ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಶಾಖೆಯ ಶಾಶ್ವತ ಆಧಾರದ ಮೇಲೆ ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ (ಇಎಟಿ) ಹಾಗೂ ಟೆಕ್ನಿಷಿಯನ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಮಾನ್ಯತೆ ಹೊಂದಿರುವ ಸಂಸ್ಥೆಯಲ್ಲಿ ೩ ವರ್ಷದ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಪೂರೈಸಿರುವ ಅಭ್ಯರ್ಥಿಗಳು ಇಎಟಿ ಹುದ್ದೆ ಅರ್ಜಿ ಸಲ್ಲಿಸಬಹುದು. ಐಟಿಐ ಪಾಸ್ ಆಗಿದ್ದು, 3 ವರ್ಷದ ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್ ಕೋರ್ಸ್ ಮಾಡಿರುವವರು ಟೆಕ್ನಿಷಿಯನ್ ʼಸಿʼ ಹುದ್ದೆಗಳಿಗೆ ಅರ್ಜಿ ಹಾಕಬಹುದು.

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿಗಳಿಗೆ ಮೊದಲ ೬ ತಿಂಗಳು ತಮ್ಮ ತರಬೇತಿ ಅವಧಿಯಲ್ಲಿ ಮಾಸಿಕ ೧೦,೦೦೦ ರೂಪಾಯಿ ಸ್ಟೈ ಫಂಡ್ ನೀಡಲಾಗುತ್ತದೆ. ಟ್ರೈನಿಂಗ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ ಗ್ರಾಡೇಷನ್ ಪರೀಕ್ಷೆ ಮಾಡಿ, ಹುದ್ದೆಯ ನಿಗದಿಯನ್ನು ನೀಡೋದರ ಜೊತೆಗೆ ನಿಗದಿತ ವೇತನ ನೀಡಲಾಗುವುದು.

ಬಿಇಎಲ್‌ನಲ್ಲಿ ಒಟ್ಟು 52 ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡಲು ಸಂಸ್ಥೆ ಮುಂದಾಗಿದೆ.

ಈ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ನೋಂದಣಿಯು 2020 ಜನವರಿ 21ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 2020 ಫೆಬ್ರವರಿ 4ನೇ ತಾರೀಖು ಕೊನೆಯ ದಿನವಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ನಿಗದಿ ಪಡಿಸಲಾಗಿದೆ. ಅಂದರೆ, 2021ರ ಜನವರಿ 1ಕ್ಕೆ ವಯೋಮಿತಿ 28 ವರ್ಷಗಳಾಗಿರಬೇಕು.  ಸಾಮಾನ್ಯವಾಗಿ ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ಹಾಗೂ ಟೆಕ್ನಿಷಿಯನ್ ಸಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ೨೮ ವರ್ಷಗಳಾಗಿರುತ್ತದೆ. ಆದರೆ, ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೂರು ವರ್ಷ ವಯೋಮಿತ ಸಡಿಲಿಕೆ ಇದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ  ಸೇರಿದ ಅಭ್ಯರ್ಥಿಗಳಿಗೆ ಐದು ವರ್ಷಗಳು ಮತ್ತು ಶೇ.40ರಷ್ಟು ಅಂಗವೈಕಲ್ಯವನ್ನು ಹೊಂದಿದ ಪರಿಶಿಷ್ಟ ಪಂಗಡಕ್ಕೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು, ಅರ್ಜಿಯೊಂದಿಗೆ ಅಗತ್ಯ ಪ್ರಮಾಣಪತ್ರಗಳ ಪ್ರತಿಯನ್ನು ಲಗತ್ತಿಸಬೇಕು. ಲಿಖಿತ ಪರೀಕ್ಷೆ ಅಥವಾ ಪರಿಶೀಲನಾ ಪ್ರಕ್ರಿಯೆಯ ಯಾವುದೇ ಹಂತದಲ್ಲೂ ಓರಿಜಿನಲ್ ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ.

ಆಯ್ಕೆಯ ವಿಧಾನ: ಆಯ್ಕೆ ಪ್ರಕ್ರಿಯೆಯ ಎಲ್ಲಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳು, ೧೫೦ ಅಂಕಗಳಿರುವ ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ.

ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ

ಸಾಮಾನ್ಯ ವಿಷಯ: 50 ಅಂಕಗಳು- ಸಾಮಾನ್ಯ ಗಣಿತ ಸಾಮರ್ಥ್ಯ, ತಾಂತ್ರಿಕ ಕಾರಣಗಳ ವಿಶ್ಲೇಷಣೆ, ಸಾಮರ್ಥ್ಯ ಪರೀಕ್ಷೆ, ಬೇಸಿಕ್ ಸಂಖ್ಯಾಶಾಸ್ತ್ರ, ಡಾಟಾ ವ್ಯಾಖ್ಯಾನ ಕೌಶಲ್ಯ ಹಾಗೂ ಸಾಮಾನ್ಯ ಜ್ಞಾನ.

ಟೆಕ್ನಿಕಲ್ ಆಪ್ಟಿಟ್ಯೂಡ್: 100 ಅಂಕಗಳು- 100 ನಿರ್ದಿಷ್ಟ ಪ್ರಶ್ನೆಗಳನ್ನು ಹೊಂದಿರುವ ಟೆಕ್ನಿಕಲ್/ ವೃತ್ತಿಪರ  ಜ್ಞಾನ ಪರೀಕ್ಷೆ ನಡೆಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಫೆಬ್ರವರಿ 3ಕ್ಕಿಂತ ಮುಂಚೆ ಆನ್‌ಲೈನ್‌ನಲ್ಲಿ ಸಬ್ ಮಿಟ್ ಮಾಡಬೇಕು. ಜನರಲ್, ಒಪಿಸಿ ಮತ್ತು ಇಡಬ್ಲ್ಯೂಎಸ್‌ಗೆ ಸೇರಿದ ಅಭ್ಯರ್ಥಿಗಳು ನಾನ್ ರಿಫಂಡೇಬಲ್ ಆನ್‌ಲೈನ್ ಅರ್ಜಿ ಶುಲ್ಕ 300 ರೂ. ಕೊಡಬೇಕು. ಜೊತೆಗೆ ಅಭ್ಯರ್ಥಿಗಳು ಕರ್ನಾಟಕ ಎಂಪ್ಲಾಯಮೆಂಟ್ ಎಕ್ಸೆಂಜ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಜೊತೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಫೋಟೋಗ್ರಾಪ್, ಶೈಕ್ಷಣಿಕ ಅರ್ಹತಾ ಸರ್ಟಿಫಿಕೇಟ್‌ಗಳ ಸ್ಕ್ಯಾನ್ಡ್ ಪ್ರತಿಗಳನ್ನು ಲಗತ್ತಿಸಬೇಕು.

ಅರ್ಹ ಅಭ್ಯರ್ಥಿಗಳು ಜನರಲ್ ಮತ್ತು ಆಪ್ಟಿಟ್ಯೂಟ್ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. 150 ಅಂಕಗಳ ಪರೀಕ್ಷೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ನೋಟಿಫಿಕೇಷನ್ ನೋಡಬಹುದು. ಬಿಇಎಲ್ ಜಾಲತಾಣದಲ್ಲಿ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು.

ಕೇಂಬ್ರಿಡ್ಜ್ ವಿವಿಯಲ್ಲಿ ಒಂದು ವರ್ಷ ಉಚಿತ ಕೋರ್ಸ್!