Asianet Suvarna News Asianet Suvarna News

2021ಕ್ಕೆ ಭಾರತದಲ್ಲಿ ನಿತ್ಯ 2.8 ಲಕ್ಷ ಕೇಸ್‌? ಔಷಧ ಸಿದ್ಧವಾದ್ರೆ ಮಾತ್ರ ಬಚಾವ್

ಕೊರೋನಾ ವೈರಸ್‌ಗೆ ಲಸಿಕೆ ಅಥವಾ ಔಷಧ ಸಿಗದೆ ಹೋದರೆ, 2021ರ ಚಳಿಗಾಲದ ವೇಳೆಗೆ ಭಾರತದಲ್ಲಿ ಪ್ರತಿನಿತ್ಯ ಬರೋಬ್ಬರಿ 2.87 ಲಕ್ಷ ಸೋಂಕಿತರು ಕಂಡುಬರುವ ಸಾಧ್ಯತೆ ಇದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.

2 lakh cases to be found everyday in India in 2021
Author
Bangalore, First Published Jul 9, 2020, 8:54 AM IST

ನವದೆಹಲಿ(ಜು.09): ಕೊರೋನಾ ವೈರಸ್‌ಗೆ ಲಸಿಕೆ ಅಥವಾ ಔಷಧ ಸಿಗದೆ ಹೋದರೆ, 2021ರ ಚಳಿಗಾಲದ ವೇಳೆಗೆ ಭಾರತದಲ್ಲಿ ಪ್ರತಿನಿತ್ಯ ಬರೋಬ್ಬರಿ 2.87 ಲಕ್ಷ ಸೋಂಕಿತರು ಕಂಡುಬರುವ ಸಾಧ್ಯತೆ ಇದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.

"

ಪ್ರತಿನಿತ್ಯ ಭಾರತದಲ್ಲಿ ದಾಖಲಾಗುತ್ತಿರುವ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಈಗಾಗಲೇ ಜನರಲ್ಲಿ ದಿಗಿಲು ಹುಟ್ಟಿಸಿರುವಾಗಲೇ, ಅಮೆರಿಕದ ಮೆಸಾಚ್ಯುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯ ಸಂಶೋಧಕರು ಸಿದ್ಧಪಡಿಸಿರುವ ವರದಿ ಆತಂಕವನ್ನು ಮತ್ತಷ್ಟುಹೆಚ್ಚಿಸುವಂತಿದೆ.

1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್

ಮೂವರು ಸಂಶೋಧಕರು ತಯಾರಿಸಿರುವ, ಇನ್ನೂ ಮುದ್ರಣವಾಗದ ಈ ಅಧ್ಯಯನ ವರದಿಯ ಪ್ರಕಾರ, 2021ರ ಚಳಿಗಾಲ ಮುಗಿಯುವ ವೇಳೆಗೆ ಪ್ರತಿದಿನದ ಸೋಂಕಿನಲ್ಲಿ ಭಾರತ ಪ್ರಥಮ ಸ್ಥಾನಕ್ಕೇರಲಿದೆ. ತನ್ಮೂಲಕ 30 ಲಕ್ಷ ಸೋಂಕಿತರೊಂದಿಗೆ ಹಾಲಿ ವಿಶ್ವದ ನಂ.1 ಕೊರೋನಾ ದೇಶವಾಗಿರುವ ಅಮೆರಿಕವನ್ನು ಹಿಂದಿಕ್ಕಲಿದೆ. ಅಮೆರಿಕ 2ನೇ ಸ್ಥಾನವನ್ನು ಕಾಪಾಡಿಕೊಳ್ಳಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಇರಾನ್‌, ಇಂಡೋನೇಷ್ಯಾ , ಬ್ರಿಟನ್‌, ನೈಜೀರಿಯಾ, ಟರ್ಕಿ, ಫ್ರಾನ್ಸ್‌ ಹಾಗೂ ಜರ್ಮನಿ ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೆ ವಿಶ್ವದಲ್ಲಿ ಸೋಂಕಿತರ ಸಂಖ್ಯೆ 24.9 ಕೋಟಿಗೆ ಏರಿಕೆಯಾಗುವ ಹಾಗೂ ಸಾವು 18 ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದೆ.

ಹಾಲಿ ಸೋಂಕಿನ ಪ್ರಮಾಣ, ಸಾವು, ಪರೀಕ್ಷೆ, ಇನ್ನಿತರೆ ಅಂಶಗಳನ್ನು 84 ದೇಶಗಳ ಜತೆ ತುಲನೆ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಈ 84 ದೇಶಗಳು ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟುಪಾಲು ಹೊಂದಿವೆ.

ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ

ಪರೀಕ್ಷೆ, ನಡವಳಿಕೆ ಹಾಗೂ ಸರ್ಕಾರದ ಪ್ರತಿಕ್ರಿಯೆಯನ್ನು ಊಹಿಸಿಕೊಂಡು ಈ ಸಂಖ್ಯೆಯನ್ನು ನೀಡಲಾಗಿದೆ. ಆದರೆ ಇದನ್ನು ಸಂಭಾವ್ಯ ಅಪಾಯ ಅಥವಾ ಪ್ರಕರಣಗಳ ನಿಖರ ಮುನ್ನೋಟ ಎಂದು ಪರಿಭಾವಿಸಬಾರದು ಎಂದೂ ಈ ತಂಡ ಮನವಿ ಮಾಡಿಕೊಂಡಿದೆ.

ವ್ಯಾಪಕವಾಗಿ ಪರೀಕ್ಷೆ ನಡೆದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಪರಿಣಾಮಕಾರಿಯಾಗಿ ನಡೆದರೆ, ಭವಿಷ್ಯದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿವೆ ಎಂದು ತಿಳಿಸಿದೆ.

Follow Us:
Download App:
  • android
  • ios