ವೆಸ್ಟರ್ನ್ ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆ ಖಾಲಿ, ಅರ್ಜಿ ಹಾಕಿ
ವೆಸ್ಟರ್ನ್ ಸೆಂಟ್ರಲ್ ರೈಲ್ವೆಯುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಒಟ್ಟಾರೆ 561 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಜಗತ್ತಿನಲ್ಲೇ ಅತಿದೊಡ್ಡ ರೈಲು ನೆಟ್ವರ್ಕ್ ಹೊಂದಿರುವ ಭಾರತೀಯ ರೈಲ್ವೇ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ವರ್ಷಪೂರ್ತಿ ನೇಮಕಾತಿ ನಡೆಯುತ್ತಲೇ ಇರುತ್ತದೆ. ಇದೀಗ ಪಶ್ಚಿಮ ಸೆಂಟ್ರಲ್ ರೈಲ್ವೆ (ಡಬ್ಲ್ಯುಸಿಆರ್) ವಿವಿಧ ಇಲಾಖೆಗಳಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಫೆಬ್ರವರಿ 27, 2021 ರೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸುಮಾರು 561 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಈಗಾಗಲೇ ಜನವರಿ 27ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹಾಗೆಯೇ 2021 ಫೆಬ್ರವರಿ 21 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂಬುದನ್ನ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು.
ಕಾರ್ ಲೋನ್ ಮೇಳವಲ್ಲ, ಸ್ವ ಉದ್ಯೋಗ ಸಾಲ ಮೇಳ!
WCR ಅಪ್ರೆಂಟಿಸ್ 2021 ಗಾಗಿ ಆನ್‌ಲೈನ್ ಅರ್ಜಿಯನ್ನು ಈಗಾಗಲೇ wcr.indianrailways.gov.in ನಲ್ಲಿ ಪ್ರಾರಂಭಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಲು ಸೂಚಿಸಲಾಗಿದೆ. ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗೆ ಅಗತ್ಯವಿರುವ ಅರ್ಹತೆ, ವಯಸ್ಸಿನ ಮಿತಿ, ಅರ್ಹತೆ ಮತ್ತು ಇತರ ವಿವರಗಳನ್ನು ತಿಳಿದುಕೊಂಡು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು.
ಖಾಲಿ ಇರುವ ೫೬೧ ಹುದ್ದೆಗಳು: ಡೀಸೆಲ್ ಮೆಕ್ಯಾನಿಕ್ – 35, ಎಲೆಕ್ಟ್ರಿಷಿಯನ್ – 160, ವೆಲ್ಡರ್, (ಗ್ಯಾಸ್ ಮತ್ತು ಎಲೆಕ್ಟ್ರಾನಿಕ್ಸ್) – 30, ಯಂತ್ರಶಾಸ್ತ್ರಜ್ಞ – 5, ಫಿಟ್ಟರ್ – 140, ಟರ್ನರ್ – 5, ವೈರ್‌ಮ್ಯಾನ್ – 15, ಮೇಸನ್ – 15, ಕಾರ್ಪೆಂಟರ್ – 15, ಪೈಂಟರ್ – 