ನವದೆಹಲಿ[ಮಾ.04]: ಲೋಕಸಭಾ ಚುನಾವಣೆಗೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಸಿಹಿ ಸುದ್ದಿ ಲಭಿಸಿದೆ. ಚುನಾವಣೆಗೆ ಇನ್ನೇನು ಕೆಲ ಸಮಯ ಬಾಕಿ ಇದೆ ಎನ್ನುವಾಗಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರ ರವೀಂದ್ರ ಜಡೇಜಾ ಹೆಂಡತಿ ರಿವಾಬ ಜಡೇಜಾಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಗುಜರಾತ್ ನ ಕೃಷಿ ಸಚಿವ ಆರಸೀ ಫಾಲಡೂ ಹಾಗೂ ಸಂಸದೆ ಪೂನಂ ಮದಾಮ್ ಉಪಸ್ಥಿತಿಯಲ್ಲಿ ಜಾಮನಗರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ರಿವಾಬಾ ಜಡೇಜಾ ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಲಾಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರ ಸೇರ್ಪಡೆಯಿಂದ ಯುವಜನರನ್ನು ಪಕ್ಷದೆಡೆ ಆಕರ್ಷಿಸುವುದು ಅತ್ಯಂತ ಸುಲಭ ಎಂಬುವುದು ಪಕ್ಷದ ನಾಯಕರ ಮಾತಾಗಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಬೆಳಬವಣಿಗೆಗಳಾಗುತ್ತಿದ್ದು, ನಾಯಕರ ಪಕ್ಷಾಂತರವೂ ಸಾಮಾನ್ಯವಾಗಿದೆ. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದಾರೆ.