Asianet Suvarna News Asianet Suvarna News

2024 ಜಗತ್ತಿಗೇ ಒಳ್ಳೆದಲ್ಲ! ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!

ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವವಿದೆ 2024 ಜಗತ್ತಿಗೆ ಕಂಟಕವಾಗಲಿದೆ ಎಂದು ಗದಗನಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

2024 is not good for the world  Kodimath swamiji is an explosive predict at gadag rav
Author
First Published Jan 26, 2024, 6:34 PM IST

ಗದಗ (ಜ.26): ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವವಿದೆ 2024 ಜಗತ್ತಿಗೆ ಕಂಟಕವಾಗಲಿದೆ ಎಂದು ಗದಗನಲ್ಲಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಕಳೆದ ವರ್ಷಗಳಿಂದ ಈ ಬಾರಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದಿರುವ ಸ್ವಾಮೀಜಿ, ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರು ತೊಂದರೆಗೊಳಗಾಗುತ್ತಾರೆ. ಬಾಂಬ್ ಸಿಡಿದು ನೂರಾರು ಜನರು ಅಸುನೀಗುವ ಸಾಧ್ಯತೆಯಿದೆ. ಅಲ್ಲದೇ ಇದರೊಂದಿಗೆ ಪ್ರಕೃತಿ ಮುನಿದು ಭೂಕಂಪ, ಜಲಕಂಟಕ ಎದುರಾಗುತ್ತದೆ ಎಂದು ಮುಂಬರುವ ದಿನಗಳು ಭಯಾನಕವಾಗಿರಲಿವೆ ಎಂದು ಎಚ್ಚರಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಡಿಮಠದ ಶ್ರೀಗೆ ಆಹ್ವಾನ!

ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವು:

2024ರ ವರ್ಷ ಭಯಾನಕ ಅನುಭವನ್ನು ನೀಡಲಿದೆ. ಈ ವರ್ಷ ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಅವಕಾಶವಿದೆ. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ. ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ. 

ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?

Follow Us:
Download App:
  • android
  • ios