಧದ್ದೊಂದು ಪ್ರಕರಣ ಪತ್ತೆಯಾಗಿದ್ದು, ಈ ಬೀಜದ ಪ್ಯಾಕೇಟ್‌ಗಳನ್ನು ನಮ್ಮ ರೈತರು ಈತನಕ ಬಳಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

ಕೊಪ್ಪಳ: ಸುಳ್ಳು ಮಾಹಿತಿ ನೀಡಿ ಪೇಚಿಗೆ ಸಿಲುಕಿದ ರೈತ!.

ಈ ಬಗ್ಗೆ ಕೇಂದ್ರದಿಂದಲೂ ಪತ್ರ ಬಂದಿದ್ದು, ನಮ್ಮನ್ನು ಎಚ್ಚರಿಸುವ ಕಾರ್ಯವನ್ನು ಕೂಡ ಕೇಂದ್ರ ಮಾಡಿದ್ದು ಕೇಂದ್ರ ಸರ್ಕಾರದಿಂದಲೇ ತನಿಖೆ ನಡೆಯುತ್ತಿದೆ. ನಮ್ಮ ಕೃಷಿ ಅಧಿಕಾರಿಗಳು ಈಗಾಗಲೇ ಫೀಲ್ಡಿಗಿಳಿದು ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂಥ ಪ್ಯಾಕೇಚ್‌ ಬಂದ್ರೆ ರೈತರು ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬಹುದು ಎಂದು ಹೇಳಿದರು.

ರೈತರಿಗೆ ಸರ್ಕಾರದಿಂದ ಬಂಪರ್ ಕೊಡುಗೆ...

ಇದೇವೇಳೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿರುವ 82 ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು ಮೈಸೂರಿನಲ್ಲಿ ಗೊಬ್ಬರದ ಕಲಬೆರಕೆ ಮಾಡುತ್ತಿದ್ದ ಅಡ್ಡೆಯ ಮೇಲೆ ಮೇಲೆ ಕೃಷಿ ಅಧಿಕಾರಿಗಳು ದಾಳಿ ಮಾಡಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಬಿ.ಸಿ ಪಾಟೀಲ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ, ಕೃಷಿ ಮತ್ತು ರೈತ ಅಭಿವೃದ್ಧಿ ಖಾತೆ ಸಚಿವ ನರೇಂದ್ರ ಸಿಂಗ್‌ ತೋಮರ್‌ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಇಲಾಖೆಗೆ ಸಂಬಂಧಿಸಿದ ರಾಜ್ಯದ ಪ್ರಸ್ತಾವನೆಗಳಿಗೆ ಮಂಜೂರಾತಿಗಾಗಿ ಸಹಕಾರ ಕೋರಿದರು.