ಜಮೈಕಾ(ಮೇ.07): ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ಈಗಾಗಲೇ ತಯಾರಿ ಆರಂಭಿಸಿದೆ. ಪ್ರಶಸ್ತಿ ಮೇಲೆ ಕಣ್ಣಿಟ್ಟಿರೋ ವಿಂಡೀಸ್ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ಟೂರ್ನಿ ಆಡಿ ತವರಿಗೆ ವಾಪಾಸ್ಸಾಗಿರುವ ಕ್ರಿಸ್ ಗೇಲ್‌ಗೆ ಇದೀಗ ಜಾಕ್ ಪಾಟ್ ಹೊಡೆದಿದೆ.

ಇದನ್ನೂ ಓದಿ: ಈ ವಿಶ್ವಕಪ್‌ನಲ್ಲಿ ಬೆಸ್ಟ್ ಬೌಲರ್ ಯಾರು?ಆಸ್ಕ್ ಯುವಿ!

ವೆಸ್ಟ್ ಇಂಡೀಸ್ ವಿಶ್ವಕಪ್ ತಂಡದ ಉಪನಾಯಕನ್ನು ಆಯ್ಕೆ ಮಾಡ ಲಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಉಪನಾಯಕನಾಗಿ ಕ್ರಿಸ್ ಗೇಲ್ ಆಯ್ಕೆ ಮಾಡಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಜಾಸನ್ ಹೋಲ್ಡರ್ ವಿಂಡೀಸ್ ತಂಡವನ್ನು ಮುನ್ನಡೆಸಿದ್ದರೆ, ಗೇಲ್ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:'ಭಾರತಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ'

2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಸ್ ಗೇಲ್ ಏಕದಿನ ಮಾದರಿಗೆ ವಿದಾಯ ಹೇಳಲಿದ್ದಾರೆ. 289 ಏಕದಿನ ಪಂದ್ಯದಿಂದ ಗೇಲ್  10,151 ರನ್ ಸಿಡಿಸಿದ್ದಾರೆ. ಇನ್ನು ಗೇಲ್ 2015ರ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ದ ಕರಿಯರ್ ಬೆಸ್ಟ್ ಸ್ಕೋರ್  215 ರನ್ ಸಿಡಿಸಿದ್ದಾರೆ.