ಲಂಡನ್[ಮೇ.24]: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಬೆರಳೆಣಿಕೆ ದಿನಗಳು ಬಾಕಿ ಉಳಿದಿವೆ. ಈ ಬಾರಿಯ ವಿಶ್ವಕಪ್ ಟೂರ್ನಿಯು ಹೈ ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ತಂಡ 500 ರನ್ ಬಾರಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಆಯೋಜಿದ್ದ ಎಲ್ಲಾ ನಾಯಕರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್’ನಲ್ಲಿ 500 ರನ್ ಬಾರಿಸುವ ಮೊದಲ ತಂಡವೆನಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಬಲಿಷ್ಠ ಬ್ಯಾಟ್ಸ್‌ಮನ್ಗಳ ಪಡೆಯನ್ನೇ ಹೊಂದಿರುವ ಇಂಗ್ಲೆಂಡ್ ತಂಡವು 500 ರನ್ ಬಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್’ನಲ್ಲಿ ಈ 6 ಮಂದಿ ಮಿಂಚಲಿದ್ದಾರೆ ಎಂದ ನಾಸಿರ್ ಹುಸೇನ್

1996ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಕೀನ್ಯಾ ವಿರುದ್ಧ 398 ರನ್ ಬಾರಿಸಿ ಇತಿಹಾಸ ಬರೆದಿತ್ತು. ಆ ಕಾಲದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲೇ 350+ ರನ್ ಬಾರಿಸುವುದೇ ಕಷ್ಟ ಎನ್ನುವ ಕಾಲದಲ್ಲಿ ಲಂಕಾ ಹೊಸ ಮೈಲುಗಲ್ಲು ನೆಟ್ಟಿತ್ತು. ಇದಾದ ನಂತರ 9 ವರ್ಷಗಳ ಬಳಿಕ 2005ರಲ್ಲಿ ಒಂದೇ ದಿನ ಎರಡು ತಂಡಗಳು 400+ ರನ್ ಬಾರಿಸಿ ಕ್ರಿಕೆಟ್ ಲೋಕ ಹುಬ್ಬೇರುವಂತೆ ಮಾಡಿತ್ತು. ಜೊಹಾನ್ಸ್’ಬರ್ಗ್’ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 434 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಹರ್ಷೆಲ್ ಗಿಬ್ಸ್ ಸಿಡಿಲಬ್ಬರದ ಬ್ಯಾಟಿಂಗ್[175] ನೆರವಿನಿಂದ 438 ರನ್ ಸಿಡಿಸಿ ದಕ್ಷಿಣ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿತು. ಇನ್ನು ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡವು 481 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ದಾಖಲೆ ಬರೆದಿದೆ. 

ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ 500 ರನ್?

ಇತ್ತೀಚೆಗೆ ನಡೆದ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಬೃಹತ್ ಮೊತ್ತ ದಾಖಲಾಗಿತ್ತು. ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ನಿರ್ದೇಶಕ ಸ್ಟೀವ್ ಎಲ್ವರ್ಥಿ, 500 ರನ್ ಪಟ್ಟಿಯನ್ನು ಅಳವಡಿಸಲು ನಿರ್ಧರಿಸಿದರು ಎನ್ನಲಾಗಿದೆ. 

2019ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ತಂಡವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ಇಲ್ಲಿದೆ ನೋಡಿ ವಿಶ್ವಕಪ್ ವೇಳಾಪಟ್ಟಿ: