ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ರೋಚಕ ಸೋಲು ಅನುಭವಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 12 ರನ್‌ ಸೋಲನುಭವಿಸಿದೆ. ಏಕದಿನ ಸರಣಿಯಲ್ಲಿ ಪ್ರವಾಸಿ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಟೀಂ ಇಂಡಿಯಾ, ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ ಸೋಲುಂಡಿತು.

ಶುಕ್ರವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 4 ವಿಕೆಟ್‌ಗೆ 189 ರನ್ ಕಲೆಹಾಕಿತು. ತಾಜ್ಮಿನ್‌ ಬ್ರಿಟ್ಸ್‌ 56 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್‌ನೊಂದಿಗೆ 81 ರನ್‌ ಸಿಡಿಸಿದರೆ, ಮಾರಿಯಾನೆ ಕಾಪ್‌ 33 ಎಸೆತಗಳಲ್ಲಿ 57, ನಾಯಕಿ ವೊಲ್ವಾರ್ಟ್‌ 33 ರನ್‌ ಸಿಡಿಸಿದರು. ಭಾರತದ ಪರ ಪೂಜಾ ವಸ್ತ್ರಾಕರ್‌ ಹಾಗೂ ರಾಧಾ ಯಾದವ್‌ ತಲಾ 2 ವಿಕೆಟ್‌ ಕಿತ್ತರು.

Scroll to load tweet…

ಮಗನೊಂದಿಗೆ ವಿಶ್ವಕಪ್‌ ಗೆಲುವು ಆಚರಿಸಿಕೊಂಡ ಹಾರ್ದಿಕ್‌ ಪಾಂಡ್ಯ, ಪತ್ನಿ ನತಾಶಾ ಮಿಸ್‌!

ಬೃಹತ್‌ ಗುರಿಯನ್ನು ಬೆನ್ನತ್ತಿದ ಭಾರತ, ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್‌ ಹೋರಾಟದ ಹೊರತಾಗಿಯೂ 4 ವಿಕೆಟ್‌ಗೆ 177 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು. ಆರಂಭಿಕ ಆಟಗಾರ್ತಿ ಸ್ಮೃತಿ 30 ಎಸೆತಗಳಲ್ಲಿ 46 ರನ್‌ ಸಿಡಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು.

ಆದರೆ ಹೇಮಲತಾ 14 ರನ್‌ ಗಳಿಸಲು 17 ಎಸೆತ ತೆಗೆದುಕೊಂಡರು. ಕೊನೆಯಲ್ಲಿ ಅಬ್ಬರಿಸಿದ ಜೆಮಿಮಾ(30 ಎಸೆತಗಳಲ್ಲಿ ಔಟಾಗದೆ 53) ಹಾಗೂ ಹರ್ಮನ್‌ಪ್ರೀತ್‌ ಕೌರ್‌(35) 4ನೇ ವಿಕೆಟ್‌ಗೆ 59 ಎಸೆತಗಳಲ್ಲಿ 90 ರನ್‌ ಜೊತೆಯಾಟವಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 2ನೇ ಪಂದ್ಯ ಭಾನುವಾರ ನಡೆಯಲಿದೆ.

ಸ್ಕೋರ್‌: 
ದ.ಆಫ್ರಿಕಾ 20 ಓವರಲ್ಲಿ 189/4 (ತಾಜ್ಮಿನ್‌ 81, ಮಾರಿಯಾನೆ 57, ಪೂಜಾ 2-23), 
ಭಾರತ 20 ಓವರಲ್ಲಿ 177/4 (ಜೆಮಿಮಾ 53*, ಸ್ಮೃತಿ 46, ಕ್ಲೆರ್ಕ್‌ 1-30)

ಐಸಿಸಿ ತಿಂಗಳ ಆಟಗಾರ ರೇಸಲ್ಲಿ ಬುಮ್ರಾ, ರೋಹಿತ್‌

ದುಬೈ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ನಾಯಕ ರೋಹಿತ್‌ ಶರ್ಮಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಐಸಿಸಿ ಜೂನ್‌ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ರೋಹಿತ್‌ ಟೂರ್ನಿಯಲ್ಲಿ 257 ರನ್‌ ಕಲೆಹಾಕಿದ್ದರೆ, ಬುಮ್ರಾ 15 ವಿಕೆಟ್‌ ಕಬಳಿಸಿದ್ದರು. ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ರೋಹಿತ್‌, ಬುಮ್ರಾ ಜೊತೆ ಅಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಾಜ್‌ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.