ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಡಿಮಠದ ಶ್ರೀಗೆ ಆಹ್ವಾನ!
ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಅಯೋಧ್ಯೆಯ ರಾಮಮಂದಿರ ಪ್ರಾಧಿಕಾರ ಆಹ್ವಾನ ನೀಡಿದೆ.
ಹಾಸನ (ಡಿ.16): ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಅಯೋಧ್ಯೆಯ ರಾಮಮಂದಿರ ಪ್ರಾಧಿಕಾರ ಆಹ್ವಾನ ನೀಡಿದೆ.
ಈ ಸಂಬಂಧ ರಾಮಲಲ್ಲಾ ದೇಗುಲದ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂಪಾಲ್ ರೈ ಅವರು ಕೋಡಿಮಠ ಶ್ರೀಗೆ ಪತ್ರ ಬರೆದಿದ್ದಾರೆ. ರಾತ್ರಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಅಯೋಧ್ಯಾ ಪಟ್ಟಣಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ.
ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಶ್ರೀಗಳುನಿರ್ಧರಿಸಿದ್ದಾರೆ ಮತ್ತು 48 ದಿನಗಳ ಕಾಲ ನಡೆಯಲಿರುವ ವಿವಿಧ ಪೂಜೆ ಮತ್ತು ವಿಧಿವಿಧಾನಗಳಲ್ಲಿ ಭಾಗವಹಿಸಲು ಒಂದೆರಡು ದಿನ ಅಯೋಧ್ಯೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ವ್ಹೀಲ್‌ಚೇರ್‌ನಲ್ಲೇ ಅಯೋಧ್ಯೆಗೆ ಹೊರಟ ಸಾಹಸಿ: ರಾಮನ ಕಾಣುವ ಕನಸು ಕೊನೆಗೂ ನನಸಾಗುತ್ತಾ ?
ಬೇಲೂರಿಗೆ ಅಯೋಧ್ಯೆಯಿಂದ ಮಂತ್ರಾಕ್ಷತೆ ಆಗಮನ
ಬೇಲೂರು: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪಟ್ಟಣದ ನೆಹರೂ ವೃತ್ತದ ಬಳಿ ಅಯೋಧ್ಯೆಯಿಂದ ಮಂತ್ರಾಕ್ಷತೆಯನ್ನು ತಂದಂತಹ ಶ್ರೀರಾಮನ ವಾಹನಕ್ಕೆ ವಿಶೇಷ ಪುಷ್ಪವೃಷ್ಟಿ ಸಲ್ಲಿಸಿದ ನಂತರ ಅಕ್ಷತೆ ತುಂಬಿದ್ದ ಕೊಡವನ್ನು ತೆರದ ವಾಹನದಲ್ಲಿ ಸೀತಾರಾಮಾಂಜನೇಯ ದೇವಾಲಯ ಹಾಗೂ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯದರ್ಶಿ ನಾಗೇಶ್ (ಗುಂಡ) ಮಾತನಾಡಿ, ನಮ್ಮ ಪವಿತ್ರ ಭೂಮಿಯಾದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ. ೨೨ರಂದು ನಡೆಯಲಿರುವ ಶ್ರೀರಾಮ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಹಿಂದೂಗಳ ಮನೆಮನೆಗೆ ಮಂತ್ರಾಕ್ಷತೆ ಜೊತೆಗೆ ಶ್ರೀರಾಮನ ಭಾವಚಿತ್ರವನ್ನು ವಿತರಿಸಲು ಈಗಾಗಲೇ ಮಂತ್ರಾಕ್ಷತೆ ಇರುವ ಕಳಸವು ನಮ್ಮ ತಾಲೂಕಿಗೆ ಬಂದಿದ್ದು ಅದನ್ನು ಪ್ರತಿಯೊಬ್ಬರ ಮನೆಮನೆಗೆ ತಲುಪಿಸುವ ಕೆಲಸವನ್ನು ಹನುಮ ಜಯಂತಿ ದಿನದಿಂದ ಚಾಲನೆ ನೀಡಿದ್ದು ಇದಕ್ಕೆ ತಾಲೂಕಿನ ಎಲ್ಲಾ ಸಮಸ್ತ ಹಿಂದೂ ಬಾಂಧವರು ಹಾಗೂ ಶ್ರೀರಾಮನ ಭಕ್ತರು ಆಗಮಿಸುವಂತೆ ಮನವಿ ಮಾಡಿದರು.
ಅಯೋಧ್ಯೆ ದೇಗುಲದ ಬಗ್ಗೆ BRS ಶಾಸಕಿ ಕವಿತಾ ಪೋಸ್ಟ್: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರಾದ ಸಂತೋಷ್, ಮೋಹನ್, ಅಶೋಕ್, ದರ್ಶನ್, ಭರತ್, ಮುಂತಾದವರು ಹಾಜರಿದ್ದರು.