Asianet Suvarna News Asianet Suvarna News

ಚೀನಾಕ್ಕೆ ಸೆಡ್ಡು ಹೊಡೆದ ಕರ್ನಾಟಕದ ಶ್ರೀರಾಮ ಭಟ್, 25 ರೂಪಾಯಿಗೆ ಫೇಸ್‌ಶೀಲ್ಡ್..!

ಹೊನ್ನಾವರ ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೋಂಕು ತಾಗದಂತೆ ಸುರಕ್ಷತಾ ಸಾಧನವಾಗಿರುವ ಹಾಗೂ ಭಾರೀ ಬೇಡಿಕೆ ಇರುವ ನೂರಾರು ರು. ವೆಚ್ಚದ ಫೇಸ್ ಶೀಲ್ ್ಡನ್ನು ಕೇವಲ 25 ರು.ಗೆ ತಯಾರಿಸುವ ಮೂಲಕ ಹೊನ್ನಾವರ ಮೂಲದ ಬೆಂಗಳೂರು ಉದ್ಯಮಿ
ಶ್ರೀರಾಮ ಭಟ್ ಚೀನಾಕ್ಕೆ ಸೆಡ್ಡು ಹೊಡೆದಿದ್ದಾರೆ.

Youth from karnataka prepares face shield costs just 25 rupees
Author
Bangalore, First Published Jul 4, 2020, 11:02 AM IST

ಉತ್ತರ ಕನ್ನಡ(ಜು.04): ಹೊನ್ನಾವರ ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೋಂಕು ತಾಗದಂತೆ ಸುರಕ್ಷತಾ ಸಾಧನವಾಗಿರುವ ಹಾಗೂ ಭಾರೀ ಬೇಡಿಕೆ ಇರುವ ನೂರಾರು ರು. ವೆಚ್ಚದ ಫೇಸ್ ಶೀಲ್ ್ಡನ್ನು ಕೇವಲ 25 ರು.ಗೆ ತಯಾರಿಸುವ ಮೂಲಕ ಹೊನ್ನಾವರ ಮೂಲದ ಬೆಂಗಳೂರು ಉದ್ಯಮಿ ಶ್ರೀರಾಮ ಭಟ್ ಚೀನಾಕ್ಕೆ ಸೆಡ್ಡು ಹೊಡೆದಿದ್ದಾರೆ.

ತಮ್ಮ ‘ಶ್ರೀಮಾತಾ ಪ್ರೆಸಿಶನ್ ಕಂಪೋನೆಂಟ್’ ಕೈಗಾರಿಕೆಯಲ್ಲಿ ಅವರು ಐದು ವಿಧದ ಫೇಸ್ ಶೀಲ್ಡ್ ತಯಾರಿಸುತ್ತಿದ್ದು, ಇದುವರೆಗೆ ಲಕ್ಷಕ್ಕೂ ಹೆಚ್ಚು ತಯಾರಿಸಿ ಬಳಕೆದಾರ ಸಂಸ್ಥೆಗಳಿಗೆ ಪೂರೈಸಿದ್ದಾರೆ. ಕೊರೋನಾ ಮಹಾಮಾರಿ ಬಂದ ಆರಂಭದಲ್ಲಿ ಪೇಸ್‌ಶೀಲ್ಡ್ ಸೇರಿದಂತೆ ಇನ್ನಿತರ   ವಸ್ತುಗಳನ್ನು ಚೀನಾದಿಂದ ಭಾರತ ತರಿಸಿಕೊಳ್ಳಬೇಕಾಗಿತ್ತು.

ಪಬ್‌ಜೀ ಗೇಮ್‌ನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ: ಇಸ್ರೋ ವಿಜ್ಞಾನಿ ಮಾಧವನ್‌ ನಾಯರ್‌ ಹೇಳಿಕೆ

ಇದಕ್ಕೆ ನೂರಾರು ರು. ವ್ಯಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿದ ಶ್ರೀರಾಮ ಭಟ್ ತಮ್ಮ ವಾಹನಗಳ ಬಿಡಿ ಭಾಗ ತಯಾರಿಸುವ ಕೈಗಾರಿಕೆಯಲ್ಲೇ ಫೇಸ್‌ಶೀಲ್ಡ್ ತಯಾರಿಸುವ ಕಾರ್ಯಕ್ಕೆ ಮುಂದಾದರು.

