ಲುಸ್ಸಾನೆ(ಸ್ವಿ​ಜರ್‌ಲೆಂಡ್‌)ಸೆ.10: 2020ರ ಟೋಕಿ​ಯೋ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಹಾಕಿ ಪಂದ್ಯ​ಗಳ ವೇಳಾ​ಪಟ್ಟಿಸೋಮ​ವಾರ ಪ್ರಕಟಗೊಂಡಿತು. ಭಾರತ ಪುರು​ಷರ ತಂಡಕ್ಕೆ ರಷ್ಯಾ ಎದು​ರಾದರೆ, ಮಹಿಳಾ ತಂಡ ಅಮೆ​ರಿಕ ವಿರುದ್ಧ ಸೆಣ​ಸ​ಲಿದೆ. 

 

ಇದನ್ನೂ ಓದಿ: ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಚಾಂಪಿಯನ್‌!

ನ.1, 2ರಂದು ಭುವ​ನೇ​ಶ್ವ​ರದಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ತಂಡ​ಗಳು 2 ಪಂದ್ಯ​ಗ​ಳನ್ನು ಆಡ​ಲಿದ್ದು, ವಿಜೇತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯ​ಲಿದೆ. ಅರ್ಹತಾ ಸುತ್ತಿ​ನಲ್ಲಿ ಒಟ್ಟು 14 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 7 ತಂಡ​ಗ​ಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಗ​ಲಿದೆ. ಆತಿ​ಥೇಯ ಜಪಾನ್‌ ಸೇರಿ​ದ​ಂತೆ ಪುರುಷ ಹಾಗೂ ಮಹಿಳಾ ವಿಭಾ​ಗ​ದಲ್ಲಿ ಈಗಾ​ಗಲೇ 5 ತಂಡ​ಗಳು ಒಲಿಂಪಿಕ್ಸ್‌ಗೆ ಪ್ರವೇಶ ಪಡೆ​ದಿವೆ.