ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಎಂಬ ಬಾಲಕ FIDE ಮಾನ್ಯತೆ ಪಡೆದ ಅತ್ಯಂತ ಕಿರಿಯ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾನೆ. ಪೋಷಕರು ಮೊಬೈಲ್‌ನಿಂದ ಮಗುವನ್ನು ದೂರವಿಡಲು ಕಂದನನ್ನು ಚೆಸ್‌ಗೆ ಪರಿಚಯಿಸಿದ್ದು ಪೋಷಕರ ಶ್ರಮಕ್ಕೆ ಫಲ ಸಿಕ್ಕಿದೆ.

ನವದೆಹಲಿ: ಭಾರತೀಯ ಪುರಾತನ ಆಟ ಚದುರಂಗದಲ್ಲಿ ಮೂರು ವರ್ಷದ ಮಗುವೊಂದು ಹೊಸ ಇತಿಹಾಸ ಸೃಷ್ಟಿಸಿದ್ದು, ಫೆಡರೇಶನ್ ಇಂಟರ್ನ್ಯಾಷನಲ್ ಡೆಸ್ ಎಚೆಕ್ಸ್(FIDE)ನಿಂದ ಮಾನ್ಯತೆ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಪ್ರಶಂಸೆ ಹಾಗೂ ಸಾಧನೆಗೆ ಪಾತ್ರರಾಗಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹ ಎಂಬುವವರೇ ಈ ಸಾಧನೆ ಮಾಡಿದ ಮಗು. 3 ವರ್ಷ, 7 ತಿಂಗಳು ಮತ್ತು 20 ದಿನಗಳಲ್ಲಿ ಈ ಮಗು ಸರ್ವಜ್ಞ ಸಿಂಗ್ ಕುಶ್ವಾಹ್ ಅವರು ಪಶ್ಚಿಮ ಬಂಗಾಳದ ಅನೀಶ್ ಸರ್ಕಾರ್ ಅವರ ಹಿಂದಿನ ದಾಖಲೆಯನ್ನು ಮುರಿದು 1572 ರೇಟಿಂಗ್‌ನೊಂದಿಗೆ ಜಾಗತಿಕ ಚೆಸ್ ಶ್ರೇಯಾಂಕವನ್ನು(Ranking) ಪ್ರವೇಶಿಸಿದ್ದಾರೆ. ಈ ಮೂಲಕ ಅವರೊಬ್ಬ ಚೆಸ್ ಅದ್ಭುತವಾಗಿ ಬದಲಾಗಿದ್ದಾರೆ. ಈ ಬಾಲಕ 30ರ ಹರೆಯದ ಅಂತಾರಾಷ್ಟ್ರೀಯ ಮಟ್ಟದ ಶ್ರೇಯಾಂಕಿತ ಆಟಗಾರರನ್ನು ಸೋಲಿಸುವ ಮೂಲಕ ಈ ಹಂತ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ

ಪುಟ್ಟ ಕಂದನಿಂದ ಅಂತರರಾಷ್ಟ್ರೀಯ ಮಟ್ಟದ ಶ್ರೇಯಾಂಕಿತ ಆಟಗಾರನೆನಿಸುವವರೆಗಿನ ಮಗು ಸರ್ವಜ್ಞನ ಈ ಚೆಸ್‌ ಪ್ರಯಾಣವು ನಿಜವಾಗಿಯೂ ಅಮೋಘವಾದುದು. ಅವನ ಹೆತ್ತವರಾದ ಸಿದ್ಧಾರ್ಥ್ ಸಿಂಗ್ ಕುಶ್ವಾಹ ಮತ್ತು ನೇಹಾ ಮಗುವನ್ನು ಅತೀಯಾದ ಮೊಬೈಲ್ ಸ್ಕ್ರೀನ್‌ನಿಂದ ದೂರ ಇಡುವುದಕ್ಕಾಗಿ ಅವನನ್ನು ಸೆಸ್‌ಗೆ ಪರಿಚಯಿಸಿದರು. ಅದರಂತೆ ಮಗು ಅತೀ ಬೇಗನೇ ಚೆಸ್‌ನ ನಿಯಮಗಳನ್ನು ಕರಗತ ಮಾಡಿಕೊಂಡನು. ಆಗಲೇ ತಮ್ಮ ಪುಟ್ಟ ಕಂದನಿಗೆ ಚೆಸ್‌ಬೋರ್ಡ್‌ನಲ್ಲಿ ಅಮೋಘ ಸಾಮರ್ಥ್ಯವಿದೆ ಎಂಬುದು ಅವರಿಗೆ ತಿಳಿಯಿತು.

