ಸಿಡ್ನಿ[ಮೇ.12]: ಆಸ್ಪ್ರೇಲಿಯಾ ಕ್ರಿಕೆಟಿಗರು ಶನಿವಾರ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ ಪ್ರತಿಷ್ಠಿತ ಆ್ಯಷಸ್‌ ಸರಣಿಯನ್ನು ಆಡಲು ತವರಿನಿಂದ ಹೊರಟರು. ಆದರೆ ಇಂಗ್ಲೆಂಡ್‌ಗೆ ಸೇರುವ ಮೊದಲು, ಟರ್ಕಿಗೆ ತೆರಳಲಿದ್ದು, ಅಲ್ಲಿನ ಗಾಲಿಪೊಲಿ ಯುದ್ಧಭೂಮಿಗೆ ಭೇಟಿ ನೀಡಲಿದ್ದಾರೆ. ತಂಡ ಕೆಲ ದಿನಗಳ ಕಾಲ ಇಲ್ಲೇ ನೆಲೆಸಲಿದೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ..!

ಭೇಟಿ ಉದ್ದೇಶವೇನು?: ಒಂದನೇ ವಿಶ್ವ ಮಹಾಯುದ್ಧದ ವೇಳೆ ಈ ಸ್ಥಳದಲ್ಲಿ 10000 ಆಸ್ಪ್ರೇಲಿಯನ್‌ ಯೋಧರು ಪ್ರಾಣ ತ್ಯಜಿಸಿದ್ದರು. ಆಸ್ಪ್ರೇಲಿಯಾ ಪಾಲಿಗೆ ಇದೊಂದು ಐತಿಹಾಸಿಕ ಸ್ಥಳ. ಮಹತ್ವದ ಟೂರ್ನಿಗಳಿಗೂ ಮುನ್ನ ಸ್ಫೂರ್ತಿ ಪಡೆಯಲು, ತಂಡದಲ್ಲಿ ಮತ್ತಷ್ಟು ಒಗ್ಗಟ್ಟು ಮೂಡಿಸಲು ಈ ಭೇಟಿ ನೆರವಾಗಲಿದೆ ಎಂದು ತಂಡದ ಪ್ರಧಾನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ. 

ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

‘ಚೆಂಡು ವಿರೂಪ ಪ್ರಕರಣದ ಬಳಿಕ ಕುಗ್ಗಿದ್ದ ತಂಡವನ್ನು ಫ್ರಾನ್ಸ್‌ನಲ್ಲಿರುವ ಯುದ್ಧಭೂಮಿಗೆ ಕರೆದೊಯ್ಯಲಾಗಿತ್ತು. ಆಟಗಾರರು ನಮ್ರತೆ, ಜೀವನದ ಮಹತ್ವ, ನಾವೆಷ್ಟು ಅದೃಷ್ಟವಂತರು ಎನ್ನುವ ವಿಚಾರಗಳನ್ನು ಅರ್ಥ ಮಾಡಿಕೊಂಡರು. ಆಟಗಾರರಲ್ಲಿ ಹೊಂದಾಣಿಕೆ ಹೆಚ್ಚಾಗಿತ್ತು. ವಿಶ್ವಕಪ್‌ ಹಾಗೂ ಆ್ಯಷಸ್‌ ಸರಣಿಗಾಗಿ 4 ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿ ಉಳಿಯಲಿದ್ದೇವೆ. ತಂಡದ ಪಾಲಿಗಿದು ಅತ್ಯಂತ ಮಹತ್ವದ ಪ್ರವಾಸವಾಗಿದ್ದು, ಆಟಗಾರರು ಎಷ್ಟು ಸಾಧ್ಯವೋ ಅಷ್ಟು ಒಗ್ಗಟ್ಟಿನಿಂದ ಇರಬೇಕು. ಆ ನಿಟ್ಟಿನಲ್ಲಿ ಗಾಲಿಪೊಲಿ ಭೇಟಿ ನೆರವಾಗಲಿದೆ’ ಎಂದು ಲ್ಯಾಂಗರ್‌ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...