ಹರಿಯಾಣ(ಜು.27): ಬಾಲಿವುಡ್ ಬ್ಲಾಕ್ ಬಸ್ಟರ್ ಮೂವಿ ಸುಲ್ತಾನ್ ಯಾರಿಗೆ ತಾನೆ ನೆನಪಿಲ್ಲ. ಈ ಚಿತ್ರದ ಜಗ್ ಗೂಮೆಯಾ ಹಾಡಿನ ಇಂಪು ಇನ್ನು ಮಾಸಿಲ್ಲ. ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಹೆಜ್ಜೆ ಹಾಕಿದ್ದರು. ಇದೀಗ ಈ ಚಿತ್ರದ ರಿಯಲ್ ಹೀರೋ ಡ್ಯಾನ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

ಪೋಗತ್ ರಸ್ಲಿಂಗ್ ಕುಟುಂಬದ ದಂಗಲ್ ಮೂವಿ ಭಾರಿ ಜನಮನ್ನಣೆಗಳಿಸಿತ್ತು. ಇದೀಗ ಈ ಚಿತ್ರದ ರಿಯಲ್ ಹೀರೋ ಗೀತಾ ಪೋಗತ್ ಪತಿ, ರಸ್ಲರ್ ಪವನ್ ಕುಮಾರ್ ಡ್ಯಾನ್ಸ್ ವೀಡಿಯೋ ಭಾರಿ ವೈರಲ್ ಆಗಿದೆ.

 

 

#dancelove @pawankumar_saroha86 😂🤣🤣🤣🙈

A post shared by Geeta PawanSaroha (@geetaphogat) on Jul 26, 2018 at 4:06am PDT

 

ಕಾಮನ್ ವೆಲ್ತ್ ಗೇಮ್ಸ್ ಕೂಡದಲ್ಲಿ ಕಂಚಿನ ಪದಕ ಗೆದ್ದ ಪವನ್ ಕುಮಾರ್, ಇದೀಗ ಪತ್ನಿ ಗೀತಾ ಪೋಗತ್‌ಗಾಗಿ ಅದ್ಬುತ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ಗೀತಾ ಪೋಗತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗೀತಾ ಪೋಗತ್ ಈಗಾಗಲೇ ಖತ್ರೋನ್ ಕೇ ಖಿಲಾಡಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಇದೀಗ ಪತಿ ಪವನ್ ಕುಮಾರ್ ಡ್ಯಾನ್ಸ್ ಮಾಡೋ ಮೂಲಕ ಈ ಕ್ರೀಡಾ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ತಯಾರಿ ಮಾಡುತ್ತಿದ್ದಾರ ಅನ್ನೋ ಅನುಮಾನ ಮೂಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪವನ್ ಕುಮಾರ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.