ಲಂಡನ್(ಮೇ.25): ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಅಭ್ಯಾಸ ಪಂದ್ಯ ಆಡುತ್ತಿದೆ. ನೆಟ್ ಪ್ರಾಕ್ಟೀಸ್ ವೇಳೆ ಟೀಂ ಇಂಡಿಯಾ ಅಲ್ರೌಂಡರ್ ವಿಜಯ್ ಶಂಕರ್ ಇಂಜುರಿಗೆ ತುತ್ತಾಗಿ ಆತಂಕ ಸೃಷ್ಟಿಸಿದ್ದರು. ಇದೀಗ ವಿಜಯ್ ಶಂಕರ್ ಸ್ಕ್ಯಾನಿಂಗ್ ರಿಪೋರ್ಟ್ ಬಹಿರಂಗವಾಗಿದೆ. ಯಾವುದೇ ಎಲುಬಿಗೆ ಗಾಯವಾಗಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ 2 ಥರದ ಜೆರ್ಸಿ ತೊಡಲಿರುವ ಭಾರತ

ವಿಜಯ್ ಶಂಕರ್ ಇಂಜುರಿ ವರದಿಯಿಂದ ಟೀಂ ಇಂಡಿಯಾ ನಿರಾಳವಾಗಿದೆ. ನಂ.4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಶಂಕರ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಟೀಂ ಮ್ಯಾನೇಜ್ಮೆಂಟ್ ಚಿಂತೆಗೆ ಒಳಗಾಗಿತ್ತು. 

ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!

ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 5 ರಂದು ಭಾರತ ಹಾಗೂ ಸೌತ್ಆಫ್ರಿಕಾ ಮುಖಾಮುಖಿಯಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಈ ಬಾರಿ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಮುಂಚೂಣಿಯಲ್ಲಿದೆ.