ಬೆಂಗಳೂರು(ಮೇ.28): ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೊಮ್ಮೆ ಶತಕ ಮೀರಿದೆ. ಬುಧವಾರ 10 ವರ್ಷದೊಳಗಿನ 20 ಮಕ್ಕಳು ಸೇರಿ ಒಟ್ಟು 135 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದೆ. ಈ ನಡುವೆ ಮತ್ತೆ ಮೂವರು ಸೋಂಕಿನಿಂದ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 47ಕ್ಕೇರಿದೆ.

ಹೊಸ 135 ಪ್ರಕರಣಗಳಲ್ಲಿ ಕೇವಲ 9 ಜನರಿಗೆ ಸ್ಥಳೀಯ ಸೋಂಕಿತರ ಸಂಪರ್ಕದಿಂದ ಕೊರೋನಾ ಹರಡಿದೆ. ಉಳಿದ 126 ಜನ ಹೊರಗಿನಿಂದ ಬಂದವರಾಗಿದ್ದು, ಇವರಲ್ಲಿ 116 ಮಂದಿ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದ್ದಾರೆ. ಉಳಿದ 10ರಲ್ಲಿ ತಮಿಳುನಾಡಿನಿಂದ ಇಬ್ಬರು, ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ದೆಹಲಿ, ಕೇರಳದಿಂದ ಬಂದ ತಲಾ ಒಬ್ಬರಿಗೆ, ನೇಪಾಳ, ಯುಎಇಯಿಂದ ಬಂದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಚೀನಾಕ್ಕೆ ಸೆಡ್ಡು ಹೊಡೆದು ಫೇಸ್ ಶೀಲ್ಡ್ ತಯಾರಿಕೆ

ಜಿಲ್ಲಾವಾರು ಮಾಹಿತಿಯಲ್ಲಿ, ಕಲಬುರಗಿಯಲ್ಲಿ 28, ಯಾದಗಿರಿ 16, ಬೀದರ್‌ 13, ದಕ್ಷಿಣ ಕನ್ನಡ 11, ಹಾಸನ 15, ಉಡುಪಿ 9, ಬೆಂಗಳೂರು ನಗರ, ದಾವಣಗೆರೆ, ಉತ್ತರ ಕನ್ನಡ ತಲಾ 6, ಬೆಳಗಾವಿ, ಚಿಕ್ಕಬಳ್ಳಾಪುರ 4, ವಿಜಯಪುರ, ಚಿಕ್ಕಮಗಳೂರು 3, ಬೆಂಗಳೂರು ಗ್ರಾಮಾಂತರ 2, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಈ ಪೈಕಿ ದಾವಣಗೆರೆಯಲ್ಲಿ ಪಿ.1254 ರೋಗಿಯಿಂದ ಮೂವರಿಗೆ, ಉಳಿದ ಮೂವರಿಗೆ ಪಿ.1373, ಪಿ.1254, ಪಿ.1658 ಸೋಂಕಿತರಿಂದ ತಲಾ ಒಬ್ಬರಿಗೆ, ಬೆಂಗಳೂರು ಗ್ರಾಮಾಂತರದಲ್ಲಿ ಪಿ.1993ಯಿಂದ ಒಬ್ಬರಿಗೆ, ಪಿ.1606, 1607, 1608 ಸಂಪರ್ಕದಲ್ಲಿದ್ದ ಒಬ್ಬ ವ್ಯಕ್ತಿಗೆ, ಕೋಲಾರದಲ್ಲಿ ಅಂತರ್‌ ಜಿಲ್ಲಾ ಪ್ರವಾಸದಿಂದ ಒಬ್ಬರಿಗೆ, ಬೆಂಗಳೂರು ನಗರದಲ್ಲಿ ಪಿ.1396 ರೋಗಿಯಿಂದ ಒಬ್ಬರಿಗೆ ಸೋಂಕು ಹರಡಿದೆ. ಈ 9 ಪ್ರಕರಣ ಬಿಟ್ಟು ಉಳಿದ 126 ಪ್ರಕರಣಗಳೂ ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನಮ್ಮ ಜೀವ ಉಳಿಸುತ್ತಿರುವ ವೈದ್ಯರೇ ನಿಮಗೆ ಸಲಾಂ!

17 ಜನ ಬಿಡುಗಡೆ:

ಬುಧವಾರ ಶಿವಮೊಗ್ಗದಲ್ಲಿ ನಾಲ್ವರು, ಬೀದರ್‌ನಲ್ಲಿ ಮೂವರು, ಬೆಂಗಳೂರು ನಗರ, ಕಲಬುರಗಿ, ದಾವಣಗೆರೆಯಲ್ಲಿ ತಲಾ ಇಬ್ಬರು, ಧಾರವಾಡ, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೇರಿ ಸೋಂಕಿನಿಂದ ಗುಣಮುಖರಾದ ಒಟ್ಟು 17 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 781 ಆಗಿದೆ.

ಮತ್ತೆ ಮೂವರು ಸಾವು; ಮೃತರ ಸಂಖ್ಯೆ 47ಕ್ಕೆ

ರಾಜ್ಯದಲ್ಲಿ ಬುಧವಾರ ಯಾದಗಿರಿ, ಬೀದರ್‌, ವಿಜಯಪುರದಲ್ಲಿ ತಲಾ ಒಬ್ಬ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಮೃತ ಸೋಂಕಿತರ ಸಂಖ್ಯೆ 47 ಕ್ಕೆ ಏರಿಕೆಯಾಗಿದೆ.

ಯಾದಗಿರಿ ನಿವಾಸಿಯಾದ ಪಿ.2301 ಸಂಖ್ಯೆಯ 69 ವರ್ಷದ ಸೋಂಕಿತ ವೃದ್ಧೆ ಮೇ 20ರಂದು ಮೃತಪಟ್ಟಿದ್ದರು. ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯುಳ್ಳ ಅವರನ್ನು ಮರಣಾನಂತರ ಜಿಲ್ಲೆಯ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ನಡೆಸಿದ್ದ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಬೀದರ್‌ನಲ್ಲಿ ಪಿ.1712 ಸಂಖ್ಯೆಯ 49 ವರ್ಷದ ವ್ಯಕ್ತಿ ಬುಧವಾರ ನಿಧನರಾಗಿದ್ದಾರೆ.

ಆಷಾಢದಲ್ಲಿ ಹೆಚ್ಚಾಗಲಿದೆ ಕೊರೋನಾ, ತಡೆಯೋದು ಹೇಗೆ?

ದೀರ್ಘ ಕಾಲದ ಮಧುವೇಹ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಮೇ 19ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸೋಂಕು ದೃಢಪಟ್ಟಿತ್ತು. ವಿಜಯಪುರದಲ್ಲಿ ಪಿ.2011 ಸಂಖ್ಯೆಯ 82 ವರ್ಷದ ಸೋಂಕಿತ ವೃದ್ಧ ಮಂಗಳವಾರ ಮೃತಪಟ್ಟಿದ್ದರು. ಪಿ.1661 ಸೋಂಕಿತನ ಸಂಪರ್ಕದ ಜೊತೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳುತ್ತಿದ್ದ ಅವರು ನಿಗದಿತ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.