ಬಡತನವಿದ್ರೂ ಕಷ್ಟಪಟ್ಟು ಅದ್ಹೇಗೋ ವಿದ್ಯಾಭ್ಯಾಸ ಮುಗಿಸಿಬಿಡಬಹುದು. ಅದೆಷ್ಟೋ ವಿದ್ಯಾರ್ಥಿಗಳಿಗೆ ಕಂಪನಿಗಳಲ್ಲಿ ಉದ್ಯೋಗ ಮಾಡುವುದು ಇಷ್ಟವಿರಲ್ಲ. ತಾವೇ ಸ್ವಂತ ಕಂಪನಿ ತೆರೆಯಬೇಕು, ಯಾವುದಾದ್ರೂ ಬ್ಯುಸಿನೆಸ್ ಮಾಡಬೇಕು, ಸ್ವಾವಲಂಬಿಯಾಗಬೇಕು ಅನ್ನೋ ಕನಸಿರುತ್ತದೆ. ಆದ್ರೆ ಅದಕ್ಕೆಲ್ಲಾ ಹಣ ಬೇಕು. ಬ್ಯಾಂಕುಗಳಿಂದ ಸಾಲ ಪಡೆಯೋಣ ಅಂದ್ರೂ ಅಷ್ಟು ಸುಲಭವಾಗಿ ಸಾಲ ಸಿಗಲ್ಲ. ಹೀಗಾಗಿ ಸರ್ಕಾರಗಳೇ ಸ್ವ-ಉದ್ಯೋಗ ಮಾಡುವವರಿಗೆ ನೆರವಾದ್ರೆ ಎಷ್ಟು ಅನುಕೂಲ ಆಗುತ್ತೆ ಅಲ್ವಾ?. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರೋ ಪಂಜಾಬ್ ಸರ್ಕಾರ, ಮೆಗಾ ಸ್ವ-ಉದ್ಯೋಗ ಸಾಲ ಮೇಳವನ್ನು ಉದ್ಘಾಟಿಸಿದೆ.

ಪಟಿಯಾಲದಲ್ಲಿ  ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ತಮ್ಮ ಸರ್ಕಾರದ ಪ್ರಮುಖ 'ಘರ್ ಘರ್ ರೋಜ್ಗರ್ ಮತ್ತು ಕಾರೋಬರ್ ಮಿಷನ್' ನ ಅಂಗವಾಗಿ ಸ್ವ-ಉದ್ಯೋಗ ಸಾಲ ಮೇಳಕ್ಕೆ ಚಾಲನೆ ನೀಡಿದರು. ಸಾಂಕೇತಿಕವಾಗಿ, 1,000 ಸಾಲ ಮಂಜೂರಾತಿ ಪ್ರಮಾಣಪತ್ರಗಳ ಟೋಕನ್ ಅನ್ನು ರಾಜ್ಯಾದ್ಯಂತ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಿಎಂ ಅಮರಿಂದರ್ ಸಿಂಗ್, ಐದು ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್

ಈ ಸ್ವ-ಉದ್ಯೋಗ ಮೇಳವು ೨೦೧೭ರ ಮಾರ್ಚ್‌ನಿಂದ ಖಾಸಗಿ, ಸರ್ಕಾರಿ ವಲಯದಲ್ಲಿ ಅಥವಾ ಸ್ವಯಂ ಉದ್ಯೋಗದಲ್ಲಿ 15 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಪಡೆಯಲು ಅನುಕೂಲವಾಗಿದೆ. ಅಧಿಕೃತ ಮಾಹಿತಿ ಪ್ರಕಾರ, ಪ್ರತಿ ನಿತ್ಯ 1,100 ಯುವಕರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಈ ಅವಧಿಯಲ್ಲಿ 8.8 ಲಕ್ಷ ಯುವಕರಿಗೆ ಸ್ವ ಉದ್ಯೋಗ ಮಾಡಲು, 5.69 ಲಕ್ಷ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ದೊರೆತಿದೆ ಮತ್ತು 58,258 ಯುವಕರಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗ ದೊರೆತಿದೆ. ಕಳೆದ ಅಕ್ಟೋಬರ್-ಡಿಸೆಂಬರ್ 2020ರವರೆಗೆ ಒಟ್ಟು 1.7 ಲಕ್ಷ ಯುವಕರಿಗೆ ಉದ್ಯೋಗ / ಸ್ವ-ಉದ್ಯೋಗಾವಕಾಶಗಳು ಲಭ್ಯವಾಗಿವೆ ಅಂತಾರೆ ಕ್ಯಾಪ್ಟನ್ ಅಮರಿಂದರ್ ಸಿಂಗ್.

