ಮುಂಬೈ(ಮೇ.24): ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ.  ಈಗಾಗಲೇ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಇಂಗ್ಲೆಂಡ್ ನಾಡಿನಲ್ಲಿ ಅಭ್ಯಾಸ ಆರಂಭಿಸಿದೆ. ಇದರ ಬೆನ್ನಲ್ಲೇ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಇದೀಗ 2011ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ವಿಶ್ವಕಪ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ವಿರಾಟ್ ಕೊಹ್ಲಿ ಮೆಚ್ಚಿದ ವೇಗಿ- ಈತನೆ ತಂಡದ X ಫ್ಯಾಕ್ಟರ್!

ಹರ್ಭಜನ್ ಸಿಂಗ್ ಪ್ರಕಾರ, ಈ ಬಾರಿ ಆತಿಥೇಯ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ಗೆಲುವಿನ ಫೇವರಿಟ್ ತಂಡಗಳು ಎಂದಿದ್ದಾರೆ. ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ಅತ್ಯಂತ ಬಲಿಷ್ಠ ತಂಡ. ರ್ಯಾಕಿಂಗ್‌ನಲ್ಲೂ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ. ಜೊತೆಗೆ ತವರಿನ ಕಂಡೀಷನ್ ಕೂಡ ನೆರವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

ಇಂಗ್ಲೆಂಡ್ ಜೊತೆಗೆ ಭಾರತ ಕೂಡ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಮತೋಲನದಿಂದ ಕೂಡಿದೆ. ನಿರೀಕ್ಷಿತ ಪ್ರದರ್ಶನ ನೀಡಿದರೆ ಭಾರತಕ್ಕೆ ಪ್ರಶಸ್ತಿ ಗೆಲ್ಲುವುದು ಕಷ್ಟವಲ್ಲ ಎಂದು ಭಜ್ಜಿ ಹೇಳಿದ್ದಾರೆ.