ಮಾರ್ಲೋ(ಯುಕೆ)ಅ.03): ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಮಹಿಳಾ ಹಾಕಿ ಸರಣಿ 1-1  ಅಂತರದಲ್ಲಿ ಸಮಬಲಗೊಂಡಿದೆ. 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಭಾರತ ವಿರುದ್ದ ಅಬ್ಬರಿಸಿದ ಗ್ರೇಟ್ ಬ್ರಿಟನ್ 3-1 ಅಂತರದಲ್ಲಿ ಗೆಲವು ಸಾಧಿಸಿತು. ಈ ಮೂಲಕ ಸರಣಿ ಸಮಬಲ ಮಾಡಿಕೊಂಡಿದೆ. 

ಇದನ್ನೂ ಓದಿ: ಜೋಹರ್‌ ಕಪ್‌ ಹಾಕಿ; ಭಾರತ ತಂಡ ಪ್ರಕಟ

4ನೇ ಪಂದ್ಯದ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ನೇಹಾ ಗೋಯಲ್ ಸಿಡಿಸಿದ ಅದ್ಭುತ ಗೋಲಿನಿಂದ ಭಾರತ 1-0 ಮುನ್ನಡೆ ಸಾಧಿಸಿತು. ಆದರೆ ಪೆನಾಲ್ಟಿ ಕಾರ್ನರ್ ಅವಕಾಶ ಸದುಪಯೋಗ ಪಡಿಸಿಕೊಂಡ ಗ್ರೇಟ್ ಬ್ರಿಟನ್, 29ನೇ ನಿಮಿಷದಲ್ಲಿ 2ನೇ ಗೋಲು ಸಿಡಿಸಿ 2-1 ಮುನ್ನಡೆ ಪಡೆಯಿತು.

ಇದನ್ನೂ ಓದಿ: ಒಲಿಂಪಿಕ್ಸ್ ಅರ್ಹತಾ ಹಾಕಿ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಕಠಿಣ ಸವಾಲು!

ಸೆಕೆಂಡ್ ಹಾಫ್‌ನ ಆರಂಭದಲ್ಲಿ ಉಭಯ ತಂಡ ಗೋಲು ಸಿಡಿಸಲು ವಿಫಲವಾಯಿತು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಗಿಸೆಲ್ ಆನ್ಸ್‌ಲೆ ಸಿಡಿಸಿದ ಗೋಲಿನಿಂದ ಬ್ರಿಟನ್ 3-1 ಅಂತರದ ಮುನ್ನಡೆ ಪಡೆಯಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲವಿನ ಸಿಹಿ ಕಂಡ ಬ್ರಿಟನ್ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು. ಸರಣಿ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, 2 ಮತ್ತು 3 ಪಂದ್ಯ ಡ್ರಾಸಿಧಿಸಿತು.