ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್ ಅಥವಾ ಪ್ಯಾಲೆಸ್ತೇನ್?
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧವನ್ನು ನೋಡುತ್ತಿದ್ದರೆ, ಕೋಡಿ ಮಠದ ಸ್ವಾಮೀಜಿ ನುಡಿದ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ನಿಜವಾಗುವುದೇ ಎಂಬ ಅನುಮಾನ ಕಂಡುಬರುತ್ತಿವೆ.
ಬೆಂಗಳೂರು (ಅ.09): ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧವನ್ನು ನೋಡುತ್ತಿದ್ದರೆ, ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆ ನುಡಿದ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ನಿಜವಾಗುವುದೇ ಎಂಬ ಅನುಮಾನ ಕಂಡುಬರುತ್ತಿವೆ.
'ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ ಎಂದು ಹಾಸನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಈ ಭವಿಷ್ಯ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧದಲ್ಲಿ ಒಂದು ದೇಶ ಭೂಪಟದಿಂದ ಕಣ್ಮರೆಯಾಗುವ ಭವಿಷ್ಯವನ್ನು ನಿಜ ಮಾಡುವುದೇ ಎಂಬ ಅನುಮಾನ ಕಾಡುತ್ತಿದೆ.
ಕಾಲಜ್ಞಾನದ ಯಾವುದೇ ಭವಿಷ್ಯ ಸುಳ್ಳಾಗಿಲ್ಲವೆಂದು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕಳೆದ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಎಂದು ಹೇಳಿದ್ದರು. ಕೋಡಿ ಶ್ರೀಗಳ ಭವಿಷ್ಯ ಮತ್ತೆ ನಿಜವಾಗುತ್ತಿದೆ ಎಂಬಂತೆ ಇಸ್ರೇಲ್- ಪ್ಯಾಲೆಸ್ತೇನ್ ಯುದ್ಧ ಆರಂಭವಾಗಿದೆ.
ಮಸೀದಿಗಳಲ್ಲಿ ಅಡಗಿಕೊಂಡ ಹಮಾಸ್ ಉಗ್ರರ ಮೇಲೆ ಬಾಂಬ್, ಸೋಮವಾರ ಒಂದೇ ದಿನ 1149 ಏರ್‌ಸ್ಟ್ರೈಕ್!
ಕಳೆದ ವರ್ಷ ಭವಿಷ್ಯ ನಡಿದಂತೆ 'ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ' ಎಂದಿದ್ದರು. ಮುಂದೆ ಜಾಗತಿಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗಲಿದೆ. ಎರಡು, ಮನುಷ್ಯರು ದೈವ ಭಕ್ತಿಯಿಂದ ನಂಬಿಕೆಯಿಂದ ಇರುವುದು ಬಹಳ ಮುಖ್ಯ ಎಂದು ಸಲಹೆ ನೀಡಿದ್ದರು. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು ಎಂದು ಹೇಳಿದ್ದರು.
ಇನ್ನು ಜಾಗತಿಕ ಮಟ್ಟದಲ್ಲಿ ಪ್ಯಾಲೆಸ್ತೇನ್ ಭಾಗವಾಗಿದ್ದ ಇಸ್ರೇಲ್ ಒಕ್ಕೂಟವು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದು 60 ವರ್ಷಗಳೇ ಕಳೆಯುತ್ತಿವೆ. ಆದರೆ, ಇನ್ನೂ ಇಸ್ರೇಲ್ ದೇಶವೆಂದು ಒಪ್ಪಿಕೊಳ್ಳಲು ನೆರೆಹೊರೆ ದೇಶಗಳು ಸಿದ್ಧವಾಗಿಲ್ಲ. ಜೊತೆಗೆ, ಇಸ್ರೇಲ್ ಮೇಲೆ ಪ್ಯಾಲೆಸ್ತೇನ್ ರಾಷ್ಟ್ರದಿಂದ ಗಾಜಾಪಟ್ಟಿ ಸೇರಿದಂತೆ ಹಲವು ಭೂ ಪ್ರದೇಶಗಳ ವಿವಾದಿಂದಾಗಿ ಆಗಿಂದಾಗ್ಗೆ ಯುದ್ಧಗಳು ನಡೆಯುತ್ತಲೇ ಇವೆ. ಈವರೆಗೆ ಇಸ್ರೇಲ್ ಮಾಡಿದ ಯಾವುದೇ ಯುದ್ಧದಲ್ಲಿ ಸೋತಿಲ್ಲ. ಈಗ ಏಕಾಏಕಿ ಹಮಾಸ್ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್ ಕೂಡ ಯುದ್ಧವನ್ನು ಸಾರಿದೆ. ಈಗ 1 ಸಾವಿರಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದು, ಇತ್ತ 800ಕ್ಕೂ ಅಧಿಕ ಇಸ್ರೇಲ್ ನಾಗರೀಕರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಲಜ್ಞಾನದ 'ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ' ಭವಿಷ್ಯ ನಿಜವಾಗಿದೆ! ಕೋಡಿಶ್ರೀ
ಲೋಕಸಭೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ: ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದೆ. ಅದರಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷಾಂತರ ಹೆಚ್ಚಾದರೂ, ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದಾರೆ. ಈ ಮೂಲಕ ದೇಶದ ರಾಜಕಾರಣದಲ್ಲಿ ಯಾವುದೇ ಅತಂತ್ರ ಸ್ಥಿತಿಗಳು ಉಂಟಾಗುವುದಿಲ್ಲ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ I.N.D.I.A ಒಕ್ಕೂಟದ ಬಗ್ಗೆ ಯಾವುದೇ ಭವಿಷ್ಯವನ್ನು ನುಡಿದಿಲ್ಲ.