ನವ​ದೆ​ಹ​ಲಿ(ಅ.01): ಅ.12ರಿಂದ 19ರ ವರೆಗೆ ಮಲೇ​ಷ್ಯಾ​ದಲ್ಲಿ ನಡೆ​ಯಲಿರುವ 9ನೇ ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಪಂದ್ಯಾವಳಿಗೆ 18 ಸದ​ಸ್ಯರ ಭಾರತ ಕಿರಿ​ಯರ ಹಾಕಿ ತಂಡವನ್ನು ಸೋಮ​ವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಯುವ ಡಿಫೆಂಡರ್‌ ಮನ್‌​ದೀಪ್‌ ಮೋರ್‌ ಭಾರತ ತಂಡದ ನೇತೃತ್ವ ವಹಿ​ಸ​ಲಿದ್ದಾರೆ. 

 

ಸಂಜಯ್‌ ಅವ​ರನ್ನು ಉಪ​ನಾ​ಯ​ಕ​ರಾಗಿ ನೇಮಿ​ಸ​ಲಾ​ಗಿದೆ. ಟೂರ್ನಿ ರೌಂಡ್‌ ರಾಬಿನ್‌ ಲೀಗ್‌ನಲ್ಲಿ ನಡೆ​ಯ​ಲಿದ್ದು, ಮಲೇಷ್ಯಾ, ನ್ಯೂಜಿ​ಲೆಂಡ್‌, ಜಪಾನ್‌, ಆಸ್ಪ್ರೇ​ಲಿ​ಯಾ, ಬ್ರಿಟನ್‌ ತಂಡ​ಗ​ಳನ್ನು ಭಾರತ ಎದು​ರಿ​ಸ​ಲಿದೆ.

ತಂಡ: ಪ್ರಶಾಂತ್‌, ಪವನ್‌, ಸಂಜಯ್‌, ದೀನಚಂದ್ರ, ಪ್ರತಾಪ್‌, ಸುಮನ್‌, ಮನ್‌ದೀಪ್‌, ಯಶ್‌ದೀಪ್‌, ಶಾರದನಂದ, ವಿಷ್ಣುಕಾಂತ್‌, ರಬಿಚಂದ್ರ, ಮಣೀಂದರ್‌, ದಿಲ್‌ಪ್ರೀತ್‌, ಸುದೀಪ್‌, ಗುರುಸಾಹಿಬ್‌ಜಿತ್‌, ಉತ್ತಮ್‌, ರಾಹುಲ್‌, ಲಾಕ್ರ.