ಲಂಡನ್(ಮೇ.24): ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ನಾಡಿನಲ್ಲಿ ಅಭ್ಯಾಸ ಆರಂಭಿಸಿದೆ. ಶನಿವಾರ(ಮೇ.25) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ನಡೆಯಲಿದೆ. ಇದಕ್ಕಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಘಾತ ಎದುರಾಗಿದೆ. ಅಭ್ಯಾಸದ ವೇಳೆ ಆಲ್ರೌಂಡರ್ ವಿಜಯ್ ಶಂಕರ್ ಕೈಗೆಗಾಯವಾಗಿದೆ.

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಯಾರಿಗೆ?- ಭವಿಷ್ಯ ನುಡಿದ ಹರ್ಭಜನ್ ಸಿಂಗ್ !

ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದ ವಿಜಯ್ ಶಂಕರ್ ಕೈಗೆ ಗಾಯವಾಗಿದೆ. ಹೀಗಾಗಿ ತಕ್ಷಣವೇ ಅಭ್ಯಾಸದಿಂದ ಹೊರನಡೆದಿದ್ದಾರೆ. ಗಂಭೀರ ಗಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಬಿಸಿಸಿಐ ಯಾವುದೇ ಖಚಿತತ ನೀಡಲಿಲ್ಲ. ಸರಣಿ ಆರಂಭಕ್ಕೂ ಮುನ್ನವೇ ಇಂಜುರಿ ಸಮಸ್ಯೆ ತಲೆದೋರಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೊಹ್ಲಿ ಏಕಾಂಗಿಯಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದ ತೆಂಡುಲ್ಕರ್

ವಿಶ್ವಕಪ್ ತಂಡದ ಆಯ್ಕೆ ಬಳಿಕ ಐಪಿಎಲ್ ಟೂರ್ನಿಯಲ್ಲಿ ಕೇದಾರ್ ಜಾಧವ್ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಐಪಿಎಲ್ ಟೂರ್ನಿಯಿಂದ ಹೊರಗುಲಿದಿದ್ದರು. ಆದರೆ ಇಂಗ್ಲೆಂಡ್ ಪ್ರಯಾಣ ಬೆಳೆಸುವಷ್ಟರಲ್ಲೇ ಕೇದಾರ್ ಗುಣಮುಖರಾಗಿ ತಂಡ ಸೇರಿಕೊಂಡಿದ್ದರು. ಹೀಗಾಗಿ ಟೀಂ ಇಂಡಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದೀಗ ವಿಜಯ್ ಶಂಕರ್ ಇಂಜುರಿಗೆ ತುತ್ತಾಗಿರೋದು ಅಭಿಮಾನಿಗಳಿಗ ಆತಂಕ ಹೆಚ್ಚಿಸಿದೆ.