ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ನಾಗೇಂದ್ರ ಬಂಧನ ಬಳಿಕ ಬಸನಗೌಡ ದದ್ದಲ್ ನಾಪತ್ತೆ!
ನಿನ್ನೆ ಎರಡನೇ ಬಾರಿಗೆ ಎಸ್‌ಐಟಿ ಮುಂದೆ ಹಾಜರಾಗಿದ್ದ ಬಸನಗೌಡ ದದ್ದಲ್. ವಿಚಾರಣೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಯಲಹಂಕ ನಿವಾಸದಲ್ಲೂ ಇಲ್ಲ, ದದ್ದಲ್ ನಿವಾಸದಲ್ಲೂ ಇಲ್ಲ. ವಿಚಾರಣೆ ಬಳಿಕ ಬಂಧನ ಸಾಧ್ಯತೆ ಮುನ್ಸೂಚನೆ ಸಿಕ್ಕ ಹಿನ್ನೆಲೆ ನಾಪತ್ತೆಯಾಗಿರುವ ಬಸನಗೌಡ ದದ್ದಲ.
ಬೆಂಗಳೂರು (ಜು.13): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಬಂಧನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಸತತ 48 ತಾಸುಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಇಬ್ಬರ ನಿವಾಸ ಮತ್ತು ನಿಗಮದ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿ ನಾಗೇಂದ್ರರನ್ನ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು. ಇದೀಗ ನಾಗೇಂದ್ರ ಬೆನ್ನಲ್ಲೇ ದದ್ದಲ್‌ರವನ್ನ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ನಿನ್ನೆ ಎರಡನೇ ಬಾರಿಗೆ ಎಸ್‌ಐಟಿ ಮುಂದೆ ಹಾಜರಾಗಿದ್ದ ಬಸನಗೌಡ ದದ್ದಲ್. ವಿಚಾರಣೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಯಲಹಂಕ ನಿವಾಸದಲ್ಲೂ ಇಲ್ಲ, ದದ್ದಲ್ ನಿವಾಸದಲ್ಲೂ ಇಲ್ಲ. ವಿಚಾರಣೆ ಬಳಿಕ ಬಂಧನ ಸಾಧ್ಯತೆ ಮುನ್ಸೂಚನೆ ಸಿಕ್ಕ ಹಿನ್ನೆಲೆ ನಾಪತ್ತೆಯಾಗಿರುವ ಬಸನಗೌಡ ದದ್ದಲ್. ಇತ್ತ ಇಡಿ ಅಧಿಕಾರಿಗಳು ಬಂಧನಕ್ಕೆ ತಯಾರಿ ಮಾಡಿಕೊಂಡಿದ್ದಾರೆನ್ನಲಾಗಿದೆ.
ಇನ್ನೊಂದೆಡೆ ಬಂಧನ ಕುಣಿಕೆ ಬಿಗಿಯಾಗುತ್ತಿದ್ದಂತೆ ನಾಪತ್ತೆಯಾಗಿರುವ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಿಗಾಗಿ ಹುಡುಕಾಟ ನಡೆಸಿರುವ ಇಡಿ. ಯುನಿಯನ್ ಬ್ಯಾಂಕ್ ಅಧಿಕಾರಿಗಳು ಇನ್ನೂ ಪತ್ತೆಯಾಗಿಲ್ಲ. ಬ್ಯಾಂಕ್ ಅಧಿಕಾರಿಗಳಿಗಾಗಿ ಎಸ್ ಐಟಿ ,ಇಡಿ,ಸಿಬಿಐ ಮೂರು ತನಿಖಾ ತಂಡಗಳಿಂದಲೂ ಶೋಧಕಾರ್ಯ ನಡೆದಿದೆ. ಈಗಾಗಲೇ ಬ್ಯಾಂಕ್‌ನ ಆರು ಮಂದಿ ಮೇಲೆ ಕೇಸ್ ದಾಖಲಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಆರು ಮಂದಿ ಬ್ಯಾಂಕ್ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ಎಸ್‌ಐಟಿಯಿಂದ ರಿಮ್ಯಾಂಡ್ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ.
ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ
ಇದೀಗ ಆರು ಮಂದಿ ಬ್ಯಾಂಕ್ ಅಧಿಕಾರಿಗಳ ಮೇಲೆ ತನಿಖಾ ತಂಡಗಳು ಕಣ್ಣಿಟ್ಟಿದ್ದಾರೆ. ಮನೆ ಅಡ್ರೆಸ್ ಹುಡುಕಿಕೊಂಡು ಹೋಗಿದ್ದ ತನಿಖಾಧಿಕಾರಿಗಳು. ಆದರೆ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ. ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಿರುವ ಹಿನ್ನೆಲೆ ತೀವ್ರ ಶೋಧ ನಡೆಸಿರುವ ತನಿಖಾಧಿಕಾರಿಗಳು. ನಿಗಮದ ಅಕೌಂಟ್‌ನಿಂದ ಬೇರೆ ಬೇರೆ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿರುವುದರಲ್ಲಿ ಈ ಅಧಿಕಾರಿಗಳ ಕೈವಾಡವೇ ಮುಖ್ಯವಾಗಿದೆ ಹೀಗಾಗಿ ತಲೆಮರೆಸಿಕೊಂಡಿರುವ ಅಧಿಕಾರಿಗಳು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದರೆ ಇನ್ನಷ್ಟು ಪ್ರಭಾವಿಗಳ ಹೆಸರು ಬಯಲಾಗಲಾಗಲಿದೆ ಎನ್ನಲಾಗಿದೆ.
ವಾಲ್ಮೀಕಿ ಹಗರಣದ ಹಣದಿಂದ ಬೆಂಜ್ ಕಾರು ಕೊಂಡಿದ್ದ ಮಾಸ್ಟರ್‌ಮೈಂಡ್ ಆರೋಪಿ..!
ಒಂದು ವೇಳೆ ನಾಪತ್ತೆಯಾಗಿರುವ ಅಧಿಕಾರಿಗಳು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿದರೆ ತನಿಖಾಧಿಕಾರಿಗಳು ಈ ವಿಚಾರವಾಗಿ ಪ್ರಶ್ನಿಸಬಹುದು, ನಿಗಮದ ಬ್ಯಾಂಕ್ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಲು ಸೂಚಿಸಿದ್ದು ಯಾರು? ಮೌಖಿಕ ಆದೇಶ ಕೊಟ್ಟವರು ಯಾರು? ನಿಗಮದ ಎಂಡಿ ಅಥವಾ ಅಧಿಕಾರಿಗಳೇ ಹಣ ವರ್ಗಾವಣೆಗೆ ಹೇಳಿದ್ರಾ? ಕೋಟಿ ಕೋಟಿ ಆರ್ ಟಿಜಿಎಸ್ ಮಾಡಲು ಅಧಿಕೃತ ಮಾಹಿತಿ ಕೊಟ್ಟಿದ್ದು ಯಾರು? ಒಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳ ಶಾಮೀಲಿನ ಬಗ್ಗೆ ತನಿಖೆ ಕೈಗೊಂಡಿರೋ ಮೂರು ತನಿಖಾ ಸಂಸ್ಥೆಗಳು. ಇತ್ತ ನಾಗೇಂದ್ರ ಬಂಧನ ಬಳಿಕ ನಾಪತ್ತೆಯಾಗಿರುವ ಬಸನಗೌಡ ದದ್ದಲ್‌ಗೆ ಬಂಧನದ ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿರುವುದು ಸೂಚಿಸಿದೆ.