ಮೆಗಾ ಸ್ವ-ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ ಅಮರಿಂದರ್‌ಸಿಂಗ್, ಕೋವಿಡ್ -19 ಅಬ್ಬರ ತಗ್ಗುತ್ತಿರೋದ್ರಿಂದ ಇನ್ಮುಂದೆ ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಎರಡು ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು  ಘೋಷಿಸಿದರು.

ಅಲ್ಲದೆ, ಒಂದು ಲಕ್ಷ ಉದ್ಯೋಗಗಳನ್ನು ನೀಡುವ ಗುರಿಯನ್ನು ಸಾಧಿಸುವ ಸಲುವಾಗಿ, ಸರ್ಕಾರಿ ಉದ್ಯೋಗಗಳನ್ನು ಈ ವರ್ಷ ನಿಯಮಿತವಾಗಿ ಪ್ರಚಾರ ಮಾಡಲಾಗುವುದು. 20,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಜಾಹೀರಾತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

ಪಂಜಾಬ್‌ ರಾಜ್ಯದಲ್ಲಿ ಈ ಸಲ ಸಕ್ರಿಯ ಹೊಸ ಕೈಗಾರಿಕಾ ನೀತಿ, 71,000 ಕೋಟಿ ಮೌಲ್ಯದ ಕೈಗಾರಿಕಾ ಹೂಡಿಕೆಗಳು ನಡೆದಿವೆ. ಇದರಿಂದ 2.5 ಲಕ್ಷ ಸಂಭಾವ್ಯ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಿಎಂ ಅಮರಿಂದರ್ ಸಿಂಗ್ ತಿಳಿಸಿದರು.

ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಪಂಜಾಬ್ ಸರ್ಕಾರ ಸರ್ಕಾರಿ ನೌಕರರಿಗೆ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಿದೆ. ಸರ್ಕಾರಿ ವಲಯದಲ್ಲಿ ನೇಮಕಾತಿ ಮಿತಿಗಳನ್ನು ನಿಭಾಯಿಸುವುದರ ಜೊತೆಗೆ ಪ್ರತಿವರ್ಷ ನಿವೃತ್ತಿಯ ಮೂಲಕ ಕೇವಲ 13,000 ಹುದ್ದೆಗಳನ್ನು ರಚಿಸಲಾಗುತ್ತದೆ. ಕೈಗಾರಿಕೆಗಳು, ಸ್ವ ಉದ್ಯೋಗ ಮತ್ತು ಖಾಸಗಿ ಕ್ಷೇತ್ರಗಳನ್ನು ಉತ್ತೇಜಿಸುವತ್ತ ತಮ್ಮ ಸರ್ಕಾರ ಗಮನ ಹರಿಸಲಿದೆ. ಸಾಂಕ್ರಾಮಿಕ ರೋಗ ಕೊನೆಯಾಗುತ್ತಿದ್ದಂತೆ ಉದ್ಯಮದ ಉದ್ಯೋಗಗಳು ಇನ್ನಷ್ಟು ಹೆಚ್ಚಾಗಲಿವೆ ಅನ್ನೋದು ಸಿಎಂ ಅಭಿಪ್ರಾಯ.

ಕಾನೂನುಬಾಹಿರ ಏಜೆಂಟರ ಶೋಷಣೆಯಿಂದ ರಕ್ಷಿಸಿಕೊಳ್ಳಲು ಕಾನೂನು ಮಾರ್ಗಗಳ ಮೂಲಕ ವಿದೇಶಕ್ಕೆ ಹೋಗಲು ಆಸಕ್ತಿ ಹೊಂದಿರುವ ಯುವಕರಿಗೆ ಫೆಬ್ರವರಿ 15 ರಿಂದ ಸಮಾಲೋಚನಾ ಸೇವೆ ಪ್ರಾರಂಭವಾಗಲಿದೆ ಎಂದು ಉದ್ಯೋಗ ಉತ್ಪಾದನೆ ಮತ್ತು ತರಬೇತಿ ಸಚಿವ ಚರಣ್‌ಜೀತ್ ಸಿಂಗ್ ಚನ್ನಿ ತಿಳಿಸಿದರು.

ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