Asianet Suvarna News Asianet Suvarna News

ಬಿಬಿಎಂಪಿಯಲ್ಲಿ 13 ಸಾವಿರ ಕೋಟಿ ಹಗರಣ: ಸಿಐಡಿಗೆ ವಹಿಸುವಂತೆ ಸಿಎಂಗೆ ಎನ್ನಾರ್ ರಮೇಶ್ ಪತ್ರ

ಬಿಬಿಎಂಪಿ ವ್ಯಾಪ್ತಿಯ .13 ಸಾವಿರ ಕೋಟಿ ಮೊತ್ತದ ಕಾಮಗಾರಿಯಲ್ಲಿ ನಡೆದಿರುವ ಹಗರಣದ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

13000 crores in BBMP NR Ramesh has accused the scam bengaluru rav
Author
First Published Jun 30, 2023, 1:15 PM IST

ಬೆಂಗಳೂರು (ಜೂ.30) ಬಿಬಿಎಂಪಿ ವ್ಯಾಪ್ತಿಯ .13 ಸಾವಿರ ಕೋಟಿ ಮೊತ್ತದ ಕಾಮಗಾರಿಯಲ್ಲಿ ನಡೆದಿರುವ ಹಗರಣದ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರಿಗೆ ಪತ್ರ ಬರೆದಿರುವ ಅವರು, 2015-16ರಿಂದ 2020-21ನೇ ಸಾಲಿನವರೆಗಿನ ಅವಧಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ 6,932 ಪುಟಗಳ ಸಂಪೂರ್ಣ ದಾಖಲೆಗಳನ್ನು ಲಗತ್ತಿಸಿದ್ದಾರೆ. ಕೆಆರ್‌ಐಡಿಎಲ್‌ (KRIDL) (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆ) ಅಧಿಕಾರಿಗಳು ಮತ್ತು ಉಪಗುತ್ತಿಗೆದಾರರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಸಂಸ್ಥೆಯಿಂದ ಉಪಗುತ್ತಿಗೆಯನ್ನು ಗ್ರೂಪ್‌ ಲೀಡರ್‌ಗಳ ಹೆಸರಲ್ಲಿ ಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ರುಪಾಯಿ ವಂಚನೆ ಮಾಡಲಾಗಿದೆ. ಈ ಸಂಬಂಧ ಉಪಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಲ್ಲರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಪಾಲಿಕೆಯ ಮುಖ್ಯ ಆಯುಕ್ತರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

 

ಹಣ ಪಡೆದು ಅನರ್ಹರಿಗೂ ಬಿಪಿಎಲ್‌ ಕಾರ್ಡ್‌: ಎನ್‌.ಆರ್‌. ರಮೇಶ್‌

ತುರ್ತು ಕಾಮಗಾರಿಗಳನ್ನು ಹೊರತುಪಡಿಸಿ, ಇನ್ನಾವುದೇ ವಿಧದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು ಕೆಆರ್‌ಐಡಿಲ್‌ ಸಂಸ್ಥೆಗೆ ವಹಿಸದಂತೆ ಸರ್ಕಾರಿ ಆದೇಶ ನೀಡುವ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಆದೇಶಿಸಬೇಕು. ಕೆಆರ್‌ಐಡಿಎಲ್‌ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಿರುವ ಸಂಸ್ಥೆಯಾಗಿದೆ. ಆದರೆ, ಇಂತಹ ಸಂಸ್ಥೆಯ ಮೂಲಕ ಮಹಾನಗರ ಪ್ರದೇಶ, ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು/ಕಾಮಗಾರಿಗಳನ್ನು ನಿರ್ವಹಿಸುವುದೇ ನಿಯಮ ಬಾಹಿರ ಕಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿಯ ಕಾರ್ಯಗಳಿಗಾಗಿ ಸಂಸ್ಥೆಗೆ ಕಾನೂನು ಬಾಹಿರವಾಗಿ ವಹಿಸಲಾಗಿದೆ. ಸುಮಾರು .13 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಉತ್ತಮ ಗುಣಮಟ್ಟದ ಕಾಮಗಾರಿ ಎಂದು ಹೆಸರಿಸಲ್ಪಡುವ ಒಂದೇ ಒಂದು ಕಾಮಗಾರಿಯೂ ಸಹ ನಮಗೆ ಕಾಣಸಿಗುವುದಿಲ್ಲ. .850 ಕೋಟಿ ಮೊತ್ತದ ಕಾಮಗಾರಿಗಳನ್ನು ಹೊರತುಪಡಿಸಿದರೆ ಇನ್ನುಳಿದ .12,150 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಶೇ.50ರಷ್ಟುಮೊತ್ತವನ್ನು ಕಾಮಗಾರಿಗಳನ್ನು ನಿರ್ವಹಿಸದೆಯೇ ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ. ಇನ್ನುಳಿದ ಶೇ.50ರಷ್ಟುಮೊತ್ತದ ಕಾಮಗಾರಿಗಳನ್ನು ಅರ್ಧದಷ್ಟೂಪ್ರಮಾಣದಲ್ಲಿ ಪೂರ್ಣಗೊಳಿಸದೆಯೇ ಬಿಲ್‌ಗಳನ್ನು ಬೇನಾಮಿ ಉಪಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ದಾಖಲೆಗಳೇ ಸ್ಪಷ್ಟಪಡಿಸುತ್ತವೆ ಎಂದು ದೂರಿದ್ದಾರೆ.

 

ಸಿದ್ದರಾಮಯ್ಯ ಅವಧಿಯ ಟಿಡಿಆರ್‌ ಹಗರಣ: 9630 ಪುಟ ದಾಖಲೆ ಬಿಡುಗಡೆ ಎನ್‌ಆರ್ ರಮೇಶ

ಸಾರ್ವಜನಿಕರ ತೆರಿಗೆ ಹಣವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿರುವ ಸಂಸ್ಥೆಯ ಅಧಿಕಾರಿಗಳು, ಬಿಬಿಎಂಪಿ ಭ್ರಷ್ಟಅಧಿಕಾರಿಗಳು ಮತ್ತು ಕೆಲವು ವಂಚಕ ಜನಪ್ರತಿನಿಧಿಗಳು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿರುವ ಷಡ್ಯಂತ್ರ. ನಿಯಮಾನುಸಾರ ಇ-ಪ್ರೊಕ್ಯೂರ್ಮೆಂಟ್‌ ವಿಧಾನದಲ್ಲಿ ಟೆಂಡರ್‌ಗಳ ಮೂಲಕ ನಿರ್ವಹಿಸಬೇಕಾದ ಕಾಮಗಾರಿಗಳೆಲ್ಲವೂ ಕೆಆರ್‌ಐಡಿಎಲ್‌ ಸಂಸ್ಥೆಯ ಪಾಲಾಗುತ್ತಿರುವುದು ಅಕ್ಷರಶಃ ಸತ್ಯ ಎಂದಿದ್ದಾರೆ.

Latest Videos
Follow Us:
Download App:
  • android
  • ios