Shivamogga: ಒಂದೇ ದಿನ 16 ಲಕ್ಷ ನೆರವು: ‘ಹರ್ಷನ ಕುಟುಂಬಕ್ಕೆ ನೆರವಾಗಿ’ ಅಭಿಯಾನಕ್ಕೆ ಜನ ಸ್ಪಂದನೆ
* ಭರತ್ ಶೆಟ್ಟಿ, ವೇದವ್ಯಾಸ್, ಸುಕುಮಾರರಿಂದ ಸಹಾಯ
* ಯಶ್ಪಾಲ್, ಜೀವರಾಜ್ರಿಂದಲೂ ತಲಾ 1 ಲಕ್ಷ ರು.
* ಹರ್ಷನ ಕುಟುಂಬಕ್ಕೆ ನಾವು ನೆರವಾಗೋಣ ಎಂಬ ಅಭಿಯಾನ
ಶಿವಮೊಗ್ಗ(ಫೆ.23): ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಹರ್ಷನ(Harsha) ಕುಟುಂಬಕ್ಕೆ ಹಣಕಾಸು ನೆರವು(Financial Aid) ನೀಡುವ ಅಭಿಯಾನ ಆರಂಭವಾಗಿದ್ದು, ಒಂದೇ ದಿನದಲ್ಲಿ 16 ಲಕ್ಷ ಸಂಗ್ರಹವಾಗಿರುವ ಮಾಹಿತಿ ಸಿಕ್ಕಿದೆ. ಹರ್ಷದ ತಾಯಿ ಪದ್ಮಾ ಅವರ ಇಂಡಿಯನ್ ಓವರ್ಸೀಸ್ನ ಶಿವಮೊಗ್ಗ(Shivamogga) ಶಾಖೆಯ ಐಎಫ್ಎಸ್ಸಿ ಕೋಡ್ ಸಹಿತ ಉಳಿತಾಯ ಖಾತೆಯ ಸಂಖ್ಯೆ ನೀಡಿ, ಹರ್ಷನ ಕುಟುಂಬಕ್ಕೆ ನಾವು ನೆರವಾಗೋಣ ಎಂಬ ಅಭಿಯಾನದ ಸಂದೇಶ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ.
ಇದಕ್ಕೆ ಸಾಕಷ್ಟು ಮಂದಿ ಹಣ(Money) ಹಾಕಿದ್ದು, ಸಂಜೆಯವರೆಗೆ ಸುಮಾರು 16 ಲಕ್ಷ ಸಂಗ್ರಹವಾಗಿದೆ ಎಂದು ಮಾಹಿತಿ ಸಿಕ್ಕಿದೆ. ವಾಸ್ತವವಾಗಿ ಹರ್ಷ ಅವರ ತಾಯಿ ಅವರ ಹೆಸರಿನಲ್ಲಿ ಇದುವರೆಗೆ ಯಾವುದೇ ಬ್ಯಾಂಕ್ ಖಾತೆ(Bank Account) ಇರಲಿಲ್ಲ. ಮನೆಯಲ್ಲಿ ಸಂಕಷ್ಟದ ಸ್ಥಿತಿ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ(BJP) ಯುವ ಮೋರ್ಚಾದ ಕೆಲವು ಯುವಕರು ಮಂಗಳವಾರ ಬೆಳಗ್ಗೆ ಬ್ಯಾಂಕ್ನಲ್ಲಿ ಖಾತೆಯೊಂದನ್ನು ತೆರೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹರಿಬಿಟ್ಟು ಹರ್ಷ ಕುಟುಂಬಕ್ಕೆ ನೆರವಾಗಿ ಎಂದು ಅಭಿಯಾನವೊಂದನ್ನು ಆರಂಭಿಸಿದ್ದರು. ಇದಕ್ಕೆ ಅತ್ಯುತ್ತಮ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಸಿಕ್ಕಿದೆ ಎಂದು ಗೊತ್ತಾಗಿದೆ.
Shivamogga Riot: ಈಶ್ವರಪ್ಪ ಹೆಸರಿದ್ದ ದೂರು ಸ್ವೀಕರಿಸುತ್ತಿಲ್ಲ: ಮುಸ್ಲಿಮರ ಆರೋಪ
ಹರ್ಷ ಕುಟುಂಬಕ್ಕೆ ಶಾಸಕರ ನೆರವು
ಮಂಗಳೂರು(Mangaluru): ಶಿವಮೊಗ್ಗದಲ್ಲಿ ಹತ್ಯೆಯಾದ ಹಿಂದೂ ಸಂಘಟನೆಯ ಹರ್ಷ ಅವರ ಕುಟುಂಬಕ್ಕೆ ದೇಣಿಗೆ ಹರಿದು ಬರುತ್ತಿದೆ.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ(Bharath Shetty) ಅವರು ತನ್ನ ತಿಂಗಳ ವೇತನವನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಪ್ರಕಟಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್(Rajesh Naik) ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ 1 ಲಕ್ಷವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ್ ಕಾವತ್(Vedavyas Kamat) ಅವರು 1 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.
ಹರ್ಷ ಅವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರು ಭೇಟಿ ನೀಡಿ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ಮೊತ್ತದ ಚೆಕ್ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.
'ಹಿಂದೂ-ಹಿಂದುತ್ವ ಅಂದಿದ್ದಕ್ಕೆ ಈ ಸ್ಥಿತಿ: ಹಿಂದೂ, ಮುಸ್ಲಿಂ ಯಾರೇ ಆಗಿರಿ ಅಪ್ಪ, ಅಮ್ಮನಿಗೆ ಒಳ್ಳೆ ಮಕ್ಕಳಾಗಿರಿ'
ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಮೃತ ಹರ್ಷ ಅವರ ತಾಯಿಯ ಖಾತೆಗೆ .1 ಲಕ್ಷ ಜಮಾ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ರಿಂದ .1 ಲಕ್ಷ ನೆರವು ಸಿಕ್ಕಿದೆ. ಸೋಮವಾರ ಶಾಸಕರಾದ ರೇಣುಕಾಚಾರ್ಯ 2 ಲಕ್ಷ, ಅರವಿಂದ ಲಿಂಬಾವಳಿ 1 ಲಕ್ಷ ನೀಡುವುದಾಗಿ ಘೋಷಿಸಿದ್ದರು.
ಹರ್ಷ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಿ
ಗದಗ: ಶಿವಮೊಗ್ಗ ಜಿಲ್ಲೆಯ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಮಾಡಿದ ಎಲ್ಲ ದುಷ್ಕರ್ಮಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು, ಹರ್ಷ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಹಾಗೂ ಹಿಂದೂ ಕಾರ್ಯಕರ್ತರ ಕೊಲೆಗೆ ಕುಮ್ಮಕ್ಕು ನೀಡುವಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.