ಇದೀಗ ಲಕ್ಷಕ್ಕೂ ಹೆಚ್ಚು ಇಂತಹ ಸಾಧನ ತಯಾರಿಸಿ ವಿತರಿಸಿದ್ದಾರೆ. ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು ಮಾತ್ರವಲ್ಲ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಇದನ್ನು ಖರೀದಿಸಿವೆ.

ಕೊರೋನಾಗೆ ಹೆದರಿ ವ್ಯಕ್ತಿ ನೇಣಿಗೆ ಶರಣು

ಶ್ರೀರಾಮ ಭಟ್ ಇವರು 2006ರಲ್ಲಿ ಆರಂಭಿಸಿದ ಶ್ರೀಮಾತಾ ಪ್ರೆಸಿಶನ್ ಕಂಪೋನೆಂಟ್ ಕೈಗಾರಿಕೆ ಸಂಸ್ಥೆ ಐಎಸ್‌ಓ ಮಾನ್ಯತೆ ಹೊಂದಿದ್ದು ಬೆಂಗಳೂರಿನಲ್ಲಿ ವಾಹನಗಳ ಬಿಡಿ ಭಾಗಗಳನ್ನು ತಯಾರಿಸುತ್ತಿದೆ. ಮೈಸೂರಿನಲ್ಲಿ ಇತ್ತೀಚೆಗೆ ಇನ್ನೊಂದು ಘಟಕ ಆರಂಭಿಸಿದ್ದಾರೆ. ಲಾಕ್‌ಡೌನ್ ಆದಾಗ ಇವರ ಸಂಸ್ಥೆಯಲ್ಲಿ ಉತ್ಪಾದಿಸುವ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಾಯಿತು. ಇದರಿಂದ ಕೆಲಸ ಮಾಡುವ ನೌಕರರಿಗೆ ಉದ್ಯೋಗ ಇಲ್ಲವಾಯಿತು.

ಇದೇ ಸಂದರ್ಭದಲ್ಲಿ ಫೇಸ್‌ಶೀಲ್ಡ್‌ಗೆ ಕೊರತೆಯ ವಿಷಯ ತಿಳಿದ ಶ್ರೀರಾಮ ಭಟ್ ತನ್ನ ನೌಕರರಿಗೆ ಕೆಲಸ ಕೊಡಲು ಇರುವ ಯಂತ್ರೋಪಕರಣಗಳನ್ನು ಮಾರ್ಪಡಿಸಿಕೊಂಡು
ಕೆಲವು ಹೊಸ ಯಂತ್ರ ಖರೀದಿಸಿ ಫೇಸ್‌ಶೀಲ್ಡ್ ತಯಾರಿಕೆ ಆರಂಭಿಸಿದರು. ಈಗ ೫ ನಮೂನೆಗಳಲ್ಲಿ ಫೇಸ್‌ಶೀಲ್ಡ್ ತಯಾರಿಸುತ್ತಾರೆ. ಮಕ್ಕಳಿಗಾಗಿ ಇನ್ನೊಂದು ಮಾಡೆಲ್
ಪ್ರಾಯೋಗಿಕವಾಗಿ ಸಿದ್ಧವಾಗಿದೆ. ಚೀನಾಕ್ಕಿಂತ ಅಗ್ಗದಲ್ಲಿ ಫೇಸ್‌ಶೀಲ್ಡ್‌ಗಳನ್ನು ಒದಗಿಸುವ ಶ್ರೀರಾಮ ಭಟ್ ಬೇಡಿಕೆ ಅವಲಂಭಿಸಿ ಕೈಗಾರಿಕೆಯನ್ನು ವಿಸ್ತರಿಸಿ ಮೋದಿಯವರ ಸ್ಟಾರ್ಟ್ ಅಪ್ ಅನ್ವಯ ’ಆತ್ಮ ನಿರ್ಭರ್ ಭಾರತ’ ಕರೆಗೆ ಸ್ಪಂದಿಸಿದ್ದಾರೆ.

Follow Us:
Download App:
  • android
  • ios