Asianet Suvarna News Asianet Suvarna News

ಸರ್ಕಾರದ ಮಹಾ ಎಡವಟ್ಟು: ಇಂಜಿನಿಯರ್ ಸತ್ತು 6 ತಿಂಗಳಾದ ನಂತರ ವರ್ಗಾವಣೆ ಆದೇಶ

ಸರ್ಕಾರಿ ಸೇವೆಯಲ್ಲಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದ ನಂತರ ಮೃತ ಅಧಿಕಾರಿಯನ್ನು ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ ನಗೆಪಾಟಲಿಗೀಡಾಗಿದೆ.

Urban development department transferred after 6 months of engineer death sat
Author
First Published Jul 13, 2024, 11:27 AM IST | Last Updated Jul 13, 2024, 11:27 AM IST

ಕಲಬುರಗಿ (ಜು.13): ರಾಜ್ಯ ಸರ್ಕಾರ ಅಧಿಕಾರಿಗಳು ಹಾಗೂ ನೌಕರರನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.. ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದ ನಂತರ ಮೃತ ಇಂಜಿನಿಯರ್‌ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಎಡವಟ್ಟು ಮಾಡಿಕೊಂಡಿದೆ.

ಹೌದು, ಯಾವುದೇ ಒಂದು ಸಂಘ, ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಬಗ್ಗೆ ಆಯಾ ಸಂಸ್ಥೆಯ ಮುಖ್ಯಸ್ಥರು ತಿಗಾ ವಹಿಸಿರುತ್ತಾರೆ. ಇನ್ನು ಕಂಪನಿ ಮುಖ್ಯಸ್ಥನಲ್ಲದಿದ್ದರೂ ಅವರ ಕೈಕೆಳಗಿರುವ ಆಡಳಿತ ಸಿಬ್ಬಂದಿ ಎಲ್ಲ ನೌಕರರ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತಾರೆ. ಆದರೆ, ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದರೂ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಸಿಕ್ಕಿಲ್ಲ. ಜೊತೆಗೆ, ಇಂಜಿನಿಯರ್ ಮೃತಪಟ್ಟು 6 ತಿಂಗಳು ಗೈರು ಹಾಜರಾದರೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇದರ ಬದಲಾಗಿ ವಾರ್ಷಿಕ ವರ್ಗಾವಣೆ ಮಾಡುವಂತೆ ಮೃತ ಇಂಜಿನಿಯರ್ ಹೆಸರನ್ನು ಉಲ್ಲೇಖಿಸಿ ವರ್ಗಾವಣೆ ಆದೇಶ ಸಿದ್ಧಪಡಿಸಿ ಕಚೇರಿ ಮತ್ತು ಮನೆಯ ವಿಳಾಸಕ್ಕೆ ರವಾನೆ ಮಾಡಿದೆ.

ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ನಾಗೇಂದ್ರ ಬಂಧನ ಬಳಿಕ ಬಸನಗೌಡ ದದ್ದಲ್ ನಾಪತ್ತೆ!

ಈ ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆಯಲ್ಲಿ. ಮೃತ ಇಂಜಿನಿಯರ್ ಅಶೋಕ್ ಪುಟಪಾಕ್ ಎನ್ನುವವರು ಕಳೆದ 6 ತಿಂಗಳ ಹಿಂದೆ ಜನವರಿಯಲ್ಲಿಯೇ ಮೃತಪಟ್ಟಿದ್ದಾರೆ. ಆದರೆ, ಇದಾದ ನಂತರ ಜು.9ರಂದು ಈ ಇಂಜಿನಿಯರ್‌ನನ್ನು ನಗರಾಭಿವೃದ್ಧಿ ಇಲಾಖೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಅಶೋಕ ಪುಟಪಾಕ್‌ ಅವರನ್ನು ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈಗ ಮೃತ ಅಧಿಕಾರಿ ಎಲ್ಲಿಂದ ಬಂದು ವರ್ಗಾವಣೆ ಪಡೆದು ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಜನರು ನಗಾಡಿಕೊಳ್ಳುತ್ತಿದ್ದಾರೆ. 

ನನ್ನದೇನು ತಪ್ಪಿಲ್ಲ, ನನಗೆ 24 ಗಂಟೆಗೊಮ್ಮೆ ಮೆಡಿಕಲ್ ಚೆಕಪ್ ಅಗತ್ಯವಿದೆ: ಜಡ್ಜ್‌ ಮುಂದೆ ನಾಗೇಂದ್ರ ಮನವಿ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ. ಜನವರಿ 12ರಂದು ಮೃತಪಟ್ಟಿದ್ದ ಕಿರಿಯ ಇಂಜಿನಿಯರ್ ಅಶೋಕ ಅವರು, ಇಲಾಖೆಯ ನೌಕರ ಮೃತಪಟ್ಟಿದ್ದರು ಎಂಬ ಮಾಹಿತಿ ಇಲ್ಲದೆ ನಗರಾಭಿವೃದ್ಧಿ ಇಲಾಖೆ ಮೃತ ವ್ಯಕ್ತಿಯನ್ನ ವರ್ಗಾವಣೆ ಮಾಡಿ ಮುಜುಗುರಕ್ಕಿಡಾಗಿದೆ.

Latest Videos
Follow Us:
Download App:
  • android
  • ios