ವಿರಾಟ್ ಕೊಹ್ಲಿ ಯಾಕೆ ಇಷ್ಟ ಆಗ್ತಾರೆ? ಇಲ್ಲಿದೆ ವೀಡಿಯೋ

First Published 19, Jul 2018, 5:20 PM IST
Why We love team india captain virat kohli
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಕೊಹ್ಲಿ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಈ ವೀಡಿಯೋ ನೋಡಿದರೆ ನಿಮಗೆ ಕೊಹ್ಲಿ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ.

ಲಂಡನ್(ಜು.19): ಮೈದಾನಕ್ಕಿಳಿದರೆ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್. ತಂಡದ ಸೋಲನ್ನ ಕಿಂಚಿತ್ತು ಸಹಿಸಿದ ನಾಯಕ. ವಿಕೆಟ್ ಹಾಗೂ ಗೆಲುವಿನ ಸಂಭ್ರಮಾಚರಣೆ ಇತರರಿಗಿಂತ ಸ್ವಲ್ಪ ಹೆಚ್ಚು. ಕೆಲವೊಮ್ಮೆ ಕೊಹ್ಲಿಗೆ ಸೊಕ್ಕಿದೆ ಅನ್ನೋ ಮಾತುಗಳ ಕೇಬಂದಿದ್ದು ಇದೆ. ಮೈದಾನದಲ್ಲಿ ಕೊಹ್ಲಿಯನ್ನ ನೋಡಿ ಇದು ಕೊಹ್ಲಿ ವ್ಯಕ್ತಿತ್ವ ಎಂದು ಅಚ್ಚೊತ್ತುವುದು ಸುತಾರಂ ಸರಿಯಲ್ಲ.

ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಮೈದಾನದಾಚೆ ಕೊಹ್ಲಿ ಅತ್ಯಂತ ಸರಳ ವ್ಯಕ್ತಿ. ಕೊಹ್ಲಿ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ. ಕೆಲ ವಿಚಾರಗಳು ಕೊಹ್ಲಿ ಮೇಲಿನ ಪ್ರೀತಿಯನ್ನ ಮತ್ತಷ್ಟು ಇಮ್ಮಡಿಗೊಳಿಸುತ್ತದೆ.

ಟೀಂ ಇಂಡಿಯಾ ಹೊಟೆಲ್‌ನಿಂದ ತೆರಳುವ ವೇಳೆ ಮಹಿಳಾ ಅಭಿಮಾನಿಯೊಬ್ಬರು ಕ್ರಿಕೆಟಿಗರ ಅಟೋಗ್ರಾಫ್‌ಗಾಗಿ ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಹೊಟೆಲ್ ಮುಂದೆ ನಿಂತು ಟೀಂ ಇಂಡಿಯಾ ಬಹುತೇಕ ಎಲ್ಲಾ ಕ್ರಿಕೆಟಿಗರಲ್ಲಿ ಅಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಯಾರು ಕೂಡ ಸಹಿ ಹಾಕಲೇ ಇಲ್ಲ. ಕೊನೆಯದಾಗಿ ಹೊಟೆಲ್‌ನಿಂದ ಹೊರಬಂದ  ನಾಯಕ ಕೊಹ್ಲಿ ಮಹಿಳೆಗೆ ಅಟೋಗ್ರಾಫ್ ನೀಡಿದ್ದಾರೆ. ಈ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ.

 

 

ಇಂತಹ ಚಿಕ್ಕ ಚಿಕ್ಕ ಕಾರಣಗಳಿಂದಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಮುಂಬರುವ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿ ಅನ್ನೋದೆ ಅಭಿಮಾನಿಗಳ ಆಶಯ.

loader