ಲಂಡನ್‌[ಮೇ.25]: ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಟೂರ್ನಿಯಲ್ಲಿ ಭಾರತ 2 ರೀತಿಯ ಜೆರ್ಸಿ ತೊಡಲಿದೆ. 

ತವರಿನಾಚೆ ಪಂದ್ಯಗಳು ಎಂದು ಕರೆಯಲ್ಪಡುವ 2 ಪಂದ್ಯಗಳಲ್ಲಿ ಭಾರತ, ನೀಲಿ ಜತೆ ಹೆಚ್ಚು ಕೇಸರಿ ಬಣ್ಣದಿಂದ ಕೂಡಿರುವ ಜೆರ್ಸಿಯನ್ನು ತೊಡಲಿದೆ. ವಿಶ್ವಕಪ್‌ನಲ್ಲಿ ಆಡುವ 10 ತಂಡಗಳ ಪೈಕಿ ಭಾರತ, ಇಂಗ್ಲೆಂಡ್‌, ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನೀಲಿ ಬಣ್ಣದ ಉಡುಪನ್ನು ತೊಡಲಿವೆ. ಹೀಗಾಗಿ ಜೂ.22ರ ಆಫ್ಘಾನಿಸ್ತಾನ, ಜೂ.30ರ ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳಿಗೆ ಭಾರತ ಕೇಸರಿ ಮಿಶ್ರಿತ ಜೆರ್ಸಿ ತೊಡಲಿದೆ. ಹೊಸ ಜೆರ್ಸಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿಶ್ವಕಪ್ 2019: ಅಭ್ಯಾಸದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಗಾಯ- ಆತಂಕದಲ್ಲಿ ತಂಡ!

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಂದು ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್’ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.