ಬೆಂಗಳೂರು[ಮಾ.04]: ’ಕಾಫಿ ವಿತ್ ಕರುಣ್’ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೆಕ್ಸಿ ಕಾಮೆಂಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.

ವಿವಾದದ ಬಳಿಕ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಕಮ್’ಬ್ಯಾಕ್ ಮಾಡಿದ್ದ ಪಾಂಡ್ಯ, ಇದೀಗ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಮತ್ತೆ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಹಾರ್ದಿಕ್ ಟ್ಯಾಟೂವೊಂದನ್ನು ತಮ್ಮ ಕೈ ಹಾಕಿಸಿಕೊಂಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

3 ವಾರದಲ್ಲಿ ಹಾರ್ದಿಕ್ ಪಾಂಡ್ಯ 2019ರ ಐಪಿಎಲ್ ಭವಿಷ್ಯ ನಿರ್ಧಾರ!

ಬರೋಡ ಮೂಲದ ಹಾರ್ದಿಕ್ ಪಾಂಡ್ಯ ತಮ್ಮ ಬಲಗೈ ಮೇಲೆ ಭಾರತದ 16 ಭಾಷೆಗಳಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಬೇರೆ-ಬೇರೆ ಕಡೆ ಹೋದಾಗ ಹುಡುಗಿಯರ ಪರಿಚಯ ಮಾಡಿಕೊಳ್ಳಲು ಸಮಯ ವ್ಯರ್ಥವಾಗದಂತೆ ಹೀಗೆ ಮಾಡಿದ್ದಾರೆ ಎಂದಿದ್ದರೆ, ಮತ್ತೆ ಕೆಲವರು, ಎರಡು ರುಪಾಯಿ ನೋಟಿಗೆ RBI ಗವರ್ನರ್ ಸಹಿಯೊಂದೇ ಬಾಕಿ ಇದೆ ಎಂದು ಕಾಲೆಳೆದಿದ್ದಾರೆ.

’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

ಇನ್ನು ಕೆಲವರು ಟ್ಯಾಟೂ ಕಲಾವಿದ ಗೂಗಲ್ ಟ್ರಾನ್ಸ್’ಲೇಟ್ ಮೊರೆಹೋಗಿದ್ದಾರೆ ಎಂದು ಕೀಟಲೆ ಮಾಡಿದ್ದಾರೆ. ಯಾಕೆಂದರೆ ಕನ್ನಡದಲ್ಲಿ ಹಾರ್ದಿಕ್ ಎಂದು ಬರೆಯುವ ಬದಲು ಹಾರ್ಡಿಕ್ ಎಂದು ಬರೆದಿರುವುದೇ ಸಾಕ್ಷಿ. 

ಟ್ವಿಟರಿಗರು ಹೇಗೆಲ್ಲಾ ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದಾರೆ ಎನ್ನುವುದನ್ನು ನೀವೇ ನೋಡಿ...