Asianet Suvarna News Asianet Suvarna News

ಸಂಗೀತಾ ಫೋಗಾಟ್‌ ಜತೆ ಕುಸ್ತಿಪಟು ಭಜರಂಗ್‌ ವಿವಾಹ

ಭಾರತದ ಕುಸ್ತಿ ತಾರಾ ಜೋಡಿಯಾದ ಭಜರಂಗ್‌ ಪೂನಿಯಾ-ಸಂಗೀತಾ ಫೋಗಾಟ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇಷ್ಟು ದಿನ ಅಖಾಡದಲ್ಲಿ ಪಟ್ಟು ಹಾಕುತ್ತಿದ್ದ ಕುಸ್ತಿ ಕಲಿಗಳೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

Indian Wrestler Bajrang Punia To Marry Sangeeta Phogat
Author
New Delhi, First Published Aug 9, 2019, 4:36 PM IST
  • Facebook
  • Twitter
  • Whatsapp

ಚಂಡೀಗಢ[ಆ.09]: ‘ದಂಗಲ್‌’ ಖ್ಯಾತಿಯ ಫೋಗಾಟ್‌ ಸಹೋದರಿಯರ ಪೈಕಿ ಕೊನೆಯವರಾದ ಸಂಗೀತಾ ಜತೆ ಭಾರತದ ತಾರಾ ಕುಸ್ತಿ ಪಟು ಭಜರಂಗ್‌ ಪೂನಿಯಾ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. 

ವಿಶ್ವ ಕುಸ್ತಿ ರ‍್ಯಾಂಕಿಂಗ್‌: ಭಜರಂಗ್ ಮತ್ತೆ ನಂ.1

ಸಂಗೀತಾರ ತಂದೆ, ಖ್ಯಾತ ಕೋಚ್‌ ಮಹಾವೀರ್‌ ಸಿಂಗ್‌ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈಗಾಗಲೇ ಎರಡೂ ಕುಟುಂಬದವರು ಮಾತುಕತೆ ನಡೆಸಿದ್ದು, ಟೋಕಿಯೋ ಒಲಿಂಪಿಕ್ಸ್‌ ಬಳಿಕ ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗಿದೆ. 

ಭಜ್ಜಿಗಿಲ್ಲ ಖೇಲ್‌ ರತ್ನ: ಪಂಜಾಬ್‌ ಸರ್ಕಾರ ತನಿಖೆಗೆ ಆದೇಶ

ಭಜರಂಗ್‌ 65 ಕೆ.ಜಿ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನದಲ್ಲಿದ್ದಾರೆ. ಇನ್ನು ಸಂಗೀತಾ ಫೋಗಾಟ್ 59 ಕೆ.ಜಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. 
 

Follow Us:
Download App:
  • android
  • ios