ಕೇವಲ ಆರು ತಿಂಗಳೊಳಗೆ, ಪುಟಾಣಿ ಸರ್ವಜ್ಞ ಸಹಜವಾಗಿಯೇ ಚೆಸ್‌ನಲ್ಲಿ ಪರಿಣಿತನಾಗಿದ್ದಲ್ಲದೇ ಅನುಭವಿ ಆಟಗಾರರನ್ನು ಸೋಲಿಸುತ್ತಿದ್ದನು. ಸಾಮಾನ್ಯವಾಗಿ ಎಫ್‌ಐಡಿಇ ರೇಟಿಂಗ್ ಗಳಿಸಲು ಆಟಗಾರನು ಕನಿಷ್ಠ ಒಬ್ಬ ಅಂತರರಾಷ್ಟ್ರೀಯ ಶ್ರೇಯಾಂಕಿತನಾದ ಎದುರಾಳಿಯನ್ನು ಸೋಲಿಸಬೇಕು. ಅದರಂತೆ ಸರ್ವಜ್ಞನು ಭೋಪಾಲ್, ಮಂಗಳೂರು ಮತ್ತು ಇತರ ಸ್ಥಳಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಮೂರು ಅಂತಾರಾಷ್ಟ್ರೀಯ ಶ್ರೇಯಾಂಕಿತ ಆಟಗಾರರನ್ನು ಸೋಲಿಸುವ ಮೂಲಕ ಸಹಜವಾಗಿ ಎಫ್‌ಐಡಿಇ ರೇಟಿಂಗ್ ಗಳಿಸಿದ್ದಾನೆ. ಅವನ ಜಾಗತಿಕವಾಗಿ ಕ್ಷಿಪ್ರವಾಗಿ ಗಳಿಸಿದ 1572 ರೇಟಿಂಗ್ ಆತನಿಗೆ ಆಟದಲ್ಲಿರುವ ಶಿಸ್ತು ಹಾಗೂ ನೈಸರ್ಗಿಕ ಪ್ರತಿಭೆ ಎರಡನ್ನೂ ಪ್ರತಿಬಿಂಬಿಸುತ್ತಿದೆ.

ಈ ಎಳೆಯ ಸಾಧಕನ ಹಿಂದೆ ಬಲಿಷ್ಠವಾದ ಬೆಂಬಲ ವ್ಯವಸ್ಥೆ ಇದೆ. ಬಾಲಕ ಇರುವ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಸಂದೀಪ್ ಜಿ.ಆರ್. ಚೆಸ್ ಪ್ರಚಾರ ಕಾರ್ಯಕ್ರಮಗಳನ್ನು ಸಾಕಷ್ಟು ಮುನ್ನಡೆಸಿದರು, ಶಾಲೆಗಳಲ್ಲಿ ರಚನಾತ್ಮಕ ತರಬೇತಿಯನ್ನು ಲಭ್ಯವಾಗುವಂತೆ ಮಾಡಿದರು. ಇದರ ಜೊತೆಗೆ ರಾಷ್ಟ್ರೀಯ ತರಬೇತುದಾರ ಆಕಾಶ್ ಪಯಾಸಿ ಮತ್ತು ವೈಯಕ್ತಿಕ ತರಬೇತುದಾರ ನಿತಿನ್ ಚೌರಾಸಿಯಾ ಅವರು ಸರ್ವಜ್ಞನ ಆಟವನ್ನು ಗೌರವಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು, ಅವರು ಜಿಲ್ಲಾ ಚೆಸ್ ಅಸೋಸಿಯೇಷನ್‌ನಲ್ಲಿ ಪ್ರತಿದಿನ ನಾಲ್ಕು ಗಂಟೆಗಳ ಅಭ್ಯಾಸದ ಮೂಲಕ ಮಗುವಿಗೆ ಮಾರ್ಗದರ್ಶನ ನೀಡಿದರು.

ಇದನ್ನೂ ಓದಿ: ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ

ಚೆಸ್‌ನಲ್ಲಿ ಅವನಿಗೆ ಉಜ್ವಲ ಭವಿಷ್ಯವಿದೆ ಎಂದು ನಾವು ನೋಡುತ್ತಿದ್ದೇವೆ. ಅವನು ಗ್ರ್ಯಾಂಡ್‌ಮಾಸ್ಟರ್ ಆಗಬೇಕೆಂದು ನಾವು ಬಯಸುತ್ತೇವೆ ಎಂದು ಅವರ ತಂದೆ ಹೆಮ್ಮೆಯಿಂದ ಹೇಳಿದ್ದಾರೆ. ದೇವರು ನಮ್ಮ ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಹೇಳುತ್ತಾರೆ ಅವರ ತಾಯಿ ನೇಹಾ..

View post on Instagram