ಸುರೇಶ್ ರೈನಾ ದಾಖಲೆ ಮುರಿದ ಸ್ಮೃತಿ ಮಂಧನಾ
ಟಿ20 ಕ್ರಿಕೆಟ್‌ನಲ್ಲಿ ಭಾರತದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಹೊಸ ದಾಖಲೆ ಬರೆದಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ದಾಖಲೆ ಅಳಿಸಿ ಹಾಕೋ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಇಲ್ಲಿದೆ ವಿವರ.
ಗುವಾಹಟಿ(ಮಾ.04): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂಧನಾ ದಾಖಲೆ ಬರೆದಿದ್ದಾರೆ. ಟಿ20 ಮಾದರಿಯಲ್ಲಿ ತಂಡವನ್ನ ಮುನ್ನಡೆಸಿದ ಭಾರತ ಅತ್ಯಂತ ಕಿರಿಯ ನಾಯಕಿ ಅನ್ನೋ ಹೆಗ್ಗಳಿಕೆಗೆ ಇದೀಗ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ: 16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!
ಮಂಧನಾಗಿಂತ ಮೊದಲು ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ರೈನಾ 23 ವರ್ಷ 197ನೇ ದಿನ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಮೂಲಕ ಭಾರತ ಟಿ20 ತಂಡದ ನಾಯಕತ್ವ ವಹಿಸಿದ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು.
ಇದನ್ನೂ ಓದಿ: ಬಿಜೆಪಿ ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪತ್ನಿ..!
ಗುವಾಹಟಿಯಲ್ಲಿ ನಡೆದ ಮೊದಲ ಟಿ20ಯಲ್ಲಿ ಮಂಧಾನ ನಾಯಕತ್ವ ವಹಿಸಿಕೊಳ್ಳೋ ಮೂಲಕ 22 ವರ್ಷ 229ನೇ ದಿನ ನಾಯಕತ್ವ ವಹಿಸಿದ್ದಾರೆ. ಈ ಮೂಲಕ ರೈನಾ ದಾಖಲೆ ಮುರಿದಿದ್ದಾರೆ. ಆದರೆ ಈ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ಕಳಪೆ ಪ್ರದರ್ಶನದಿಂದ ಸೋಲು ಕಂಡಿತು.
ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಪ್ರಕಟಿಸಿದ VVS ಲಕ್ಷ್ಮಣ್!
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ 4 ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿತು. ಇದರೊಂದಿಗೆ ಇಂಗ್ಲೆಂಡ್ 41 ರನ್ ಗೆಲುವು ಸಾಧಿಸಿತು.