ಜುಲೈ 25 ಮತ್ತು 26 ರಂದು ಬಿಜೆಪಿ ರಾಜ್ಯಾದ್ಯಂತ ಎಸ್‌ಐಆರ್ ಫಾರಂ ಕುರಿತು ಜಾಗೃತಿ ಮೂಡಿಸಲು ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ನಡೆಯುವ ಈ ಅಭಿಯಾನದಲ್ಲಿ, 1 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಹೊಂದಲಾಗಿದೆ -ವಿಜಯೇಂದ್ರ
- 1 ಕೋಟಿ ಮನೆಗಳ ತಲುಪುವ ಗುರಿ
- ಫಾರಂ ಭರ್ತಿಗೆ ಈ ವೇಳೆ ಸಹಾಯ
1 ಕೋಟಿ ಮನೆಗಳ ತಲುಪುವ ಗುರಿ
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ‘ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಂದು ಮಹಾಸಂಪರ್ಕ ಅಭಿಯಾನ ನಡೆಸುತ್ತೇವೆ. ಬಿಜೆಪಿಯ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಎರಡು ದಿನಗಳ ಈ ಅಭಿಯಾನದಲ್ಲಿ 1 ಕೋಟಿ ಮನೆಗಳನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ’ ಎಂದರು.
ಪ್ರತಿ ಬಿಜೆಪಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆಗಳು ಟಾರ್ಗೆಟ್
‘ಅಂದು ಬಿಜೆಪಿಯ ಪ್ರತಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆಗಳನ್ನು ತಲುಪುವ ಗುರಿ ನೀಡಲಾಗುತ್ತಿದೆ. ಅಭಿಯಾನದ ಮೂಲಕ ಮತದಾರರಿಗೆ ಎಸ್ಐಆರ್ ಫಾರ್ಮ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅದರ ಅಗತ್ಯತೆ, ಎಸ್‌ಐಆರ್ ಫಾರಂ ತುಂಬುವ ಪ್ರಕ್ರಿಯೆ, ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು ಸೇರಿದಂತೆ ಮತದಾರರಲ್ಲಿ ಎಸ್‌ಐಆರ್ ಫಾರಂ ಬಗೆಗೆ ಇರಬಹುದಾದ ಎಲ್ಲಾ ರೀತಿಯ ಗೊಂದಲ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಎಸ್‌ಐಆರ್ ಫಾರಂ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಈ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