10, ಗಾರ್ಡನರ್ – 2, ಫ್ಲೋರಿಸ್ಟ್ ಆಂಡ್ ಲ್ಯಾಂಡ್‌ಸ್ಕೇಪಿಂಗ್ – 2, ಪಂಪ್ ಆಪರೇಟರ್ ಕಮ್ ಮೆಕ್ಯಾನಿಕ್ – 20, ತೋಟಗಾರಿಕೆ ಸಹಾಯಕ – 5, ಮಾಹಿತಿ ಸಂವಹನ ತಂತ್ರಜ್ಞಾನ ವ್ಯವಸ್ಥೆ ನಿರ್ವಹಣೆ – 5, ಕೋಪಾ – 50, ಸ್ಟೆನೋಗ್ರಾಫರ್ (ಹಿಂದಿ) – 7, ಸ್ಟೆನೋಗ್ರಾಫರ್ (ಇಂಗ್ಲಿಷ್) – 8, ಅಪ್ರೆಂಟಿಸ್ ಆಹಾರ ಉತ್ಪಾದನೆ (ಸಾಮಾನ್ಯ) – 2, ಅಪ್ರೆಂಟಿಸ್ ಆಹಾರ ಉತ್ಪಾದನೆ (ಸಸ್ಯಾಹಾರಿ) – 2, ಅಪ್ರೆಂಟಿಸ್ ಆಹಾರ ಉತ್ಪಾದನೆ (ಅಡುಗೆ) – 5, ಹೋಟೆಲ್ ಕ್ಲರ್ಕ್ / ರಿಸೆಪ್ಷನಿಸ್ಟ್ – 1, ಡಿಜಿಟಲ್ ಛಾಯಾಗ್ರಾಹಕ – 1, ಅಸಿಸ್ಟೆಂಟ್ ಫ್ರಂಟ್ ಆಫೀಸರ್ ಮ್ಯಾನೇಜರ್ – 1, ಕಂಪ್ಯೂಟರ್ ನೆಟ್‌ವರ್ಕಿಂಗ್ ಟೆಕ್ನಿಷನ್ – 4, ಕ್ರೆಚೆ ಮ್ಯಾನೇಜ್ಮೆಂಟ್ ಅಸಿಸ್ಟೆಂಟ್ – 1, ಸೆಕ್ರೆಟರಿಯಲ್ ಅಸಿಸ್ಟೆಂಟ್ – 4, ಹೌಸ್ ಕೀಪರ್ – 7, ಆರೋಗ್ಯ ನೈರ್ಮಲ್ಯ ನಿರೀಕ್ಷಕರು – 2, ದಂತ ಪ್ರಯೋಗಾಲಯ ತಂತ್ರಜ್ಞ – 2.
ಸಿಎಜಿಯಲ್ಲಿ 10811 ಹುದ್ದೆ ಖಾಲಿ; ಆಡಿಟರ್, ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿ.
ಅರ್ಹತಾ ಮಾನದಂಡ: ಸಂಬಂಧಿತ ವಿಷಯದಲ್ಲಿ ಐಟಿಐ ಪಾಸ್ ಪ್ರಮಾಣಪತ್ರದೊಂದಿಗೆ 10 ನೇ ಪಾಸ್ ಪರೀಕ್ಷೆಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಅಭ್ಯರ್ಥಿಗಳು 15 ರಿಂದ 24 ವರ್ಷದೊಳಗಿನವರಾಗಿರಬೇಕು (ಸರ್ಕಾರಿ ಮಾನದಂಡಗಳ ಪ್ರಕಾರ ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರುತ್ತದೆ)
ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್
ದೇಶದಲ್ಲಿ ರೇಲ್ವೆ ಇಲಾಖೆ ಬಹುದೊಡ್ಡ ಉದ್ಯೋಗದಾತ ಇಲಾಖೆಯಾಗಿದೆ. 2019ರ ಮಾರ್ಚ್ ಲೆಕ್ಕಾಚಾರ ಪ್ರಕಾರ, ಇಂಡಿಯನ್ ರೈಲ್ವೆ 289,185 ಸರಕು ವ್ಯಾಗನ್ ಮತ್ತು 74,003 ಪ್ಯಾಸೆಂಜರ್ ಕೋಚ್‌ಗಳು, 12,147 ಲೋಕೋಮೊಟಿವ್‌ಗಳನ್ನು ಒಳಗೊಂಡಿದೆ. 2019ರ ಮಾರ್ಚ್ ಅನ್ವಯವಾಗುವಂತೆ13 ಲಕ್ಷ ಜನರಿಗ ಉದ್ಯೋಗ ನೀಡಿದೆ. ಅತಿ ಹೆಚ್ಚು ಉದ್ಯೋಗ ನೀಡುವ ಕಂಪನಿಗಳ ಪೈಕಿ ಇಂಡಿಯನ್ ರೈಲ್ವೆ 8ನೇ ಸ್ಥಾನದಲ್ಲಿದೆ ಮತ್ತು ಅತಿ ದೊಡ್ಡ ರೈಲು ನೆಟ್ವರ್ಕ್‌ನಲ್ಲಿ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ.