* ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್ ಸರ್ಜರಿ* ರವಿ ಡಿ ಚೆನ್ನಣನವರ್ ಸೇರಿದಂತೆ 12 IPS ಅಧಿಕಾರಿಗಳ ಎತ್ತಂಗಡಿ * ರವಿ ಡಿ ಚನ್ನಣ್ಣವರ್ ಗ್ರಾಮಾಂತರ ಎಸ್ಪಿಯಿಂದ ಸಿಐಡಿ ಎಸ್ಪಿಯಾಗಿ ವರ್ಗಾವಣೆ

ಬೆಂಗಳೂರು, (ಜೂನ್.09): ಕೊರೋನಾ ಸಂದರ್ಭದಲ್ಲೂ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಲೇ ಇದೆ. 

Add Asianetnews Kannada as a Preferred SourcegooglePreferred

ಮೊನ್ನೇ ಅಷ್ಟೆ ಮೈಸೂರು ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳ ಟ್ರಾನ್ಸ್‌ಫರ್ ಬೆನ್ನಲ್ಲೇ ಇಂದು (ಬುಧವಾರ) ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚೆನ್ನಣ್ಣವರ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. 

ರೋಹಿಣಿ, ಶಿಲ್ಪಾನಾಗ್‌ ಇಬ್ಬರೂ ಎತ್ತಂಗಡಿ!

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
1. ಬೆಂಗಳೂರು ಗ್ರಾಮಾಂತರ ಎಎಸ್‌ಪಿಯಾಗಿದ್ದ ರವಿ ಡಿ. ಚೆನ್ನಣ್ಣನವರ್ ಅವರನ್ನ ಸಿಐಡಿ ಎಸ್‌ಪಿಗೆ ವರ್ಗಾವಣೆ ಮಾಡಲಾಗಿದೆ.
2. ಉಡುಪಿ ಎಸ್‌ಪಿಯಾಗಿದ್ದ R.ಚೇತನ್ ಅವರನ್ನ ಮೈಸೂರು ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
3.ಕಾರ್ತಿಕ್ ರೆಡ್ಡಿ ಕೋಲಾರದಿಂದ ವೈರ್ ಲೆಸ್ ಎಸ್‌ಪಿ ಬೆಂಗಳೂರು.
4. ರಾಹುಲ್ ಕುಮಾರ್ ಸಿಐಡಿಯಿಂದ ತುಮಕೂರು ಎಸ್‌ಪಿಯಾಗಿ ವರ್ಗಾವಣೆ
5. ಹನುಮಂತರಾಯ ದಾವಣಗೆರೆಯಿಂದ ಹಾವೇರಿಗೆ ವರ್ಗ
6. ಎ ಎನ್ ಪ್ರಕಾಶ್ ಗೌಡ, ಎಸ್ ಪಿ ಅಂತರಿಕ ಭದ್ರತಾ ವಿಭಾಗ ಬೆಂಗಳೂರು.
7. ಕೆ ಜಿ ದೇವರಾಜು, ಎಸ್ ಪಿ ಸಿಐಡಿ
8. ಸಿ ಬಿ ರಿಷ್ಯಂತ್, ಎಸ್ ಪಿ ದಾವಣಗೆರೆ.
9. ಡೆಕ್ಕ ಕಿಶೋರ್ ಬಾಬು, ಎಸ್ ಪಿ ಕೋಲಾರ.
10. ಕೊನಾ ವಂಶಿಕೃಷ್ಣ, ಎಸ್ ಪಿ ಬೆಂಗಳೂರು ಗ್ರಾಮಾಂತರ.
11. ಪ್ರದೀಪ್ ಗುಂಟಿ, ಡಿಸಿಪಿ ಮೈಸೂರು ಕಾನೂನು ಸುವ್ಯವಸ್ಥೆ.
12. ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕಲಬುರಗಿ, ಕಾನೂನು ಸುವ್ಯವಸ್ಥೆ.