ಲಂಡನ್(ಮೇ.17): ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್'ನಲ್ಲಿ ಬ್ಯಾಟ್ಸ್'ಮನ್'ಗಳು ಅಬ್ಬರಿಸುವ ಸುಳಿವು ಸಿಕ್ಕಿದೆ.

ಇಂಗ್ಲೆಂಡ್'ನ ಬ್ಯಾಟಿಂಗ್ ಸ್ನೇಹಿ ಪಿಚ್'ಗಳಲ್ಲಿ ಏಕದಿನ ಕ್ರಿಕೆಟ್ ಮೊದಲ ಬಾರಿಗೆ 500 ರನ್'ಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಭಿಮಾನಿಗಳ ಸ್ಕೋರ್'ಕಾರ್ಡ್'ಗಳನ್ನು ಪರಿಷ್ಕರಿಸಿ, 500 ರನ್ ಪಟ್ಟಿಯನ್ನು ಅಳವಡಿಸಿದೆ. ಇಂಗ್ಲೆಂಡ್'ನಲ್ಲಿ ಪಂದ್ಯಗಳ ಸ್ಕೋರ್ ಪಟ್ಟಿಯನ್ನು ಅಭಿಮಾನಿಗಳು ಖರೀದಿಸಿ, ಸ್ಮರಣಿಕೆಯಾಗಿ ಸಂಗ್ರಹಿಸುವ ಪದ್ಧತಿ ಇದೆ.

ಸ್ಕೋರ್ ಪಟ್ಟಿಯಲ್ಲಿ 400 ರನ್'ವರೆಗೂ ಮಾತ್ರ ದಾಖಲಿಸಲು ಅವಕಾಶವಿತ್ತು. ಆದರೆ ಕಳೆದ ವಾರ ನಡೆದ ಸಭೆಯಲ್ಲಿ ವಿಶ್ವಕಪ್ ಟೂರ್ನಿ ನಿರ್ದೇಶಕ ಸ್ಟೀವ್ ಎಲ್ವರ್ಥಿ, 500 ರನ್ ಪಟ್ಟಿಯನ್ನು ಅಳವಡಿಸಲು ನಿರ್ಧರಿಸಿದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.