Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ತನಿಖೆ ಆಗೋವರೆಗೆ ಬಾಯ್ಮುಚ್ಚಿಕೊಂಡಿರಿ, ಸಭಾಪತಿ ಹೊರಟ್ಟಿ

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ ನಮ್ಮ ಹಾಗೂ ದೇಶದ ದುರ್ದೈವ. ಸುಸಂಸ್ಕೃತ ನಾಡು ಕರ್ನಾಟಕದಲ್ಲಿ ಈ ರೀತಿಯ ಪ್ರಕರಣ ನಡೆಯಬಾರದಿತ್ತು. ಇದನ್ನು ಇಡೀ ಜಗತ್ತು ನೋಡುತ್ತಿದೆ. ನಮಗೆ ನಾಚಿಕೆ ಆಗುತ್ತಿದೆ. ಮರ್ಯಾದೆ ಇರುವವರು ರಾಜಕಾರಣದಲ್ಲಿ ಇರಬಾರದು ಅನಿಸುತ್ತದೆ: ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

Vidhan Parishat Speaker Basavaraj Horatti React to Prajwal Revanna Pendrive Case grg
Author
First Published May 11, 2024, 7:11 AM IST

ಬೆಂಗಳೂರು(ಮೇ.11):  ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ನಾಚಿಕೆ ಹುಟ್ಟಿಸುತ್ತಿದೆ. ಈ ವಿಚಾರವಾಗಿ ನಿತ್ಯವೂ ಪರ ವಿರೋಧ ಮಾತನಾಡುವ ಬದಲು ತನಿಖೆ ನಡೆದು ಕೋರ್ಟ್‌ನಲ್ಲಿ ತೀರ್ಪು ಬರುವವರೆಗೂ ಎಲ್ಲರೂ ಬಾಯಿ ಮುಚ್ಚಿಕೊಂಡು ಇರುವುದು ಒಳ್ಳೆಯದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧ ಮುಂಭಾಗದ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ ನಮ್ಮ ಹಾಗೂ ದೇಶದ ದುರ್ದೈವ. ಸುಸಂಸ್ಕೃತ ನಾಡು ಕರ್ನಾಟಕದಲ್ಲಿ ಈ ರೀತಿಯ ಪ್ರಕರಣ ನಡೆಯಬಾರದಿತ್ತು. ಇದನ್ನು ಇಡೀ ಜಗತ್ತು ನೋಡುತ್ತಿದೆ. ನಮಗೆ ನಾಚಿಕೆ ಆಗುತ್ತಿದೆ. ಮರ್ಯಾದೆ ಇರುವವರು ರಾಜಕಾರಣದಲ್ಲಿ ಇರಬಾರದು ಅನಿಸುತ್ತದೆ ಎಂದು ತಿಳಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌: 2ನೇ ರೇಪ್‌ ಕೇಸಿನಲ್ಲೂ ಜಡ್ಜ್‌ ಮುಂದೆ ಸಂತ್ರಸ್ತೆಯ ಹೇಳಿಕೆ

 ಈ ಬಗ್ಗೆ ದಿನವೂ ಪರ ವಿರೋಧ ಮಾತನಾಡುವ ಬದಲು ಕಾನೂನಿದೆ, ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡು ಅದರ ವರದಿ ಮೇಲೆ ನ್ಯಾಯಾಲಯ ಏನು ತೀರ್ಪು ನೀಡುತ್ತದೆಯೋ ಕಾಯಬೇಕು. ಅಲ್ಲಿಯವರೆಗೆ ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದರು.

Latest Videos
Follow Us:
Download App:
  • android
  • ios