ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!
ಭಾರತದ ಮಿಶ್ರ ರಿಲೇ ತಂಡ 4*400 ಮೀಟರ್ ಸ್ಫರ್ಧೆಯಲ್ಲಿ ಅಮೋಘ ಪ್ರದರ್ಶನ ತೋರುವುದರೊಂದಿಗೆ ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದೆ. ಈ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದೋಹಾ (ಸೆ.30): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಸಾಧನೆ ಮಾಡದಿದ್ದರೂ, 4*400 ಮೀಟರ್ ಮಿಶ್ರ ರಿಲೇ ತಂಡ ಫೈನಲ್ ಪ್ರವೇಶಿಸುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತು. ಶನಿವಾರ ರಾತ್ರಿ ನಡೆದ ಹೀಟ್ಸ್‌ನಲ್ಲಿ ಭಾರತ ತಂಡ 3ನೇ ಸ್ಥಾನ ಪಡೆಯುವ ಮೂಲಕ, ಫೈನಲ್‌ಗೆ ಅರ್ಹತೆ ಪಡೆದಿದ್ದಲ್ಲದೇ 2020ರ ಟೋಕಿಯೋ ಒಲಿಂಪಿಕ್ಸ್‌ಗೂ ಪ್ರವೇಶ ಪಡೆಯಿತು.
ಏಷ್ಯನ್ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ
ಮೊಹಮದ್ ಅನಾಸ್, ವಿ.ಕೆ.ವಿಸ್ಮಯ, ಜಿಶ್ನಾ ಮ್ಯಾಥ್ಯೂ ಹಾಗೂ ನಿರ್ಮಲ್ ನೋಹಾ ಟಾಮ್ ಅವರನ್ನೊಳಗೊಂಡ ಭಾರತ ತಂಡ 3:16:14 ಸೆಕೆಂಡ್‌ಗಳಲ್ಲಿ ಓಟ ಮುಕ್ತಾಯಗೊಳಿಸಿತು. ಕೇವಲ 00:00:02 ಸೆಕೆಂಡ್‌ಗಳಲ್ಲಿ ಬೆಲ್ಜಿಯಂ ತಂಡವನ್ನು ಹಿಂದಿಕ್ಕಿದ ಭಾರತ, ಫೈನಲ್‌ಗೆ ಅರ್ಹತೆ ಗಿಟ್ಟಿಸಿತು. ಈ ಋುತುವಿನಲ್ಲಿ ಇದು ಭಾರತ ತಂಡದ ಶ್ರೇಷ್ಠ ಪ್ರದರ್ಶನ. ಅಗ್ರ 8 ತಂಡಗಳಿಗೆ ಒಲಿಂಪಿಕ್ಸ್‌ಗೆ ಪ್ರವೇಶ ಸಿಗಲಿದ್ದು, ಭಾರತ 7ನೇ ತಂಡವಾಗಿ ಟೋಕಿಯೋ ಗೇಮ್ಸ್‌ಗೆ ಅರ್ಹತೆ ಪಡೆಯಿತು.
ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶ್ ಫೋಗಟ್!
ಭಾರತ ಪರ ಮೊದಲ ಲ್ಯಾಪ್ ಅನ್ನು ಮೊಹಮದ್ ಅನಾಸ್ ಓಡಿದರೆ, 2ನೇ ಲ್ಯಾಪ್ ಓಡಿದ ವಿಸ್ಮಯ ಉತ್ತಮ ಮುನ್ನಡೆ ಒದಗಿಸಿಕೊಟ್ಟರು. ಜಿಶ್ನಾ ಮ್ಯಾಥ್ಯೂ, ತಂಡ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಆದರೆ ಬ್ಯಾಟನ್ ಬದಲಾವಣೆ ವೇಳೆ ಸ್ವಲ್ಪ ಗೊಂದಲವಾದ ಕಾರಣ, ಭಾರತ ಒಂದೆರಡು ಸೆಕೆಂಡ್‌ಗಳ ಹಿನ್ನಡೆ ಅನುಭವಿಸಿತು. ಕೊನೆ ಲ್ಯಾಪ್ ಓಡಿದ ನಿರ್ಮಲ್, ಅಂತಿಮ 100 ಮೀ.ನಲ್ಲಿ ಓಟದ ವೇಗ ಹೆಚ್ಚಿಸಿ 3ನೇಯವರಾಗಿ ಗುರಿ ತಲುಪಿದರು.