ನವದೆಹಲಿ(ಏ.30): ವಿರಾಟ್‌ ಕೊಹ್ಲಿ ಬಳಿಕ ಭಾರತೀಯ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಆಗಿ ಪ್ರಜ್ವಲಿಸುವ ಸಾಮರ್ಥ್ಯ ಕರ್ನಾಟಕದ ಕೆ.ಎಲ್‌.ರಾಹುಲ್‌ಗಿದೆ ಎಂದು ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅಭಿಪ್ರಾಯಿಸಿದ್ದಾರೆ. 

ರಾಹುಲ್ ಏಕಾಂಗಿ ಹೋರಾಟ ವ್ಯರ್ಥ- SRHಗೆ 45 ರನ್ ಗೆಲುವು!

ಸಂದರ್ಶನವೊಂದರಲ್ಲಿ ಮಾತನಾಡಿರುವ ಗೇಲ್‌, ‘ಕೊಹ್ಲಿ ರೀತಿ ಅತ್ಯುತ್ತಮ ಆಟವಾಡಬಲ್ಲ ಆಟಗಾರ ಎಂದರೆ ನನಗೆ ತಕ್ಷಣಕ್ಕೆ ನೆನಪಾಗುವುದು ರಾಹುಲ್‌. ಅವರಲ್ಲಿ ಆ ಪ್ರತಿಭೆ, ಸಾಮರ್ಥ್ಯವಿದೆ. ಆದರೆ ಅವರು ಒತ್ತಡಕ್ಕೆ ಸಿಲುಕದೆ, ತಮ್ಮ ಆಟದ ಕಡೆ ಹೆಚ್ಚು ಗಮನ ಹರಿಸುತ್ತಾ, ಯಾರೊಂದಿಗೂ ಪೈಪೋಟಿಗೆ ಬೀಳದೆ ಆಡಬೇಕಷ್ಟೆ’ ಎಂದು ಹೇಳಿದ್ದಾರೆ. ರಾಹುಲ್‌ ಹಾಗೂ ಗೇಲ್‌ ಸದ್ಯ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಪರ ಆಡುತ್ತಿದ್ದಾರೆ.

ನಿರಾಸೆ ಬೇಡ; RCB ಅಭಿಮಾನಿಗಳಿಗಿದು ಗುಡ್ ನ್ಯೂಸ್!

ಕೆ.ಎಲ್ ರಾಹುಲ್ 12ನೇ ಆವತ್ತಿಯ ಐಪಿಎಲ್’ನಲ್ಲಿ ಇದುವರೆಗೂ 12 ಪಂದ್ಯಗಳನ್ನಾಡಿ 57ರ ಸರಾಸರಿಯಲ್ಲಿ 1 ಶತಕ ಮತ್ತು 5 ಅರ್ಧಶತಕ ಸಹಿತ 520 ರನ್ ಬಾರಿಸಿದ್ದು, ಪ್ರಸ್ತುತ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಸನ್’ರೈಸರ್ಸ್ ವಿರುದ್ಧ 56 ಎಸೆತಗಳಲ್ಲಿ 79 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.