ಕಜಕಿಸ್ತಾನ್(ಸೆ.18): ವಿಶ್ವ ರಸ್ಲಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆಲ್ಲೋ ಮೂಲಕ ಭಾರತದ ವಿನೇಶ್ ಫೋಗಟ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಳೆದ 3 ಟೂರ್ನಿಗಳಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ವಿನೇಶ್ ಫೋಗಟ್, ಇದೀಗ ಮಹತ್ವದ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಕೊಂಡರು. ಇದರೊಂದಿಗೆ 2020 ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಇದನ್ನೂ ಓದಿ: ಸಂಗೀತಾ ಫೋಗಾಟ್‌ ಜತೆ ಕುಸ್ತಿಪಟು ಭಜರಂಗ್‌ ವಿವಾಹ

ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್ ವಿರುದ್ಧ 1ನೇ ರೌಂಡ್‌ನಲ್ಲಿ ವಿನೇಶ್‌ ಫೋಗಟ್  13-0 ಅಂತರದಲ್ಲಿ ಗೆದ್ದಿದ್ದರು.  ಮುಕ​ಯಿಡಾ ಫೈನಲ್‌ ಪ್ರವೇ​ಶಿ​ಸಿದ ಕಾರಣ, ವಿನೇಶ್‌ಗೆ ರಿಪಿಶ್ಯಾಜ್‌ ಸುತ್ತಿಗೆ  ಲಗ್ಗೆ ಇಟ್ಟಿದ್ದರು.  ಇದೀಗ  ಗ್ರೀಕ್‌ನ ಮರಿಯಾ ಪ್ರೆವೋಲರಿಕಿ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಮೂಲಕ ಕಂಚಿನ ಪದಕ ಗೆದ್ದುಕೊಂಡರು.

ಇದನ್ನೂ ಓದಿ: ವೈರಲ್ ಆಗುತ್ತಿದೆ ರಸ್ಲರ್ ಗೀತಾ ಪೋಗತ್ ಪತಿ ಡ್ಯಾನ್ಸ್ ವೀಡಿಯೋ !

ವಿಶ್ವ ರಸ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 5ನೇ ಭಾರತದ ಮಹಿಳೆ ಅನ್ನೋ ಹೆಗ್ಗಳಿಕೆಗೆ ವಿನೇಶ್ ಪಾತ್ರವಾಗಿದ್ದಾರೆ. 2006ರಲ್ಲಿ ಅಲಕಾ ಥೋಮರ್, 2012ರಲ್ಲಿ ಗೀತಾ ಫೋಗಟ್, 2012ರಲ್ಲೇ ಬಬಿತಾ ಫೋಗಟ್ ಹಾಗೂ 2018ರಲ್ಲಿ ಪೂಜಾ ಧಂಡಾ  ಪದಕ ಗೆದ್ದಿದ್ದರು. ಇದೀಗ ಈ ಸಾಲಿಗೆ ವಿನೇಶ್ ಫೋಗಟ್ ಕೂಡ ಸೇರಿಕೊಂಡಿದ್ದಾರೆ. ಈ ಪದಕದೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕ್ರೀಡಾಪಟು ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ.