Asianet Suvarna News Asianet Suvarna News

ಸಿದ್ದರಾಮಯ್ಯ ಅವಧಿಯ ಟಿಡಿಆರ್‌ ಹಗರಣ: 9630 ಪುಟ ದಾಖಲೆ ಬಿಡುಗಡೆ ಎನ್‌ಆರ್ ರಮೇಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಧಿಯಲ್ಲಿ ಟಿಡಿಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಬೃಹತ್‌ ಹಗರಣವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಬಯಲಿಗೆಳೆದಿದ್ದು, 9,630 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

Siddaramaiah TDR scam 9630 page document released NR Ramesh bengaluru rav
Author
First Published Mar 21, 2023, 6:10 AM IST

ಬೆಂಗಳೂರು (ಮಾ.21) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಧಿಯಲ್ಲಿ ಟಿಡಿಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಬೃಹತ್‌ ಹಗರಣವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌(NR Ramesh) ಅವರು ಬಯಲಿಗೆಳೆದಿದ್ದು, 9,630 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಅವರು ಲೋಕಾಯುಕ್ತ ಸಂಸ್ಥೆ(Karnataka Lokayukta)ಗೆ ದೂರು ನೀಡಿದ್ದಾರೆ. ಬಿಬಿಎಂಪಿ(BBMP) ಇತಿಹಾಸದಲ್ಲಿಯೇ 2500 ಕೋಟಿ ರು. ಮೊತ್ತದ ಅತಿ ದೊಡ್ಡ ಹಗರಣವಾಗಿದ್ದು, ಬಿಬಿಎಂಪಿ ಎಂದು ಬೆಂಗಳೂರು-ಮೈಸೂರು ಮೂಲಸೌಕರ್ಯ(Bangalore-Mysore infrastructure) ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಟಿಡಿಆರ್‌ ಅವ್ಯವಹಾರ: ನಾಲ್ವರ ನಿವಾಸದ ಮೇಲೆ ಎಸಿಬಿ ದಾಳಿ

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ರಮೇಶ್‌, ವೆಂಕಟೇಶ್‌ ಡೆವಲಪರ್ಸ್‌ ಸಂಸ್ಥೆ(Venkatesh Developers)ಯ ಪಾಲುದಾರ ಪ್ರವೀಣ್‌, ಬಾಲಾಜಿ ಇನ್‌ಫ್ರಾಸ್ಟಕ್ಚರ್‌ ಡೆವಲಪರ್ಸ್‌(Praveen, Balaji Infrastructure Developers) ಸಂಸ್ಥೆಯ ಪಾಲುದಾರ ವಿಕ್ರಮ್‌ ಓಸ್ವಾಲ್‌ ಸೇರಿದಂತೆ ತಿಮ್ಮಯ್ಯ, ಮರಿರಾಜು ಎಂಬುವರು ಭ್ರಷ್ಟಅಧಿಕಾರಿಗಳ ಜತೆ ಸೇರಿ ಹಗರಣ ನಡೆಸಿದ್ದಾರೆ. ಈ ಹಗರಣವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ನ ಒಟ್ಟು 40.09 ಎಕರೆಯಷ್ಟುವಿಸ್ತೀರ್ಣದ ಸ್ವತ್ತನ್ನು ಅಲ್ಲಿನ ರೈತರಿಂದ 2011-12ರಲ್ಲಿ ಕೇವಲ ಲಕ್ಷ ರು.ಗೆ ಕ್ರಯಕ್ಕೆ ಪಡೆಯಲಾಗಿದೆ. ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂಬ ವರಸೆಯನ್ನು ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದರು.

ಮೇಲ್ನೋಟಕ್ಕೆ ಇದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನೀಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಆದರೆ, ಅವರ ಪ್ರಸ್ತಾವನೆಯ ಹಿಂದೆ ಇದ್ದಂತಹ ಬೃಹತ್‌ ಮಟ್ಟದ ಮಹಾವಂಚನೆ ಕ್ರಿಮಿನಲ್‌ ಯೋಜನೆಯ ದುರುದ್ದೇಶ ಯಾರ ಊಹೆಗೂ ನಿಲುಕದ್ದು ಎಂದು ಗೊತ್ತಾಗುತ್ತದೆ. ಯಾವುದೇ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೀಡಲಾಗುವ ಟಿಡಿಆರ್‌ ಅನ್ನು ಅದೇ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಬಳಸಬೇಕು ಎಂಬ ನಿಯಮ ಇದೆ. ಆದರೆ, ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು ಬಿಎಂಐಸಿಎಪಿಎ ಅಧಿಕಾರಿಗಳು ಟಿಡಿಆರ್‌ ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ. ಈ ನಡುವೆ, ನ್ಯಾಯಾಲಯಕ್ಕೆ ಅರ್ಜಿದಾರರ ದುರುದ್ದೇಶದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದ್ದ ಬಿಬಿಎಂಪಿ ವಕೀಲರು ಸರಿಯಾಗಿ ವಾದ ಮಂಡಿಸಲಿಲ್ಲ. ಹೀಗಾಗಿ ನ್ಯಾಯಾಲಯಲವು ಅರ್ಜಿದಾರರ ಪರವಾದ ಆದೇಶ ನೀಡಿದೆ ಎಂದರು.

 

ಸಿದ್ದರಾಮಯ್ಯ, ರಾಬರ್ಟ್‌ ವಾದ್ರಾ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

.2,644 ಕೋಟಿ ರೂ. ಲೂಟಿ ಯತ್ನ

.11 ಕೋಟಿಗಿಂತ ಕಡಿಮೆ ಮೌಲ್ಯದ ಸ್ವತ್ತಿಗೆ ಬದಲಿಗೆ .2,644 ಕೋಟಿ ರು.ಗಿಂತ ಹೆಚ್ಚು ಹಣವನ್ನು ಲೂಟಿ ಹೊಡೆಯುವ ಅತ್ಯಂತ ಬೃಹತ್‌ ವಂಚನೆಯ ಯೋಜನೆಯಾಗಿದೆ. ಈ ಪ್ರಕರಣದಲ್ಲಿ 40.09 ಎಕರೆ ವಿಸ್ತೀರ್ಣದ ಬದಲಾಗಿ 60.17 ಎಕರೆ ವಿಸ್ತೀರ್ಣದ ಪ್ರದೇಶಕ್ಕೆ ಅಭಿವೃದ್ಧಿ ಪ್ರಮಾಣ ಪತ್ರವನ್ನು ನೀಡಬೇಕಾಗಿದೆ. ಹಗರಣ ನಡೆದ ವೇಳೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಮಹಾವಂಚನೆಯ ಮಾಹಿತಿಗಳು, ದಾಖಲೆಗಳು ನಗರಾಭಿವೃದ್ಧಿ ಇಲಾಖೆಯ ಮೂಲಕ ತಲುಪಿದ್ದರೂ ಸಹ ಅದನ್ನು ತಡೆಯುವ ಪ್ರಯತ್ನವನ್ನೇ ಮಾಡದೆ ಜಾಣಮೌನ ವಹಿಸಿದ್ದರು ಎಂದು ರಮೇಶ್‌ ತಿಳಿಸಿದರು.

Follow Us:
Download App:
  • android
  • ios