ಸಿಎಜಿಯಲ್ಲಿ 10811 ಹುದ್ದೆ ಖಾಲಿ; ಆಡಿಟರ್, ಅಕೌಂಟೆಟ್ ಹುದ್ದೆಗೆ ಅರ್ಜಿ ಸಲ್ಲಿಸಿ
ಕಂಟ್ರೋಲರ್ ಆಂಡ್ ಆಡಿಟರ್ ಜನರಲ್(ಸಿಎಜಿ)ಯಲ್ಲಿ ಖಾಲಿ ಇರುವ 10 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 19 ಕೊನೆಯ ದಿನವಾಗಿದೆ. ಆಡಿಟರ್ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
೧೦ ಸಾವಿರಕ್ಕೂ ಹೆಚ್ಚು ಖಾಲಿ ಇರುವ ಲೆಕ್ಕಪರಿಶೋಧಕ ಮತ್ತು ಅಕೌಂಟೆಂಟ್ ಹುದ್ದೆಗಳ ನೇಮಕಾತಿಗಾಗಿ ಕಂಟ್ರೋಲರ್ ಆಫ್ ಆಡಿಟರ್ ಜನರಲ್ (ಸಿಎಜಿ) ಅರ್ಜಿಗಳನ್ನು ಆಹ್ವಾನಿಸಿದೆ.
6409 ಲೆಕ್ಕಪರಿಶೋಧಕ ಮತ್ತು 4402 ಅಕೌಂಟೆಂಟ್ ಹುದ್ದೆಗಳು ಸೇರಿದಂತೆ ಒಟ್ಟು 10,811 ಹುದ್ದೆಗಳು ಖಾಲಿಯಿದ್ದು, ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 21, 2021 ರಂದು ಅಥವಾ ಮೊದಲು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸಿಎಜಿ ಕಚೇರಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದು.
ಕಾರ್ ಲೋನ್ ಮೇಳವಲ್ಲ, ಸ್ವ ಉದ್ಯೋಗ ಸಾಲ ಮೇಳ!
ಸಿಎಜಿ ನೇಮಕಾತಿ-೨೦೨೧ಗೆ ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರಾಜ್ಯ ಜನರಲ್ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಭಾಷಾ ಪ್ರವೀಣ್ಯತೆ ಹಾಗೂ ನಿಗದಿತ ಮಟ್ಟದಲ್ಲಿ ಪರೀಕ್ಷಿಸೋ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳ ವಯೋಮಿತಿ ೧೮ ರಿಂ ೨೭ ವರ್ಷದೊಳಗೆ ಇರಬೇಕು. ನಿಗದಿತ ಕಾಯ್ದಿರಿಸಿದ ವರ್ಗಗಳ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ. ನೇಮಕಗೊಂಡ ಎಲ್ಲಾ ಸಿಎಜಿ ಅಭ್ಯರ್ಥಿಗಳಿಗೆ ಪರೀಕ್ಷೆಯ ಅವಧಿ ನೇರ ನೇಮಕಾತಿಗಾಗಿ ಎರಡು ವರ್ಷಗಳವರೆಗೆ ಇರುತ್ತದೆ.
ಸಿಎಜಿ ಲೆಕ್ಕಪರಿಶೋಧಕ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ನಿಗದಿಪಡಿಸಿದ ಪೇ ಮ್ಯಾಟ್ರಿಕ್ಸ್ 5 ನೇ ಹಂತ (ರೂ. 29,200- 92,300)
ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್
cag.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಹೋಮ್‌ಪೇಜ್‌ನಲ್ಲಿ ʼಎಂಪ್ಲಾಯಿ ಕಾರ್ನರ್ʼಗೆ ಹೋಗಿ ಓಪನಿಂಗ್ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಪೇಜ್‌ವೊಂದು ಡಿಸ್‌ಪ್ಲೇ ಆಗುತ್ತದೆ. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಬಳಿಕ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಹಾರ್ಡ್ ನಕಲನ್ನು ಶ್ರೀ ವಿ.ಎಸ್.ವೆಂಕಟನಾಥನ್, ಅಸಿಸ್ಟೆಂಟ್, ಸಿ&ಎಜಿ(ಎನ್), ಒ/ಒ ಸಿ & ಎಜಿ ಆಫ್ ಇಂಡಿಯಾ-೯, ದೀನ್ ದಯಾಳ್ ಉಪಾಧ್ಯಾಯ ಮಾರ್ಗ, ನವದೆಹಲಿ - 110124ಗೆ ಕಳುಹಿಸಿ.
ಸಿಎಜಿ ಒಟ್ಟು 10,811 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಪೈಕಿ ಕರ್ನಾಟಕದಲ್ಲೂ 488 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದ ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್ (ಸಿಎಜಿ), ಭಾರತದ ಸಂವಿಧಾನದ 148 ನೇ ವಿಧಿ ಅನ್ವಯ ಸ್ಥಾಪಿಸಲಾದ ದೇಶದ ಸಾಂವಿಧಾನಿಕ ಪ್ರಾಧಿಕಾರ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ರಶೀದಿಗಳು ಮತ್ತು ಖರ್ಚುಗಳ ಲೆಕ್ಕ ಪರಿಶೀಲನೆ ನಡೆಸುವ ಅಧಿಕಾರ ಸಿಎಜಿಗೆ ಇರುತ್ತದೆ. ಇದರಲ್ಲಿ ಸರ್ಕಾರದಿಂದ ಗಣನೀಯವಾಗಿ ಹಣಕಾಸು ಪಡೆಯುವ ಸ್ವಾಯತ್ತ ಸಂಸ್ಥೆಗಳು ಮತ್ತು ನಿಗಮಗಳು ಸೇರುತ್ತವೆ. ದೇಶದ ಉನ್ನತ ಸಂಸ್ಥೆಗಳಲ್ಲಿ ಸಿಎಜಿ ಒಂಬತ್ತನೇ ಸ್ಥಾನದಲ್ಲಿದೆ. ಅಲ್ಲದೇ ಆದ್ಯತೆಯ ಕ್ರಮದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಂತೆಯೇ ಸ್ಥಾನಮಾನವನ್ನು ಹೊಂದಿದೆ.
5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