ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.
ಜಮೈಕಾ(ಮೇ.16): ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಮ್ಮ ಫಿಟ್ಮೆಸ್ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ. ವಿಶೇಷ ಅಂದರೆ ಗೇಲ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ದೈನಂದಿನ ಜಿಮ್ ಬದಲು ಇದೀಗ ಭಾರತೀಯ ಯೋಗ ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ಕ್ರಿಸ್ ಗೇಲ್‌ಗೆ ಹೊಡೀತು ಜಾಕ್ ಪಾಟ್!
ಕೊನೆಯ ವಿಶ್ವಕಪ್ ಟೂರ್ನಿ ಆಡಲ ಸಜ್ಜಾಗಿರುವ ಗೇಲ್ ಅತ್ಯುತ್ತಮ ಪ್ರದರ್ಶನ ನೀಡೋ ಗುರಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಫಿಟ್ನೆಸ್ ಜೊತೆಗೆ ಮನೋಭಲ ಹಾಗೂ ಆತ್ಮವಿಶ್ವಾಸಕ್ಕಾಗಿ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಜಿಮ್‌ನಿಂದ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಆದರೆ ಮಾನಸಿಕ ಸ್ಥಿತಿಗತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಯೋಗದಿಂದ ಕ್ರಿಕೆಟಿಗರ ಪ್ರದರ್ಶನವೂ ಉತ್ತಮವಾಗಲಿದೆ ಎಂದು ಗೇಲ್ ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಜತೆ ಕನ್ನಡಿಗನನ್ನು ಹೋಲಿಸಿದ ಕ್ರಿಸ್ ಗೇಲ್..!
ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅಬ್ಬರಿಸಿದ ಗೇಲ್, 490 ರನ್ ಸಿಡಿಸಿದ್ದಾರೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. 5ನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಗೇಲ್, ಪ್ರತಿಷ್ಠಿತ ಟೂರ್ನಿ ಬಳಿಕ ಎಕದಿನ ಮಾದರಿಗೆ ವಿದಾಯ ಹೇಳಲಿದ್ದಾರೆ.
