ವಿಂಬಲ್ಡನ್: 4ನೇ ಸುತ್ತಿಗೆ ಹಾಲಿ ಚಾಂಪಿಯನ್ ಆಲ್ಕರಜ್ ಲಗ್ಗೆ
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಹಾಗೂ ಮಾಜಿ ಚಾಂಪಿಯನ್ ಎಲೆನಾ ರಬೈಕೆನಾ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಲಂಡನ್: ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ ನಾಲ್ಕನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ನಂ.3ನೇ ಶ್ರೇಯಾಂಕಿತ ಆಲ್ಕರಜ್, ಅಮೆರಿಕದ ಫ್ರಾನ್ಸಿಸ್ ಟಿಯಾಪೊ ವಿರುದ್ಧ 5-7, 6-2, 4-6, 7-6, 6-3 ಸೆಟ್‌ಗಳಲ್ಲಿ ಗೆದ್ದರು.
ಇನ್ನು ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಹಾಗೂ ಮಾಜಿ ಚಾಂಪಿಯನ್ ಎಲೆನಾ ರಬೈಕೆನಾ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ಪೋಲೆಂಡ್‌ನ ಸ್ವಿಯಾಟೆಕ್, ಶ್ರೇಯಾಂಕ ರಹಿತ ಸರ್ಬಿಯಾದ ಪೆಟ್ರಾ ಮಾರ್ಟಿಕ್ ವಿರುದ್ಧ 6-4, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದೇ ವೇಳೆ ವಿಶ್ವ ನಂ.4, ಕಜಕಸ್ತಾನದ ರಬೈಕೆನಾ ಅವರು ಜರ್ಮನಿಯಾ ಲಾರಾ ಸೀಗೆಮಂಡ್ ವಿರುದ್ಧ 6-3, 3-6, 6-3 ಸೆಟ್‌ಗಳಲ್ಲಿ ಗೆದ್ದು ಮುಂದಿನ ಸುತ್ತು ಪ್ರವೇಶಿಸಿದರು.
ಟಿ20: ದಕ್ಷಿಣ ಆಫ್ರಿಕಾ ಎದುರು ಹೋರಾಡಿ ಸೋತ ಭಾರತ ಮಹಿಳಾ ತಂಡ
ಪುರುಷರ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಕೂಡಾ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಆದರೆ 11ನೇ ಶ್ರೇಯಾಂಕಿತ, ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಸೋತು ಅಭಿಯಾನ ಕೊನೆಗೊಳಿಸಿದರು.
ಯೂಕಿ ಜೋಡಿಗೆ ಸೋಲು
ಭಾರತದ ಯೂಕಿ ಭಾಂಬ್ರಿ-ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಪುರುಷರ ಡಬಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಕೆವಿನ್ ಕ್ರಾವಿಟ್ಜ್-ಟಿಮ್ ಪುಟ್ಜ್ ವಿರುದ್ಧ 6-4, 4-6, 3-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.
ಏಷ್ಯನ್ ಸ್ಕ್ವ್ಯಾಶ್ ಕೂಟ: ಭಾರತ ಶುಭಾರಂಭ
ಜೊಹೊರ್(ಮಲೇಷ್ಯಾ): ಇಲ್ಲಿ ಆರಂಭಗೊಂಡ ಏಷ್ಯನ್ ಡಬಲ್ಸ್ ಸ್ಕ್ವ್ಯಾಶ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಮೊದಲ ದಿನ ಭಾರತ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿತು. ಪುರುಷರ ಡಬಲ್ಸ್‌ನಲ್ಲಿ ಫಿಲಿಪ್ಪೀನ್ಸ್ ಜೋಡಿ ವಿರುದ್ಧ ಅಭಯ್-ಸೆಂಥಿಲ್ ಕುಮಾರ್, ಮಹಿಳಾ ಡಬಲ್ಸ್‌ನಲ್ಲಿ ರಥಿಕಾ-ಪೂಜಾ ಇಂಡೋನೇಷ್ಯಾ ಜೋಡಿ ವಿರುದ್ಧ ಗೆದ್ದರೆ, ಹಾಂಕಾಂಗ್ ಜೋಡಿ ವಿರುದ್ಧ ಸೋಲನುಭವಿಸಿತು. ಮಿಶ್ರ ಡಬಲ್ಸ್‌ನಲ್ಲಿ ಅಭಯ್-ಜೋಶ್ನಾ ಚಿನ್ನಪ್ಪ ಫಿಲಿಪ್ಪೀನ್ಸ್ ಹಾಗೂ ಸಿಂಗಾಪೂರ ಜೋಡಿಗಳ ವಿರುದ್ಧ ಜಯಭೇರಿ ಬಾರಿಸಿತು.
ಏಷ್ಯನ್ ಬಿಲಿಯಾರ್ಡ್ಸ್ ಫೈನಲ್‌ಗೆ ಪಂಕಜ್ ಲಗ್ಗೆ
ರಿಯಾದ್: ಭಾರತದ ತಾರಾ ಬಿಲಿಯಾರ್ಡ್ಸ್ ಪಟು ಪಂಕಜ್ ಅಡ್ವಾಣಿ ಏಷ್ಯನ್ ಬಿಲಿಯಾರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಪಂಕಜ್ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಶ್ರೀಕೃಷ್ಣ ಸೂರ್ಯನಾರಾಯಣ ಅವರನ್ನು ಪಂಕಜ್ 5-0 ಅಂತರದಲ್ಲಿ ಸೋಲಿಸಿದ್ದರು. 2022, 2023ರಲ್ಲೂ ಚಾಂಪಿಯನ್ ಆಗಿದ್ದ ಪಂಕಜ್, ಒಟ್ಟಾರೆ 10ನೇ ಬಾರಿ ಚಾಂಪಿಯನ್‌ಶಿಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.